ಅಪೊರೋಸ ಫ್ಯೂಸಿಫಾರ್ಮಿಸ್ Thw. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ ಹೊಂದಿದ್ದು ನಯವಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು,ಪರ್ಯಾಯ ಮತ್ತು ಸುತ್ತು ಜೋಡನಾ ಮಾದರಿಯಲ್ಲಿರುತ್ತವೆ. ಕಾವಿನೆಲೆಗಳುಉದುರಿಹೋಗುವ ಮಾದರಿಯವು; ತೊಟ್ಟುಗಳು 0.5-1 ಸೆಂ.ಮೀ. ಉದ್ದವಿದ್ದು ಕಾಲುವೆ ಗೆರೆಗಳನ್ನು ಹೊಂದಿರುತ್ತವೆ; ಪತ್ರಗಳು 5.5 - 8 X 3 – 5.5 ಸೆಂ ಮೀ. ಗಾತ್ರ; ಬುಗುರಿ ಅಥವಾ ದುಂಡಾಕಾರದಲ್ಲಿದ್ದು, ಚೂಪಲ್ಲದ ಅಥವಾ ದುಂಡಾದ ತುದಿಯಲ್ಲಿ ಕಚ್ಚುಳ್ಳ ತುದಿ, ಬೆಣೆಯಾಕಾರದ ಬುಡ, ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಉಬ್ಬಿಕೊಂಡಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 5 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ; ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ ಪುಷ್ಪದಳರಹಿತ ಏಕಲಿಂಗಿ ಹೂಗಳುಳ್ಳ ಕದಿರುಮಂಜರಿಗಳಲ್ಲಿರುತ್ತವೆ; ಹೆಣ್ಣು ಹೂಗಳು ಸಂಕುಚಿತವಾದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು 2 ಸೆಂ.ಮೀ. ಉದ್ದವಿದ್ದು, ಕದಿರಣಿಗೆ ರೂಪದಲ್ಲಿದ್ದು ಅಗ್ರದಲ್ಲಿ ಕೊಕ್ಕನ್ನು ಹೊಂದಿರುತ್ತವೆ; ಬೀಜಗಳು 2 ರಿಂದ 4.

ಗ್ರಂಥ ಸೂಚಿ :

Thwaites …..;Gamble, Fl. Madras 2:1309.1993(rep.ed.); Sasidharan, Biodiversity documentation for Kerala – Flowering plants, part 6, 410.2004.

Top of the Page