ಬೆಲ್ಶಮಿಯೆಡಿಯ ವೈಟಿಯೈ (Nees) Benth. ex J. Hk. - ಲಾರೇಸಿ

Synonym : ಹಾಸಿಯ ವೈಟಿಯೈ Nees

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ;ಅಗ್ರದಲ್ಲಿನ ಅಂಕುರಗಳು ಉದ್ದವಾಗಿರುತ್ತವೆ ಮತ್ತು ಭರ್ಜಿಯಾಕಾರದ ಶಲ್ಕೆಗಳಿಂದ ರಕ್ಷಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿನ ಮಾದರಿಯಿಂದ ಅಭಿಮುಖ ಅಥವಾ ಕೆಲವು ವೇಳೆ ಉಪ-ಅಭಿಮುಖ ಮಾದರಿಯಲ್ಲಿರುತ್ತವೆ ಮತ್ತು ಕುಡಿಕೊಂಬೆಗಳ ತುದಿಯಲ್ಲಿರುತ್ತವೆ; ತೊಟ್ಟುಗಳು 0.5-1.8 ಸೆಂ.ಮೀ. ವರೆಗಿನ ಉದ್ದವಿದ್ದು ಸ್ವಲ್ಪ ಮಟ್ಟಿಗೆ ಕಾಲುವೆಗೆರೆಯನ್ನು ಹೊಂದಿರುತ್ತವೆ ;ಪತ್ರಗಳು 5-13 x 2.5-6 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತದಿಂದ ಸಂಕುಚಿತ ಅಂಡವೃತ್ತದವರೆಗಿನ ಆಕಾದಲ್ಲಿರುತ್ತವೆ. ಪತ್ರದ ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿರುತ್ತದೆ ಮತ್ತು ಹಲವು ವೇಳೆ ಅಗ್ರ ತಿರುಚಿಕೊಂಡಿರುತ್ತದೆ;ಬುಡ ಚೂಪಾದುದರಿಂದ ಬೆಣೆಯಾಕಾರದ ಮಾದರಿಯನ್ನು ಹೊಂದಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈ ಹೊಳಪನ್ನು ಹೊಂದಿ ರೋಮರಹಿತವಾಗಿರುತ್ತದೆ; ಹಿಂಡಿದಾಗ ಪತ್ರಗಳು ಸುವಾಸನೆ ಯನ್ನು ಬೀರುತ್ತದೆ;ಎರಡನೇ ದರ್ಜೆಯ ನಾಳಗಳು 7-12 ಜೋಡಿಗಳಿದ್ದು ಕವಲೊಡೆದಿರುತ್ತವೆ ಮತ್ತು ಹೆಚ್ಚೂ ಕಡಿಮೆ ತೀಕ್ಷ್ಣವಾದ ಕೋನ ಹೊಂದಿರುತ್ತವೆ. ಮೂರನೇ ದರ್ಜೆಯ ನಾಳಗಳು ದೃಢವಾದ ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಅಕ್ಷಾಕಂಕುಳಿನಲ್ಲಿನ ಮತ್ತು ಉಪ-ತುದಿಯಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿದ್ದು ರೋಮರಹಿತವಾಗಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಅಂಡವೃತ್ತಾಕಾರದಲ್ಲಿದ್ದು 2 ಸೆಂಮೀ. ಉದ್ದವನ್ನು ಹೊಂದಿರುತ್ತವೆ; ಕಾಯಿಗಳ ಪುಷ್ಪಾವರಣದ ದಳಗಳು ಉದುರಿ ಹೋಗುತ್ತವೆ.

ಜೀವಪರಿಸ್ಥಿತಿ :

ಮೇಲ್ಛಾವಣಿ ಮರಗಳಾಗಿ ಉನ್ನತ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮತ್ತು ಉಪ-ಮೇಲ್ಛಾಛಾವಣಿ ಮರಗಳಾಗಿ ಕಡಿಮೆ ಮತ್ತು ಮಧ್ಯಮ ಎತ್ತರದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿಯೂ ಬೆಳೆಯುವ ಈ ಪ್ರಭೇದ 400 ಮತ್ತು 2000 ಮೀ.ನಡುವಿನ ಎತ್ತರದ ಪ್ರದೇಶಗಳಲ್ಲಿ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Hooker, Flora of British India 5:124.1886;Gamble,Fl.Madras 2:1221. 1993(rep.ed.);Sasidharan, Biodiversity documentation for Kerala Flowering Plants, part 6: 395. 2004; Saldanha, Fl. Karnataka 1:60. 1984

Top of the Page