ವೆಟೇರಿಯ ಮ್ಯಾಕ್ರೋಕಾರ್ಪ Gupta - ಡಿಪ್ಟೆರೋಕಾರ್ಪೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು, ಬೂದು ಬಣ್ಣದಲ್ಲಿರುತ್ತದೆ.
ಜಿನುಗು ದ್ರವ : ಜಿನುಗು ದ್ರವ ಅಂಟುರೂಪದಲ್ಲಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರು ಮಾದರಿಯವು;ತೊಟ್ಟುಗಳು ಸೂಕ್ಷ್ಮವಾದ ರೋಮಗಳಿಂದ ಕೂಡಿದ್ದು, 2.5 ರಿಂದ 6 ಸೆಂ.ಮೀ. ಉದ್ದವಿದ್ದು ತುದಿಯಲ್ಲಿ ಊದಿಕೊಂಡಿರುತ್ತವೆ;ಪತ್ರಗಳು 13-30 X 6.5-16 (40 X 20) ಸೆಂ. ಮೀ.ಗಾತ್ರ, ಅಂಡವೃತ್ತ-ಚತುರಸ್ರದ ಅಥವಾ ಚತುರಸ್ರ-ಭರ್ಜಿಯ ಆಕಾರ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ,ದುಂಡಾದುದರಿಂದ ಉಪ-ಹೃದಯಾಕಾರದ ಬುಡ, ನಯವಾದ ಅಂಚು ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ.ಸಾಮಾನ್ಯವಾಗಿ ರೋಮರಹಿತವಾಗಿರುತ್ತವೆ ಅಥವಾ ಅಪರೂಪವಾಗಿ ಪತ್ರದ ತಳಭಾಗದ ಬುಡ ಮತ್ತು ಮಧ್ಯನಾಳ ನಕ್ಷತ್ರರೋಮಗಳಿಂದ ಕೂಡಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೆ ದರ್ಜೆಯ ನಾಳಗಳು ಅಂದಾಜು 19 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಓರೆಯಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ದಟ್ಟವಾದ ನೆರೆತ ನಕ್ಷತ್ರರೋಮಗಳಿಂದ ಕೂಡಿದ, ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು. ಹೂಗಳು ಅಂದಾಜು 3.3 ಸೆಂ.ಮೀ. ಸುತ್ತಳತೆಯಲ್ಲಿದ್ದು 1.5-2.4 ಸೆಂ.ಮೀ. ಉದ್ದದ ತೊಟ್ಟುಗಳನ್ನು ಹೊಂದಿರುತ್ತವೆ.
ಕಾಯಿ /ಬೀಜ : ಸಂಪುಟ ಫಲಗಳು ಅಂದಾಜು 11 X 6 ಸೆಂ.ಮೀ. ಗಾತ್ರದಲ್ಲಿದ್ದು ಹಿಂಬಾಗಿದ ಪುಷ್ಪಪಾತ್ರೆಯ ಪತ್ರಗಳ ಸಮೇತವಿರುತ್ತವೆ;ಬೀಜಗಳು ಒಂದು.

ಜೀವಪರಿಸ್ಥಿತಿ :

1200 ಮೀ.ವರೆಗಿನ ಕೆಳ ಮತ್ತು ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಮೇಲ್ಛಾವಣಿಯ ಹಾಗೂ ಹೊರಹೊಮ್ಮುವ ಮರಗಳಾಗಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯವನ್ನು ಇದುವರೆವಿಗೆ ಪಾಲಕ್ಕಾಡ್ ಬೆಟ್ಟದ ಮುತಿಕುಲಂ ಕಾದಿಟ್ಟ ಅರಣ್ಯದಲ್ಲಿ ಮಾತ್ರ ದಾಖಲಿಸಲಾಗಿದೆ.

ಗ್ರಂಥ ಸೂಚಿ :

Ind. For.55:231.2 1929;Sasidharan, Biodiversity documentation for Kerala- Flowering plants,part 6:45.2004.

Top of the Page