ಅರಾಲಿಯ ಮಲಬಾರಿಕ Bedd. - ಅರಾಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆವಿಗೆ ಬೆಳೆಯುವ ಪೊದೆಗಳು ಅಥವಾ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಮುಳ್ಳುಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ದ್ವಿಗರಿರೂಪಿ ಸಂಯುಕ್ತ ಮಾದರಿಯವು ಹಾಗೂ ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು 60 ಸೆಂ.ಮೀ.ವರೆಗಿನ ಉದ್ದವನ್ನು ಹೊಂದಿರುತ್ತವೆ; ಕಾವಿನೆಲೆಗಳು ಎಲೆತೊಟ್ಟಿಗೆ ಅಂಟಿಕೊಂಡಿರುತ್ತವೆ; ಗರಿಗಳು 7 ರಿಂದ 11,ಅಕ್ಷದಿಂಡು ಮುಳ್ಳುಸಹಿತವಾಗಿರುತ್ತದೆ,ಕಿರುಎಲೆಗಳು ಪ್ರತಿ ಗರಿಯಲ್ಲಿ 5ರಿಂದ 9 ಸಂಖ್ಯೆಯಲ್ಲಿರುತ್ತವೆ ಹಾಗೂ ಹೆಚ್ಚೂ ಕಡಿಮೆ ತೊಟ್ಟುರಹಿತವಾಗಿರುತ್ತವೆ; ಪತ್ರಗಳು 5.5 – 10 X 1.8 – 3 ಸೆಂ.ಮೀ. ಗಾತ್ರ ಹಾಗೂ ಭರ್ಜಿಯ ಆಕಾರ ಮತ್ತು ಕ್ರಮೇಣ ಚೂಪಾಗುವ ತುದಿ ಹಾಗೂ ಚೂಪಾದ ಬುಡವನ್ನು ಹೊಂದಿರುತ್ತವೆ;ಎಲೆಯಂಚು ಗರಗಸ ದಂತಿತವಾಗಿದ್ದು ಸ್ಪಂದನಾಶೀಲ ರೋಮಗಳನ್ನೊಳಗೊಂಡ ಅಂಚನ್ನು ಹೊಂದಿರುತ್ತವೆ. ಎರಡನೇ ದರ್ಜೆಯ ನಾಳಗಳು 7 ರಿಂದ 8 ಜೋಡಿಗಳಿದ್ದು ಸ್ಪಂದನಾಶೀಲ ರೋಮಗಳ ಸಮೇತವಿರುತ್ತವೆ; ಮೂರನೇ ದರ್ಜೆಯ ನಾಳಗಳು ಸ್ಥೂಲವಾದ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ದೊಡ್ಡದಾದ ಹಾಗೂ ಹರಡಿದ ಸಂಯುಕ್ತ ಪೀಠಛತ್ರ ಮಾದರಿಯಲ್ಲಿದ್ದು ಪ್ರತಿ ಪೀಠಛತ್ರ 30 ಸಂಖ್ಯೆವರೆಗಿನ ಹೂಗಳನ್ನು ಹೊಂದಿರುತ್ತದೆ; ಹೂ ತೊಟ್ಟುಗಳು 2 ಸೆಂ.ಮೀ. ಉದ್ದವಿರುತ್ತವೆ;ಪುಷ್ಪದಳಗಳು ಹಸಿರು ಮಿಶ್ರಿತ ಬಿಳಿ ಬಣ್ಣದವು ಹಾಗೂ ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು 4 ರಿಂದ 5 ಕೋಶಗಳನ್ನು ಹೊಂದಿದ್ದು ಕೋನಯುಕ್ತವಾಗಿರುತ್ತವೆ; ಬೀಜಗಳು ಅದುಮಿದಂತಿರುತ್ತವೆ

ಜೀವಪರಿಸ್ಥಿತಿ :

700 ರಿಂದ 1200 ಮೀ ಮಧ್ಯಮ. ಎತ್ತರದವರೆಗಿನ , ತೆರೆದ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇಧ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೇಮಿತವಾದ ಈ ಸಸ್ಯ ದಕ್ಷಿಣ ಸಹ್ಯಾದ್ರಿಯಲ್ಲಿ ಬೆಳೆಯುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ(IUCN2000)

ಗ್ರಂಥ ಸೂಚಿ :

Bedd., Fl. Sylv.t.15.1871;Gamble,Fl. Madras 1:567.1997(rep.ed.);Sasidharan, Biodiversity documentation for Kerala- Flowering Plants, part 6: 106.2004.

Top of the Page