ಅಗ್ಲೇಯಿಯ ಬಾರ್ಬೆರಿ Gamble - ಮೀಲಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗೆ ಬೆಳೆಯುವ ಸ್ವಲ್ಪಮಟ್ಟಿಗೆ ಆನಿಕೆಗಳನ್ನುಳ್ಳ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪಿನಿಂದ ಕೂಡಿದ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ತೆಳುವಾಗಿರುತ್ತವೆ ಮತ್ತು ಹೊಟ್ಟು ರೂಪದ ಶಲ್ಕೆಗಳಿಂದ ದಟ್ಟವಾಗಿ ಆವರಿಸಿಕೊಂಡಿರುತ್ತದೆ.
ಎಲೆಗಳು : ಎಲೆಗಳು ಸಂಯುಕ್ತಪರ್ಣಿಗಳಾಗಿದ್ದು ಬೆಸ ಸಂಖ್ಯೆಯ ಗರಿರೂಪದಲ್ಲಿರುತ್ತವೆ ಮತ್ತು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು 4.5-7 ಸೆಂ.ಮೀ.ಉದ್ದವಿದ್ದು ಕೋನಯುಕ್ತವಾಗಿರುತ್ತದೆ ಮತ್ತು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿರುತ್ತವೆ; ಕಿರುತೊಟ್ಟುಗಳು ಕಾಲುವೆಗೆರೆ ಸಮೇತವಿದ್ದು 0.4.ರಿಂದ 1 ಸೆಂ.ಮೀ. ಉದ್ದವಿದ್ದು ತುದಿ ಕಿರುತೊಟ್ಟು ಉಳಿದವುಗಳಿಗಿಂತ ಉದ್ದವಾಗಿರುತ್ತವೆ;ಕಿರುಎಲೆಗಳು 2 ರಿಂದ 3 ಅಭಿಮುಖಿ ಅಥವಾ ಉಪಅಭಿಮುಖಿಗಳಾಗಿರುವ ಜೋಡಿಗಳಿದ್ದು ಅಗ್ರದಲ್ಲಿ ಒಂದು ಕಿರುಎಲೆಯನ್ನು ಹೊಂದಿರುತ್ತವೆ;ಕಿರುಎಲೆಗಳು 6-12 X 2.4-5 ಸೆಂ.ಮೀ. ಗಾತ್ರದಲ್ಲಿದ್ದು ಅಂಡವೃತ್ತದ ಅಥವಾ ಅಂಡವೃತ್ತ-ಅಂಡದ ಆಕಾರದಲ್ಲಿದ್ದು ಮೊಂಡಾಗ್ರವುಳ್ಳ ಚೂಪಾದುದರಿಂದ ಕ್ರಮೇಣವಾಗಿ ಚೂಪಾಗುವ ರೀತಿಯ ತುದಿ ಹೊಂದಿರುತ್ತವೆ;ಬುಡ ಚೂಪಾಗಿರುತ್ತದೆ ಕೆಲವು ವೇಳೆ ಅಸಮವಾಗಿರುತ್ತದೆ;ಅಂಚು ನಯವಾಗಿರುತ್ತದೆ;ಮೇಲ್ಮೈ ಕಾಗದವನ್ನೋಲುವ ಮಾದರಿಯಲ್ಲಿರುತ್ತದೆ;ಪತ್ರಗಳ ತಳಭಾಗ ಕಂದು ಬಣ್ಣದ ಸೂ ಕ್ಷ್ಮವಾದ ಹೊಟ್ಟು ರೂಪದ ಶಲ್ಕೆಗಳಿಂದ ದಟ್ಟವಾಗಿ ಆವರಿಸಿಕೊಂಡಿರುತ್ತದೆ, ಪತ್ರಗಳ ಮೇಲ್ಭಾಗ ನಯವಾಗಿರುತ್ತದೆ; ಮಧ್ಯನಾಳ ಕೊಂಚ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6-12 ಜೋಡಿಗಳಿದ್ದು ತೆಳುವಾಗಿ -ರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಹೊಟ್ಟು ರೂಪದ ಶಲ್ಕೆಗಳಿಂದ ಕೂಡಿದ ಪುನರಾ -ವೃತ್ತಿಯಾಗಿ ಕವಲೊಡೆಯುವ ಮಾದರಿಯ ಅಕ್ಷಾಕಂಕುಳಿನಲ್ಲಿನ ಅಥವಾ ಪಾರ್ಶ್ವದಲ್ಲಿನ ಪುಷ್ಪಮಂಜರಿಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು 2.5 ಸೆಂ.ಮೀ. ಉದ್ದವಿದ್ದು ಉಪಗೋಳಾಕಾರ ಅಥವಾ ಅಸಮವಾಗಿರುತ್ತದೆ ಅಗ್ರ ಅದುಮಿದಂತಿರುತ್ತದೆ ಮತ್ತು ಹೊಟ್ಟು ರೂಪದ ಶಲ್ಕೆಗಳಿಂದ ಆವೃತವಾಗಿರುತ್ತವೆ;ಬೆರ್ರಿಗಳು ಒಣಗಿದಾಗ ಸುಕ್ಕು ಸುಕ್ಕಾಗಿರುತ್ತವೆ;ಕೋಶಗಳು 3 ಇರುತ್ತವೆ ಮತ್ತು ಪ್ರತಿ ಕೋಶದಲ್ಲಿ ಒಂದು ಬೀಜವಿರುತ್ತದೆ.

ಜೀವಪರಿಸ್ಥಿತಿ :

ಸಾಮಾನ್ಯವಾಗಿ 900 ಮೀ. ವರೆಗಿನ ಕಡಿಮೆ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿನ ಉಪಮೇಲ್ಛಾವಣಿ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಸಸ್ಯ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ

ಗ್ರಂಥ ಸೂಚಿ :

Bull. Misc. Inform.Kew Bull. 1915:346.1915; Gamble, Fl. Madras 1:180.1997 (rep.ed.)Sasidharan, Biodiversity documentation for Kerala Plants, part 6, 87.2004.

Top of the Page