ಅಗ್ಲೇಯಿಯ ಬೋರ್ಡಿಲ್ಲೋನಿಯೈ Gamble - ಮೀಲಿಯೇಸಿ

Synonym : ಅಗ್ಲೇಯಿಯಎಲೆಯಾಗ್ನಾಯ್ಡಿಯ(Juss.)Benth.var.ಬೋರ್ಡಿಲ್ಲೋನಿ(Gamble)Nair

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಗೆರೆಗಳ ಸಮೇತವಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಬಲಿಷ್ಟವಾಗಿದ್ದು ದುಂಡಾಕಾರದಲ್ಲಿರುತ್ತವೆ ಮತ್ತು ಕಿತ್ತಳೆ ಕಂದು ಬಣ್ಣದ ಹೊಟ್ಟು ರೂಪದ ಶಲ್ಕೆಗಳಿಂದ ದಟ್ಟವಾಗಿ ಆವರಿಸಿಕೊಂಡಿರುತ್ತದೆ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಬೆಸ ಸಂಖ್ಯೆಯ ಗರಿರೂಪದಲ್ಲಿರುತ್ತವೆ ಮತ್ತು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುದಿ ಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ಅಕ್ಷದಿಂಡು 5.5 - 8 ಸೆಂ.ಮೀ.ಉದ್ದವಿದ್ದು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತವೆ; ಕಿರುತೊಟ್ಟುಗಳು1.ರಿಂದ 2 ಸೆಂ.ಮೀ. ಉದ್ದವಿರುತ್ತವೆ; ಕಿರುಎಲೆಗಳು 6 ಅಭಿಮುಖಿಗಳಾಗಿರುವ ಜೋಡಿಗಳಿದ್ದು ಅಗ್ರದಲ್ಲಿ ಒಂದು ಕಿರುಎಲೆಯನ್ನು ಹೊಂದಿರುತ್ತದೆ; ಕಿರುಎಲೆಗಳು 6-14 X 1.5-5 ಸೆಂ.ಮೀ. ಗಾತ್ರದಲ್ಲಿದ್ದು ಸಂಕುಚಿತ - ಅಂಡವೃತ್ತ - ಬುಗುರಿಯ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಚೂಪಾದುದರಿಂದ ಕ್ರಮೇಣವಾಗಿ ಚೂಪಾಗುವ ರೀತಿಯ ತುದಿ ಹೊಂದಿರುತ್ತವೆ;ಬುಡ ಬೆಣೆಯಾಕಾರದಲ್ಲಿರುತ್ತದೆ; ಅಂಚುಹಿಂಸುರುಳಿಯಾಗಿರುತ್ತದೆ(ಒಣಗಿದ ಸ್ಥಿತಿಯಲ್ಲಾದರೂ); ಮೇಲ್ಮೈ ಉಪತೊಗಲ -ವನ್ನೋಲುವ ಮಾದರಿಯಲ್ಲಿರುತ್ತದೆ ಮತ್ತು ಪತ್ರಗಳ ತಳಭಾಗ ಕಿತ್ತಳೆ ಕಂದು ಬಣ್ಣದ ಹೊಟ್ಟು ರೂಪದ ಶಲ್ಕೆಗಳಿಂದ ದಟ್ಟವಾಗಿ ಆವರಿಸಿಕೊಂಡಿರುತ್ತದೆ, ಪತ್ರಗಳ ಮೇಲ್ಭಾಗ ಹೆಚ್ಚೂ ಕಡಿಮೆ ರೋಮರಹಿತವಾಗಿರುತ್ತದೆ; ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 8-14 ಜೋಡಿಗಳಿದ್ದು ಪ್ರಮುಖವಾಗಿರುತ್ತವೆ ಮತ್ತು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಗೋಚರ.
ಪುಷ್ಪಮಂಜರಿ/ಹೂಗಳು : ಹೂಗಳು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿದ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯ ಅಕ್ಷಾಕಂಕುಳಿನಲ್ಲಿನ ಅಥವಾ ಉಪತುದಿಲ್ಲಿನ ಪುಷ್ಪಮಂಜರಿಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 2.2 ಸೆಂ.ಮೀ. ಉದ್ದವಿದ್ದು ಬುಗುರಿಯಾಕಾರದಲ್ಲಿದ್ದು ಬುಡದಲ್ಲಿ ಸಂಕುಚಿತ -ಗೊಂಡಿರುತ್ತವೆ ಮತ್ತು ಕಿತ್ತಳೆ ಕಂದು ಬಣ್ಣದ ಹೊಟ್ಟು ರೂಪದ ಶಲ್ಕೆಗಳಿಂದ ಆವೃತವಾಗಿರುತ್ತವೆ;ಕೋಶಗಳು 2 ಇರುತ್ತವೆ ಮತ್ತು ಪ್ರತಿ ಕೋಶದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ಮುಖ್ಯವಾಗಿ ಮೇಲ್ಛಾವಣಿ ಮರಗಳಾಗಿ ಉನ್ನತ ಎತ್ತರದ ಪ್ರದೇಶಗಳಲ್ಲಿನ ಬಹಿರಂಗಗೊಂಡ ನಿತ್ಯ ಹರಿದ್ವರ್ಣಕಾಡುಗಳಲ್ಲಿಯೂ ಮತ್ತು ಒಳಛಾವಣಿ ಮರಗಳಾಗಿ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ತೆರೆದ ಭಾಗಗಳಲ್ಲಿಕಂಡುಬರುವ ಈ ಸಸ್ಯ 1000 ಮತ್ತು 1800 ಮೀ. ವರೆಗಿನ ಎತ್ತರದ ಪ್ರದೇಶಗಳಲ್ಲಿ ಬೆಳೆಯುತ್ತದೆ.bourd

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ಅಗಸ್ತ್ಯಮಲೈನಲ್ಲಿವ್ಯಾಪಿಸಿದೆ.

ಗ್ರಂಥ ಸೂಚಿ :

Bull.Misc.Inform.Kew Bull. 1915:346.1915; Panell, A taxonomic monograph of the genus Aglaia Lour.(Meliaceae),120.1992. Gamble, Fl. Madras 1:180.1997 (rep.ed.)Sasidharan, Biodiversity documentation for Kerala Plants, part 6, 87.2004 Saldanha, Fl. Karnataka 2:230.1996.

Top of the Page