ವರ್ನೋನಿಯ ಆರ್ಬೋರಿಯ Buch.-Ham. - ಆಸ್ಟರೇಸಿ

Synonym : ವರ್ನೋನಿಯ ಮೊನೊಸಿಸ್ Benth. ex Clarke

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮಧ್ಯಮ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣ. ಕಚ್ಚು ಮಾಡಿದ ಜಾಗ ಕಪ್ಪುಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ದಟ್ಟವಾದ ಮೃದು ತುಪ್ಪಳ ಸಹಿತವಾಗಿರುತ್ತದೆ.
ಜಿನುಗು ದ್ರವ :
ಎಲೆಗಳು : ಎಲೆಗಳು ಪರ್ಯಾಯ ಹಾಗೂ ಸುತ್ತ ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತದೆ. ಎಲೆತೊಟ್ಟು 0.6 ರಿಂದ 2.6ಸೆಂ.ಮೀ. ಉದ್ದ, ಉಪದುಂಡಾಕಾರವಾಗಿದ್ದು ದಟ್ಟವಾದ ಮೃದು ತುಪ್ಪಳ ಸಹಿತವಾಗಿರುತ್ತದೆ. ಪತ್ರ 8.5 ರಿಂದ 19 ಸೆಂ.ಮೀ. ಉದ್ದ, 4 ರಿಂದ 11ಸೆಂ.ಮೀ. ಅಗಲಹೊಂದಿದ್ದು, ಬುಗುರಿ ಅಥವಾ ವಿಶಾಲವಾದ ಬುಗುರಿ ಆಕಾರದಲ್ಲಿರುತ್ತದೆ. ಎಲೆ ತುದಿ ಚೂಪಾಗಿ ಅಥವಾ ಥಟ್ಟನೆ, ಮೊಟಕಾದ, ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು ಬೆಣೆಯಾಕಾರದ ಅಥವಾ ಚೂಪಾದ ಎಲೆಬುಡವನ್ನು ಹೊಂದಿರುತ್ತದೆ; ಎಲೆಯ ಅಂಚು ನಯವಾಗಿರುತ್ತದೆ. ಕೆಲವು ಸಂದರ್ಭದಲ್ಲಿ ಹೆಚ್ಚು ಅಂತರ ಹೊಂದಿದ, ಪರ್ಯಾಯವಾಗಿ ಚಿಕ್ಕ ಮತ್ತ ದೊಡ್ಡ ದಂತಗಳನ್ನೊಳಗೊಂಡ ಜೋಡಿ ಗರಗಸದಂತ ಸಮೇತವಾಗಿರುತ್ತದೆ. ಪತ್ರ ಕಾಗದವನ್ನೋಲುವ ಮಾದರಿಯಲ್ಲಿದ್ದು ತಳಭಾಗದಲ್ಲಿ ದಟ್ಟಮೃದು ತುಪ್ಪಳವನ್ನು ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ದಟ್ಟಮೃದು ತುಪ್ಪಳದಿಂದ ಕೂಡಿರುತ್ತದೆ; ಎರಡನೇ ದರ್ಜೆಯ ನಾಳಗಳು 10 ರಿಂದ 15 ಜೋಡಿಗಳಿದ್ದು ಪತ್ರದ ಅಂಚಿನ ಬಳಿ ಕುಣಿಕೆಗೊಂಡಿರುತ್ತವೆ. ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಲವಿನ್ಯಾಸಲ್ಲಿದ್ದು ಎಲೆದಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ಕೆನ್ನೀಲಿ ಬಣ್ಣ ಹೊಂದಿದ್ದು ತುದಿಯಲ್ಲಿನ ದೊಡ್ಡದಾದ, ಕವಲೊಡೆದ ಮಧ್ಯಾರಂಬಿ ಮಂಜರಿಯಲ್ಲಿನ ಚೆಂಡುಮಂಜರಿಯಲ್ಲಿರುತ್ತವೆ.
ಕಾಯಿ /ಬೀಜ : ಕಾಯಿಗಳು ಅಬೀನು ಮಾದರಿಯವಾಗಿದ್ದು ಉಬ್ಬು ತಗ್ಗು ಗೆರೆಗಳ ಸಮೇತವಾದ ಮೇಲ್ಮೈ ಹೊಂದಿರುತ್ತದೆ. ಬೀಜ ತುಪ್ಪಳ ಏಕಾನುಕ್ರಮವಾಗಿ ಜೋಡಣೆಯಾಗಿರುತ್ತದೆ.

ಜೀವಪರಿಸ್ಥಿತಿ :

1900ಮೀ ಎತ್ತರದವರೆಗಿನ ಪ್ರದೇಶಗಳಲ್ಲಿ ಬೆಳೆಯುವ ನಿತ್ಯಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಬೇಧ ಅಲ್ಲಲ್ಲಿ ಕಾಣ ಸಿಗುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ; ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Trans. Linn. Soc. London 14: 218.1824; Gamble, Fl. Madras 2: 672.1997 (re.ed); Sasidharan, Biodiversity documentation for Kerala- Flowering Plants, part 6: 257. 2004; Keshava Murthy and Yoganarasimhan, Fl. Coorg (Kodagu) 256. 1990; Cook, Fl. Bombay 2:12. 1902.

Top of the Page