ಅಪೋಡೈಟೆಸ್ ಡಿಮಿಡಿಯೇಟ Meyer ex Arn. - ಐಕಾಸಿನೇಸಿ

Synonym : ಅಪೋಡೈಟೆಸ್ ಬೆಡ್ಡೋಮಿಯಾನ Mast.; ಅಪೋಡೈಟೆಸ್ ಬೆಂತಮಿಯಾನ Wt.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸ್ವಲ್ಪ ಮಟ್ಟಿಗೆ ಆನಿಕೆಗಳನ್ನುಳ್ಳ 25 ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ ಮತ್ತು ದೊಡ್ಡ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಮೃದು ತುಪ್ಪಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡಣಾ ಮಾದರಿಯಲ್ಲಿರುತ್ತವೆ; ತೊಟ್ಟುಗಳು 1.5 -2.5 ಸೆಂ.ಮೀ. ವರೆಗಿನ ಉದ್ದವಿರುತ್ತವೆ;ಪತ್ರಗಳು 6.5-10 X 2.5-5 ಸೆಂ.ಮೀ.ಗಾತ್ರ ಹೊಂದಿದ್ದು ಅಂಡವೃತ್ತದಿಂದ ಅಂಡವೃತ್ತ-ಅಂಡದ ಆಕಾರ ಹೊಂದಿದ್ದು, ಚೂಪಾದುದರಿಂದ ಕಿರಿದಾಗಿ ಕ್ರಮೇಣ ಚೂಪಾಗುವ ಕೆಲವು ವೇಳೆ ಚೂಪಾಗಿರದ ತುದಿ, ಅಸಮವಾದಬುಡ ಮತ್ತು ಹಿಂಸುರುಳಿ ಅಂಚನ್ನು ಹೊಂದಿರುತ್ತವೆ; ಮೇಲ್ಮೈ ತೊಗಲನ್ನೋಲುವ ಮಾದರಿಯಲಿದ್ದು ರೋಮರಹಿತವಾಗಿರುತ್ತದೆ, ಹಲವು ವೇಳೆ ಪತ್ರದ ಮೇಲ್ಭಾಗದ ಮಧ್ಯನಾಳ ಸೂಕ್ಷ್ಮವಾದ ಮೃದು ತುಪ್ಪಳದಿಂದ ಕೂಡಿರುತ್ತದೆ; ಪತ್ರದ ಮೇಲ್ಮೈ ಒಣಗಿದಾಗ ಕಪ್ಪು ಬಣ್ಣದಲ್ಲಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 6-10 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಬಿಳಿ ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ನೀಳಛತ್ರ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ ಮತ್ತು ಅನೇಕ ಕೇಸರಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಡ್ರೂಪ್ಗಳು ಅಂದಾಜು 1.5 ಸೆಂ.ಮೀ. ಉದ್ದವಿರುತ್ತವೆ ಮತ್ತು ಓರೆಯಾದ ಅಂಡವೃತ್ತ ಆಕಾರದಲ್ಲಿದ್ದು ಸಂಕುಚಿತವಾಗಿರುತ್ತವೆ; ಬೀಜ ಒಂದಿದ್ದು ಬುಗುರಿಯಾಕಾರದಲ್ಲಿದ್ದು ಸಂಕುಚಿತವಾಗಿರುತ್ತದೆ.

ಜೀವಪರಿಸ್ಥಿತಿ :

1500 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಸಸ್ಯ ಕಂಡುಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಆಫ್ರಿಕ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Hooker, J. Bot. 3: 155.1840;Wt., Ic.1153;Gamble, Fl. Madras 1:197.1997 (Rep. Ed.);Sasidharan, Biodiversity documentation for Kerala- Flowering Plants, part 6 ,93. 2004;Saldanha, Fl. Karnataka 2:104. 1996.

Top of the Page