ಟರ್ನ್ ಸ್ಟ್ರೋಮಿಯ ಜಿಮ್ನ್ಯಾಂತೀರ (Wt. & Arn.) Bedd. - ತಿಯೇಸಿ

ಪರ್ಯಾಯ ನಾಮ : ಕ್ಲೆಯೆರ ಜಿಮ್ನ್ಯಾಂತೀರ Wt. & Arn.; ಟರ್ನ್ ಸ್ಟ್ರೋಮಿಯ ಜಪೊನಿಕ Linn.

Vernacular names : Malayalam: ಕಾಮೋನಿ,ಕಿರ್ಮೋನಿ,ಕಿಯಾಮೋನಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ಬಲಿತಾಗ ಅನಿಯತವಾಗಿ ಚಕ್ಕೆಯೆದ್ದಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕೆಂಪು ಛಾಯೆ ಹೊಂದಿದ್ದು,ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ತೊಟ್ಟುಗಳು 0.5 – 1.5 ಸೆಂ.ಮೀ. ವರೆಗಿನ ಉದ್ದವಿದ್ದು, ಕೆಂಪು ಛಾಯೆ ಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತು ರೋಮರಹಿವಾಗಿರುತ್ತವೆ;ಪತ್ರಗಳು 4 – 10 X 1.2–3.5 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಅಂಡವೃತ್ತ - ಬುಗುರಿವರೆಗಿನ ಆಕಾರ ಹೊಂದಿದ್ದು,ಚೂಪಾದ ಅಥವಾ ಚೂಪಲ್ಲದ ಮತ್ತು ಕೆಲವು ವೇಳೆ ದುಂಡನೆಯ ತುದಿ ಮತ್ತು ತಗ್ಗುಳ್ಳ ಅಗ್ರ ಹೊಂದಿದ ತುದಿ, ತಳಭಾಗಕ್ಕೆ ವಿಸ್ತರಿಸಿದ ಅಥವಾ ಒಳಬಾಗಿದ ರೀತಿಯವರೆಗಿನಬುಡ, ನಯವಾದ ಮತ್ತು ಹಿಂಸುರುಳಿಗೊಂಡ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ,ಪತ್ರಗಳ ಮೇಲ್ಮೈ ತೊಗಲನ್ನೋಲುವ ಮಾದರಿಯಲ್ಲಿದ್ದು,ಕಡುಹಸಿರು ಬಣ್ಣ ಮತ್ತು ಹೊಳಪನ್ನುಳ್ಳ ಮೇಲ್ಭಾಗ,ಮಾಸಲು ಬಣ್ಣದ ತಳಭಾಗವನ್ನು ಹೊಂದಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಸ್ವಲ್ಪಮಟ್ಟಿನ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳು, ಹಳದಿ ಬಣ್ಣದಲ್ಲಿದ್ದು, ಅಕ್ಷಾಕಂಕುಳಿನಲ್ಲಿ ಅಥವಾ ಹೊರ –ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ; ತೊಟ್ಟು 3 ಸೆಂ.ಮೀ.ಉದ್ದವಿರುತ್ತದೆ.
ಕಾಯಿ / ಬೀಜ : ಬೆರ್ರಿಗಳು ಅಂಡಾಕಾರ ಅಥವಾ ಗೋಳಾಕಾರದಲ್ಲಿದ್ದು,ಕಳಿತಾಗ ಕೇಂಪು ಛಾಯೆಯನ್ನು ಹೊಂದಿರುತ್ತವೆ;ಬೀಜಗಳ ಸಂಖ್ಯೆ4 - 6.

ಜೀವಪರಿಸ್ಥಿತಿ :

ಮಧ್ಯಮ ಮತ್ತು ಅತಿಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ(ನೀಲಗಿರಿ) ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Temminck, Verh. Nat. Gesch. Bot. 3: 115. t. 17. 1840; Gamble, Fl. Madras 1: 79. 1997 (re. ed); Sasidharan, Biodiversity documentation for Kerala- Flowering Plants, part 6: 44. 2004

Top of the Page