English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | ಸಾಮಾನ್ಯವಾಗಿ 40 ಮೀ ಎತ್ತರದವರೆಗೆ, ಕೆಲವು ವೇಳೆ 60 ಮೀ ಎತ್ತರದವರೆವಿಗೂ ಬೆಳೆಯುವ ಮರಗಳು. |
ಕಾಂಡ ಮತ್ತು ತೊಗಟೆ : | ತೊಗಟೆ ನಯವಾಗಿದ್ದು, ಬೂದು ಬಣ್ಣದಲ್ಲಿರುತ್ತದೆ;ಕಚ್ಚುಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ. |
ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಉಪ-ದುಂಡಾಗಿದ್ದು ,ನಕ್ಷತ್ರರೋಮಗಳಿಂದ ಕೂಡಿರುತ್ತವೆ. |
ಜಿನುಗು ದ್ರವ : | ಜಿನುಗು ದ್ರವ ಅಂಟುರೂಪದಲ್ಲಿರುತ್ತದೆ. |
ಎಲೆಗಳು : | ಎಲೆಗಳು ಸರಳವಾಗಿದ್ದು, ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಕಾವಿನೆಲೆಗಳು ಉದುರು ಮಾದರಿಯವು;ತೊಟ್ಟುಗಳು 2-3 ಸೆಂ.ಮೀ. ಉದ್ದವಿದ್ದು ತುದಿಯಲ್ಲಿ ಊದಿಕೊಂಡಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಪತ್ರಗಳು 8-27 X 4.5-10 ಸೆಂ. ಮೀ.ಗಾತ್ರ, ಅಂಡವೃತ್ತ-ಚತುರಸ್ರದಾ ಆಕಾರ, ಥಟ್ಟನೆ ಕ್ರಮೇಣ ಚೂಪಾಗುವ ಅಥವಾ ಚೂಪಲ್ಲದ ತುದಿ,ದುಂಡಾದುದರಿಂದ ಉಪ-ಹೃದಯಾಕಾರದ ಬುಡ, ನಯವಾದ ಅಂಚು ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿದ್ದು, ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ;ಎರಡನೆ ದರ್ಜೆಯ ನಾಳಗಳು 13 ರಿಂದ 20 ಜೋಡಿಗಳಿರುತ್ತವೆ ಹಾಗೂ ಅಂಚಿನ ಬಳಿ ಬಾಗಿರುತ್ತವೆ ಮತ್ತು ಪತ್ರದ ಮೇಲ್ಭಾಗದಲ್ಲಿ ಅಚ್ಚೊತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ತೆಳುವಾಗಿರುತ್ತವೆ ಮತ್ತುಓರೆಯಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುವಂತವು. |
ಪುಷ್ಪಮಂಜರಿ/ಹೂಗಳು : | ಪುಷ್ಪಮಂಜರಿ ದಟ್ಟವಾದ ನಕ್ಷತ್ರರೋಮಗಳಿಂದ ಕೂಡಿದ, ಅಕ್ಷಾಕಂಕುಳಿನಲ್ಲಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು. ಹೂಗಳು ಬಿಳಿ ಬಣ್ಣದಲ್ಲಿದ್ದು ಹಳದಿ ಪರಾಗಕೋಶಗಳ ಸಮೇತವಿರುತ್ತವೆ. |
ಕಾಯಿ /ಬೀಜ : | ಸಂಪುಟ ಫಲಗಳು ತೆಳು ಕಂದು ಬಣ್ಣದಲ್ಲಿದ್ದು 3-ಕವಾಟ ಹೊಂದಿರುತ್ತವೆ ಹಾಗೂ 6.4 X 3.8 ಸೆಂ.ಮೀ. ಗಾತ್ರ, ಚತರಸ್ರದ ಆಕಾರ, ಅಡ್ಡಗಲದ ಅಳತೆ ಹೊಂದಿರುತ್ತವೆ;ಪುಷ್ಪಪಾತ್ರೆ ಹಿಂಬಾಗಿರುತ್ತವೆ ಹಾಗೂ ಧೃಢವಾಗಿ ನಿಲ್ಲುವಂತವು;ಬೀಜಗಳು ಒಂದು. |