ಆಕ್ಟಿನೋಡ್ಯಾಫ್ನೆ ಮಲಬಾರಿಕ Balkr. - ಲಾರೇಸಿ

Synonym : ಆಕ್ಟಿನೋಡ್ಯಾಫ್ನೆ ಹಿರ್ಸುಟ Hk.f.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿರುತ್ತದೆ ಮತ್ತು ವಾಯು ವಿನಿಮಯ ಬೆಂಡು ರಂಧ್ರ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ತೆಳು ಕಿತ್ತಳೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ತುಕ್ಕು ಬಣ್ಣದ ದಟ್ಟವಾದ ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಉಪತರಂಗಿತ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 ಸೆಂ.ಮೀ. ವರೆಗಿನ ಉದ್ದ ಹೊಂದಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 8.5-21 x 2.5-6 ಸೆಂ.ಮೀ. ಗಾತ್ರ ಹೊಂದಿದ್ದು ಸಂಕುಚಿತ ಅಂಡವೃತ್ತದ ಆಕಾರದಲ್ಲಿರುತ್ತವೆ. ಪತ್ರದ ತುದಿ ತೀಕ್ಷ್ಣವಾಗಿ ಚೂಪು - ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು, ಬುಡ ಚೂಪು - -ಬೆಣೆಯಾಕಾರದಲ್ಲಿರುತ್ತದೆ;ಅಂಚು ನಯವಾಗಿರುತ್ತದೆ;ಪತ್ರಗಳ ಮೇಲ್ಮೈ ಉಪ-ತೊಗಲಿನ ಮಾದರಿಯಲ್ಲಿದ್ದು ಮೇಲ್ಭಾಗ ಹೊಳಪಿನ ಸಮೇತವಿದ್ದು ತಳಭಾಗ ಮಾಸಲು ಬೂದು ಬಣ್ಣ ಹೊಂದಿರುತ್ತದೆ; ಪತ್ರಗಳ ತಳಭಾಗ ತುಕ್ಕು ವರ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ ಮತ್ತು ಪತ್ರದ ಮೇಲ್ಭಾಗ ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ತುಸು ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 8-12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಸನಿಹವಾಗಿರುತ್ತವೆ ಎಲೆದಿಂಡಿಗೆ ಅಡ್ಡವಾಗಿ ಕೂಡುವ ರೀತಿಯವು ಆದರೆ ಪ್ರಮುಖವಾಗಿರುವುದಿಲ್ಲ ಮತ್ತು ಹೆಚ್ಚೂ ಕಡಿಮೆ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾದ್ದು, ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಕಿರು ವೃಂತದ ಮೇಲಿನ ಗುಚ್ಛಗಳಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿಗಳು ಗೋಳಾಕಾರದಲ್ಲಿದ್ದು ಬಟ್ಟಲು ಆಕಾರದ ಪುಷ್ಪಾವರಣದ ಮೇಲೆ ಆಸೀನ -ವಾಗಿರುತ್ತವೆ ಮತ್ತು ಮಾಗಿದಾಗ ಕಪ್ಪು ಬಣ್ಣ ಹೊಂದಿರುತ್ತವೆ ಹಾಗೂ 1 ಬೀಜವನ್ನು ಒಳಗೊಂಡಿರುತ್ತವೆ.

ಜೀವಪರಿಸ್ಥಿತಿ :

ಕಡಿಮೆ ಮತ್ತು ಮಧ್ಯಮ ಎತ್ತರದ (1000 ಮೀ. ವರೆಗಿನ) ಪ್ರದೇಶಗಳ ತೇವಾಂಶವುಳ್ಳ ನಿತ್ಯ ಹರಿದ್ವರ್ಣ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಬೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಪಶ್ಚಿಮ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

JBNHS 63:329.1967;Gamble,Fl.Madras2:1231.1993(rep.ed.); Sasidharan, Biodiversity documentation for Kerala Plants, part 6, 394.2004; Saldanha, Fl. Karnataka 1:58.1984..

Top of the Page