English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15 ಮೀ.ವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪು ಬಣ್ಣ ಹೊಂದಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ. ಕಾವಿನೆಲೆಗಳು ಚತುರಸ್ರ-ಭರ್ಜಿ ಆಕಾರದಲ್ಲಿದ್ದು ಚೂಪಾಗಿರುತ್ತವೆ ಹಾಗೂ ಉದುರಿ ಹೋಗುವಂತವು; ತೊಟ್ಟುಗಳು 0.7-1.3 ಸೆಂ.ಮೀ. ವರೆಗಿನ ಉದ್ದವಿದ್ದು ಕಾಲುವೆ ಗೆರೆ ಸಮೇತವಿರುತ್ತವೆ ಹಾಗೂ ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ; ಪತ್ರಗಳು 7.5 -17 X3-7.55 ಸೆಂ. ಮೀ. ಗಾತ್ರ, ಸಂಕುಚಿತ ಚತುರಸ್ರ ದಿಂದ ಹಿಡಿದು ಸಂಕುಚಿತ ಅಂಡವೃತ್ತ ಮಾದರಿಯ ಆಕಾರದಲ್ಲಿದ್ದು, ಮೊಂಡಾಗ್ರವುಳ್ಳ, ಹಂತ ಹಂತವಾಗಿ ಕ್ರಮೇಣ ಚೂಪಾಗುವುದರಿಂದ ಹಿಡಿದು ಬಾಲ ರೂಪಿ-ಕ್ರಮೇಣ ಚೂಪಾಗುವ ಮಾದರಿಯ ತುದಿ, ಚೂಪಾದುದರಿಂದ ಹಿಡಿದು ದುಂಡಾದ ಬುಡ, ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು 6 - 9 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ದುರ್ಬಲವಾಗಿ ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತಹ ಮಾದರಿಯವು. |
| ಪುಷ್ಪಮಂಜರಿ/ಹೂಗಳು : | ಹೂಗಳು ಏಕಲಿಂಗಿಗಳಾಗಿದ್ದು ಹೆಣ್ಣು ಮತ್ತು ಗಂಡು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ ಪುಷ್ಪದಳ ರಹಿತ ಏಕಲಿಂಗಿ ಹೂಗಳುಳ್ಳ ಕದಿರುಮಂಜರಿಗಳಲ್ಲಿರುತ್ತವೆ;ಹೆಣ್ಣು ಹೂಗಳು ಸಂಕ್ಷೇಪಗೊಂಡ ಕದಿರು ಮಂಜರಿಯಲ್ಲಿರುತ್ತವೆ. |
| ಕಾಯಿ /ಬೀಜ : | ಸಂಪುಟ ಫಲಗಳು ನಯವಾಗಿದ್ದು,ಗೋಳಾಕಾರ ಹೊಂದಿದ್ದು 1.3 ಸೆಂ.ಮೀ. ವರೆಗಿನ ಅಡ್ಡಗಳತೆಯನ್ನು ಹೊಂದಿರುತ್ತವೆ ಹಾಗೂ 2-4 ಬೀಜಗಳನ್ನೊಳಗೊಂಡಿರುತ್ತವೆ. |