ಆರ್ಟೋಕಾರ್ಪಸ್ ಹಿರ್ಸುಟಸ್ Lam. - ಮೊರೇಸಿ

ಪರ್ಯಾಯ ನಾಮ : ಆರ್ಟೋಕಾರ್ಪಸ್ ಹಿರ್ಸುಟ Lam.

Vernacular names : Tamil: ಅಂಜಿಲಿ;ಅಯನಿ;ಐನಿMalayalam: ಹಲಸು

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 35 ಮೀ. ಎತ್ತರದವರೆಗಿನ ದೊಡ್ಡ ಗತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಬೂದು ಬಣ್ಣದಲ್ಲಿದ್ದು ಎಳೆಯದಾಗಿದ್ದಾಗ ನಯವಾಗಿರುತ್ತದೆ ನಂತರ ಶಲ್ಕೆ/ಚಕ್ಕೆ ರೂಪದಲ್ಲಿರುತ್ತದೆ ಮತ್ತು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಕಂದು ಮಿಶ್ರಿತ ಹಳದಿ ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ ಮತ್ತು ವಲಯಾಕಾರದ ಗುರುತುಗಳಿಂದ ಕೂಡಿರುತ್ತವೆ.
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಕಾವಿನೆಲೆಗಳು 2.5 ಸೆಂ.ಮೀ.ವರೆಗಿನ ಉದ್ದವಿದ್ದು ಭರ್ಜಿಯ ಆಕಾರದಲ್ಲಿದ್ದು ಕಂದು ಮಿಶ್ರಿತ ಹಳದಿ ಬಣ್ಣದ ಒರಟು ರೋಮಗಳಿಂದ ಕೂಡಿರುತ್ತವೆ ಮತ್ತು ವಲಯಾಕಾರದ ಗುರುತುಗಳನ್ನುಳಿಸಿ ಉದುರಿ ಹೋಗುತ್ತವೆ;ತೊಟ್ಟುಗಳು 1.3 -3 ಸೆಂ.ಮೀ. ಉದ್ದ ಹೊಂದಿದ್ದು ಧೃಢವಾಗಿರುತ್ತವೆ ,ಉಪ-ದುಂಡಾಗಿರುವ ಅಥವಾ ಸಪಾಟ ಪೀನಮಧ್ಯದ ಆಕಾರವನ್ನು ಹೊಂದಿರುತ್ತವೆ ಮತ್ತು ಒರಟು ರೋಮಗಳಿಂದ ಕೂಡಿರುತ್ತವೆ;ಪತ್ರಗಳು 10 -30.5 X 5 – 14 ಸೆಂ.ಮೀ. ಗಾತ್ರವಿದ್ದು ಸಾಮಾನ್ಯವಾಗಿ ಅಂಡಾಕಾರದಿಂದ ವಿಶಾಲ ಅಂಡವೃತ್ತದವರೆಗಿನ ಆಕಾರದಲ್ಲಿರುತ್ತವೆ, ಪತ್ರದ ತುದಿ ಉಪ-ಚೂಪು ಅಥವಾ ಕೊಂಚವಾಗಿ ಕ್ರಮೇಣ ಚೂಪಾಗುವ ರೀತಿಯಲ್ಲಿದ್ದು ದುಂಡಾದ ಅಥವಾ ಉಪ-ಚೂಪಾದ ಬುಡವನ್ನು ಹೊಂದಿರುತ್ತವೆ, ಅಂಚು ನಯ ಅಥವಾ ತರಂಗಿತವಾಗಿರುತ್ತದೆ (ಎಳೆಯದಾಗಿದ್ದಾಗ ಹಾಲೆಗಳನ್ನು ಹೊಂದಿರುತ್ತವೆ)ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿರುತ್ತವೆ, ಪತ್ರಗಳು ಒಣಗಿದಾಗ ಕಂದು ಬಣ್ಣದಲ್ಲಿರುತ್ತವೆ, ಎಳೆಯದಾಗಿದ್ದಾಗ ದಟ್ಟವಾದ ಒರಟು ರೋಮಗಳಿಂದ ಕೂದಿದ್ದು ನಂತರ ಮಧ್ಯನಾಳ ಮತ್ತು ಇತರೆ ನಾಳಗಳನ್ನು ಹೊರತು ಪಡಿಸಿ ರೋಮರಹಿತವಾಗಿರುತ್ತವೆ;ಮಧ್ಯ ನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲಜಾಲ ಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳು;ಗಂಡು ಹೂಗಳು ಅಕ್ಷಾಕಂಕುಳಿನಲ್ಲಿದ್ದು, 14 ಸೆಂ.ಮೀ.ಉದ್ದವಿದ್ದು ತೂಗಾಡುವ ಕದಿರುಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ಅಕ್ಷಾಕಂಕುಳಿನ ಕದಿರುಮಂಜರಿಯಲ್ಲಿರುತ್ತವೆ;
ಕಾಯಿ / ಬೀಜ : ಸಂಯುಕ್ತ ಫಲ (ತಿರುಳುಳ್ಳ ಸಂಯುಕ್ತ ಫಲ) ಉಪ-ಗೋಳಾಕಾರ ಅಥವಾ ಅಂಡವೃತ್ತದ ಆಕಾರದಲ್ಲಿದ್ದು ಉದ್ದನೆಯ ಗಟ್ಟಿಯಾದ ಮುಳ್ಳುಗಳ ಸಮೇತವಿರುತ್ತದೆ ಹಾಗೂ ಕಳಿತಾಗ ಕಿತ್ತಳೆ ಬಣ್ಣ ಹೊಂದಿರುತ್ತದೆ; ಬೀಜಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು ಅಂಡದ ಆಕಾರ ಹೊಂದಿರುತ್ತವೆ.

ಜೀವಪರಿಸ್ಥಿತಿ :

900 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ಭಗ್ನಗೊಂಡ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇಧ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Encycl. 3:210.1879 ;Gamble, Fl. Madras 3:1369. 1998(rep.ed.); Sasidharan, Biodiversity documentation for Kerala- Flowering Plants, part 6:437.2004.

Top of the Page