ಆರ್ಟೋಕಾರ್ಪಸ್ ಹೆಟೆರೋಫಿಲ್ಲಸ್ Lam. - ಮೊರೇಸಿ

ಪರ್ಯಾಯ ನಾಮ : ಆರ್ಟೋಕಾರ್ಪಸ್ ಇಂಟೆಗ್ರಿಫೋಲಿಯಸ್ L.

Vernacular names : Tamil: ಪಿಲವುMalayalam: ಅಲಸು;ಹಲಸು;

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗಿನ ಹರಿದ್ವರ್ಣ ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ಕಾಂಡ ಸಾಮಾನ್ಯವಾಗಿ ಗುಬುಡುಗಳ ಸಮೇತವಿರುತ್ತದೆ;ತೊಗಟೆ ಕಪ್ಪು ಮಿಶ್ರಿತ ಬೂದು ಬಣ್ಣದಲ್ಲಿದ್ದು ಕೆಂಪು ಮಿಶ್ರಿತ ಕಂದು ಬಣ್ಣದ ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ಅನಿಯತವಾಗಿ ಚಕ್ಕೆಯೇಳುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ
ಜಿನುಗು ದ್ರವ : ಜಿನುಗು ದ್ರವ ಬಿಳಿ ಬಣ್ಣದಲ್ಲಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದುಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಚತುರಸ್ರ ಅಥವಾ ಭರ್ಜಿಯ ಆಕಾರದಲ್ಲಿದ್ದು 0.5 X 1.6 ಸೆಂ.ಮೀ. ಗಾತ್ರ ಹೊಂದಿದ್ದು ವಲಯಾಕಾರದ ಉದುರು ಗುರುತುಗಳನ್ನು ಉಳಿಸುತ್ತವೆ; ತೊಟ್ಟುಗಳು 1-3 ಸೆಂ.ಮೀ. ಉದ್ದ ಹೊಂದಿದ್ದು ಸಪಾಟ ಪೀನಮಧ್ಯದ ಆಕಾರವನ್ನು ಹೊಂದಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 9 -23.5 X 5 – 12 ಸೆಂ.ಮೀ. ಗಾತ್ರವಿದ್ದು ಸಾಮಾನ್ಯವಾಗಿ ಸಂಕುಚಿತ - ಬುಗುರಿ ಕೆಲವು ವೇಳೆ ಅಂಡವೃತ್ತದ ಆಕಾರದಲ್ಲಿರುತ್ತವೆ, ಪತ್ರದ ತುದಿ ಕೊಂಚ ಕ್ರಮೇಣ ಚೂಪಾಗುವ ಅಥವಾ ಚೂಪಲ್ಲದ ರೀತಿಯಲ್ಲಿದ್ದು ಬೆಣೆಯಾಕಾರದ ಬುಡವನ್ನು ಹೊಂದಿರುತ್ತವೆ, ಅಂಚು ನಯವಾಗಿರುತ್ತದೆ(ಸಸಿಗಳಲ್ಲಿ 3-ಹಾಲೆಗಳಿರುತ್ತವೆ),ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು ಪತ್ರದ ಮೇಲ್ಭಾಗ ಹಸಿರಾಗಿದ್ದು ರೋಮರಹಿತವಾಗಿರುತ್ತದೆ;ಮಧ್ಯ ನಾಳ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 10 ಜೋಡಿಗಳಿದ್ದು ಆರೋಹಣ ಮಾದರಿಯಲ್ಲಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲವಾಗಿ ಲಂಬಕೋನಕ್ಕೆ ಅಡ್ಡವಾಗಿಎಲೆ ದಿಂಡಿಗೆ ಅಡ್ಡವಾಗಿ ಕೂಡುವ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಕದಿರುಮಂಜರಿಯಲ್ಲಿದ್ದು ಆವರಣ ಪತ್ರಕದ ತರಹದ ಪತ್ರಕಗಳಿಂದ ಆವರಿಸಿರುತ್ತವೆ; ಗಂಡು ಹೂಗಳು ಎಳೆಯದಾದ ಕೊಂಬೆಗಳ ಮೇಲಿನ ಸಂಕುಚಿತ ವರ್ತುಲ ಸ್ಥಂಭ-ಚತುರಸ್ರದ ಆಕೃತಿಯುಳ್ಳ ಪುಷ್ಪದಳ ರಹಿತ ಏಕಲಿಂಗಿ ಪುಷ್ಪಗಳನ್ನೊಳಗೊಂಡ ಕದಿರು ಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ಸಾಮಾನ್ಯವಾಗಿ ಕಾಂಡದ ಮೇಲಿರುತ್ತವೆ.
ಕಾಯಿ / ಬೀಜ : ಸಂಯುಕ್ತ ಫಲ(ತಿರುಳುಳ್ಳ ಸಂಯುಕ್ತ ಫಲ) ದೊಡ್ಡ ಗಾತ್ರ ಹೊಂದಿದ್ದು ಸಣ್ಣದಾದ ಮತ್ತು ಗಟ್ಟಿಯಾದ ಮುಳ್ಳುಗಳ ಸಮೇತವಿರುತ್ತದೆ.

ಜೀವಪರಿಸ್ಥಿತಿ :

1000 ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಮತ್ತು ಅರೆ ನಿತ್ಯ ಹರಿದ್ವರ್ಣ ಕಾಡುಗಳ ಉಪ-ಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡು ಬರುತ್ತದೆ;ಸಾಮಾನ್ಯವಾಗಿ ಈ ಮರವನ್ನು ಬೆಳೆಯುತ್ತಾರೆ.

ವ್ಯಾಪನೆ :

ಉಷ್ಣವಲಯದ ಪ್ರದೇಶಗಳು;ಪಶ್ಚಿಮ ಘಟ್ಟದ ಎಲ್ಲಾ ಈ ಪ್ರಭೇಧ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಗ್ರಂಥ ಸೂಚಿ :

Encycl. 3:210.1879 ;Gamble, Fl. Madras 3:1369. 1998(rep.ed.); Sasidharan, Biodiversity documentation for Kerala- Flowering Plants, part 6:437.2004.

Top of the Page