ವಲ್ಸುರ ಟ್ರೈಫೋಲಿಯ (A. Juss.) Harms. - ಮೀಲಿಯೇಸಿ

ಪರ್ಯಾಯ ನಾಮ : ಹೇನಿಯ ಟ್ರೈಫೋಲಿಯ A.Juss.; ವಲ್ಸುರ ಪಿಸಿಡ Roxb.

Vernacular names : Tamil: ಪೆರಿಲ್ಲ ಪಚ್ಚ; ಪೆರಿಲ್ಲಪಿಚ್ಚುMalayalam: ಮಲೆಸಗಡೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಮಸುಕಾದ ಕಂದು ಬಣ್ಣ ಹೊಂದಿದ್ದು,ಆಳವಿಲ್ಲದ ಸೀಳಿಕಾ ವಿನ್ಯಾಸದ್ದಾಗಿದ್ದು ತುಕ್ಕು ಬಣ್ಣದ ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ; ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ತೆಳು ಹಾಗೂ ದುಂಡಾಗಿದ್ದು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳನ್ನು ಹೊಂದಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಮಾದರಿಯಲ್ಲಿದ್ದು ತ್ರಿಪರ್ಣಗಳನ್ನು ಹೊಂದಿದ್ದು ಪ್ರಯಾಯ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ನಡುಕಾಂಡ 5 ಸೆಂ.ಮೀ.ವರೆಗಿನ ಉದ್ದ ಹೊಂದಿದ್ದು ಉಬ್ಬಿದ ಲೆ ಬುಡದ ಸಮೇತವಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ;ಪಾರ್ಶ್ವದಲ್ಲಿನ ಕಿರುಎಲೆಗಳ ತೊಟ್ಟುಗಳು 0.4 – 1 ಸೆಂ.ಮೀ. ಉದ್ದವಿದ್ದು ಮಧ್ಯದ ಕಿರುಎಲೆಗಳ ತೊಟ್ಟುಗಳು 1.3 – 3 ಸೆಂ.ಮೀ. ಉದ್ದ ಹೊಂದಿದ್ದು ಎರಡೂ ತುದಿಯಲ್ಲಿ ಉಬ್ಬಿರುತ್ತದೆ ಮತ್ತು ಕೋನಯುಕ್ತ ಅಥವಾ ಉಪ-ದುಂಡಾಗಿರುತ್ತದೆ; ಪತ್ರಗಳು 4 -15 X 2.5 -5 ಸೆಂ. ಮೀ.ವರೆಗಿನ ಗಾತ್ರ, ಆಕಾರದಲ್ಲಿ ವೈವಿಧ್ಯತೆ ಹೊಂದಿದ್ದು ಸಂಕುಚಿತ ಚತುರಸ್ರದಿಂದ ಅಂಡವೃತ್ತವರೆಗಿನ ಅಥವಾ ಸಂಕುಚಿತ ಬುಗುರಿಯ ಆಕಾರ, ಕ್ರಮೇಣ ಚೂಪಾಗುವ ಅಗ್ರದ ಮಧ್ಯದಲ್ಲಿ ತಗ್ಗುಳ್ಳ ತುದಿ ಅಥವಾ ದುಂಡನೆಯ ಅಗ್ರದಲ್ಲಿ ತಗ್ಗುಳ್ಳ ಮಾದರಿಯ ತುದಿ, ಚೂಪಾದ ಅಥವಾ ಬೆಣೆಯಾಕಾರದ ಬುಡ,ನಯವಾದ ಅಂಚು,ಕಾಗದವನ್ನೋಲುವ ಅಥವಾ ಉಪ-ಚರ್ಮದ ರೀತಿಯ ಮೇಲ್ಮೈ ,ಮಾಸಲು ಬೂದು ಹಸಿರು ಬಣ್ಣದ ತಳಭಾಗ ಹೊಂದಿರುತ್ತವೆ; ಪತ್ರಗಳು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೇ ದರ್ಜೆಯ ನಾಳಗಳು 7 ರಿಂದ 13 ಇದ್ದು ಕ್ರಮೇಣವಾಗಿ ಬಾಗಿರುತ್ತವೆ ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ತೆಳುವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣ ಹೊಂದಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಅಂಡಾಕಾರದಲ್ಲಿದ್ದು 1.3 ಸೆಂ.ಮೀ ವರೆಗಿನ ಉದ್ದವಿರುತ್ತವೆ;ಬೀಜಗಳು 1 – 2 ಇದ್ದು ಮಸುಕಾದ ಕಂದು ಬಣ್ಣ ಹೊಂದಿದ್ದು ಬಿಳಿ ಬಣ್ಣದ ಮಾಂಸಲವಾದ ಪತ್ರೆಯಲ್ಲಿ ಅಡಕವಾಗಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಒಳಛಾವಣಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Engler & Prantl, Pflanzenf. Ed. 2. 19b. 119,177,1940;Gamble,Fl. Madras174.1997(rep.ed.) ; Sasidharan, Biodiversity documentation for Kerala- Flowering Plants, part 6:91.2004.

Top of the Page