English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15 ಮೀ. ಎತ್ತರದ ಎಲೆಯುದುರುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಂದು ಬಣ್ಣದಲ್ಲಿದ್ದು,ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಹಳದಿ ಛಾಯೆ ಹೊಂದಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು 4-ಕೋನಯುಕ್ತವಾಗಿದ್ದು ಮೃದುತುಪ್ಪಳದಿಂದ ಕೂಡಿದ್ದು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ ಹಾಗೂ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ. |
| ಎಲೆಗಳು : | ಎಲೆಗಳು ಸಂಯುಕ್ತ ಮಾದರಿಯವುಗಳಾಗಿದ್ದು ಬೆರಳು - ಕವಲು ಮಾದರಿ ಅಥವಾ ಅಪರೂಪವಾಗಿ 3-ಕೂಡೆಲೆಗಳನ್ನು ಹೊಂದಿರುತ್ತವೆ;ವೃಂತಗಳು ಬುಡದಲ್ಲಿ ಉಬ್ಬಿರುತ್ತದೆ, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ, ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ;ಕಿರುತೊಟ್ಟುಗಳು 0.5 ರಿಂದ 1.5 ಸೆಂ.ಮೀ.ಉದ್ದ ಹೊಂದಿರುತ್ತವೆ,ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಕಿರುಪತ್ರಗಳು 5(ಅಪರೂಪವಾಗಿ 3) ಇದ್ದು, 7 – 11.5 X 2 – 3.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತದ ಆಕಾರ ಹೊಂದಿದ್ದು, ಚೂಪಾದ ಅಥವಾ ಚೂಪಲ್ಲದ ತುದಿ, ಬೆಣೆ - ಒಳಬಾಗಿದ ಬುಡ, ನಯವಾದ ಅಂಚು,ಕಾಗದವನ್ನೋಲುವ ಅಥವಾ ತೆಳು ತೊಗಲ್ಲನ್ನೋಲುವ ಮೇಲ್ಮೈ ಹೊಂದಿದ್ದು ತಳಭಾಗದಲ್ಲಿ ಮಾಸಲು ಬೂದು ಹಸಿರು ಬಣ್ಣ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 14 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿದ್ದು ಪ್ರಮುಖವಾಗಿರುವುದಿಲ್ಲ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ನೀಳಛತ್ರ ಮಾದರಿಯಲ್ಲಿರುತ್ತವೆ ಮತ್ತು ಸೂಕ್ಷ್ಮವಾದ ಮೃದುತುಪ್ಪಳದಿಂದ ಕೂಡಿರುತ್ತವೆ; ಹೂಗಳು ಉಭಯ ಪಾರ್ಶ್ವ ಅಸಮಾಂಗತೆಯುಳ್ಳ ಮಾದರಿಯಲ್ಲಿದ್ದು ತೊಟ್ಟುರಹಿತವಾಗಿರುತ್ತವೆ;ಪುಷ್ಪದಳಗಳು ಬಿಳಿಬಣ್ಣದಲ್ಲಿದ್ದು ಕೆನ್ನೀಲಿ ಮೃದುತುಪ್ಪಳದ ಸಮೇತವಿರುತ್ತವೆ;ಪರಾಗ ಕೋಶದ ಹಾಲೆಗಳು ಕೆನ್ನೀಲಿ ಬಣ್ಣದವು. |
| ಕಾಯಿ / ಬೀಜ : | ಡ್ರೂಪ್ಗಳು ನಯವಾಗಿದ್ದು, ಅಂಡಾಕಾರದಲ್ಲಿದ್ದು,ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣ ಹೊಂದಿರುತ್ತವೆ;ಬೀಜಗಳ ಸಂಖ್ಯೆ 4. |