ಆಲ್ಸ್ಟೋನಿಯ ಸ್ಕೊಲಾರಿಸ್ (L.) R. Br. - ಅಪೋಸೈನೇಸಿ

Synonym : ಎಖೈಟಿಸ್ ಸ್ಕೊಲಾರಿಸ್ L.

ಕನ್ನಡದ ಪ್ರಾದೇಶಿಕ ಹೆಸರು : ಮದ್ದಾಲೆ, ದೊಡ್ಡಪಾಲ, ಹಾಲೆ, ಜಂತಲ್ಲ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30ಮೀ ಎತ್ತರದವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿ ವಾಯು ವಿನಿಮಯ ಬೆಂಡುರಂಧ್ರ ಸಮೇತವಾಗಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಸುತ್ತು ಜೋಡಣಾ ವಿನ್ಯಾಸದಲ್ಲಿರುತ್ತವೆ. ಕಿರುಕೊಂಬೆಗಳು ಗುಂಡಾಕಾರದಲ್ಲಿದ್ದು ರೋಮರಹಿತವಾಗಿರುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರವು ಹಾಲನ್ನು ಹೋಲುವ ಶ್ವೇತ ಬಣ್ಣ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ. ಒಂದು ಗಿಣ್ಣಿನಲ್ಲಿ 4 ರಿಂದ 7 ಅಸಮಗಾತ್ರದ ಎಲೆಗಳಿರುತ್ತವೆ; ಎಲೆ ತೊಟ್ಟುಗಳು 0.4 ರಿಂದ 1.5ಸೆಂ.ಮೀ. ಉದ್ದ; ಎಲೆ ಪತ್ರಗಳು 6-20 x 2.5-7ಸೆಂ.ಮೀ. ಗಾತ್ರದಲ್ಲಿದ್ದು ಇಕ್ಕಟ್ಟಾದ ಅಂಡವೃತ್ತ ಬುಗುರಿ ಭರ್ಜಿ ಸಮ್ಮಿಶ್ರದ ಆಕಾರ ಹೊಂದಿದ್ದು, ಗುಂಡಾದ ಅಥವಾ ದೀರ್ಘ ಕಚ್ಚುಳ್ಳ ಎಲೆತುದಿ ಹಾಗೂ ಬೆಣೆಯಾಕಾರದಿಂದ ಕಾಂಡದವರೆವಿಗೂ ವಿಸ್ತಾರಗೊಳ್ಳುವ ಎಲೆ ಬುಡವನ್ನು ಪಡೆದಿರುತ್ತವೆ. ಮುಟ್ಟಿದರೆ ತೊಗಲಿನ ಅಥವಾ ತೊಗಲನ್ನೋಲುವ ಮೇಲ್ಮೈ ಹೊಂದಿರುವ ಎಲೆಗಳು ಮೇಲ್ಭಾಗದಲ್ಲಿ ಹೊಳಪು ಹಾಗೂ ತಳಭಾಗದಲ್ಲಿ ಮಾಸಲು ಬೂದು ಹಸಿರು ಮಿಶ್ರದ ಬಣ್ಣವನ್ನು ಹೊಂದಿರುತ್ತವೆ; ಎರಡನೇ ದರ್ಜೆಯ ನಾಳಗಳು ಅನೇಕ, ತೀರಾ ಸನಿಹವಾದ ಸಮಾಂತರದಲ್ಲಿದ್ದು ಅಂತರ-ಅಂಚಿನನಾಳ ಸಹಿತವಾಗಿರುತ್ತವೆ. ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ/ಹೂಗಳು : ಹೂಗಳು ಹಸಿರು ಮಿಶ್ರಿತ ಶ್ವೇತ ಬಣ್ಣದವು ಹಾಗೂ ದ್ವಿಲಿಂಗಿಗಳಾಗಿದ್ದು, ತುದಿಯಲ್ಲಿನ ಅಥವಾ ಪಾರ್ಶ್ವ ಜನಿತ, ಕವಲೊಡೆದ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಫಾಲಿಕಲ್ (ಎಕ್ಕದಕಾಯಿಗಳನ್ನು ಹೋಲುವಂತಹವು) 30 ರಿಂದ 50 ಸೆಂ.ಮೀ. ಉದ್ದವಿರುತ್ತವೆ; ಬೀಜಗಳು ಅನೇಕ ಹಾಗೂ ರೇಖಾತ್ಮಕ ಚತುರಸ್ರಾಕಾರದಲ್ಲಿದ್ದು, ಚಪ್ಪಟೆಯಾಗಿದ್ದು, ಎರಡೂ ಕೊನೆಗಳ ಅಂಚಿನಲ್ಲಿ ಉದ್ದನೆಯ ರೋಮಗಳಿರುತ್ತವೆ.

ಜೀವಪರಿಸ್ಥಿತಿ :

ಸಮುದ್ರಮಟ್ಟದಿಂದ 300 ರಿಂದ 700ಮೀ ಎತ್ತರ ಪ್ರದೇಶಗಳಲ್ಲಿನ ತೆರೆದ ನಿತ್ಯ ಹರಿದ್ವರ್ಣಗಳಿಂದ ಹಿಡಿದು ತೇವಾಂಶವುಳ್ಳ ಎಲೆಯುದುರು ಕಾಡುಗಳಲ್ಲಿ ಈ ಪ್ರಬೇಧ ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಶಿಯಾದಿಂದ ಆಸ್ಟ್ರೇಲಿಯದವರೆವಿಗೆ; ಪಶ್ಚಿಮ ಘಟ್ಟದ ಎಲ್ಲಾ ಪ್ರದೇಶಗಳಲ್ಲಿ ಈ ಪ್ರಬೇಧ ಬೆಳೆಯುತ್ತವೆ.

ಗ್ರಂಥ ಸೂಚಿ :

Mem. Wern. Nat. Hist. Soc. 1: 76.1811; Gamble, Fl. Madras 2: 810-814.1997 (re.ed); Sasidharan, Biodiversity documentation for Kerala- Flowering Plants, part 6: 280. 2004; Keshava Murthy and Yoganarasimhan, Fl. Coorg (Kodagu) 274. 1990; Cook, Fl. Bombay 1:132. 1902

Top of the Page