ತರೆನ್ನ ಏಷ್ಯಾಟಿಕ (L.) Kuntze ex K. Schum. var. ರಿಜಿಡ Wt. - ರೂಬಿಯೇಸಿ

ಪರ್ಯಾಯ ನಾಮ : ರೊಂಡೆಲೇಶಿಯ ಏಷ್ಯಾಟಿಕ L.;ಖೊಮೇಲಿಯ ಏಷ್ಯಾಟಿಕ (L.)Kuntze (Wt. & Arn.)

Vernacular names : Tamil: ಕುಪ್ಪಿಪ್ಪೂವು,ತರಣ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 6 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಚಕ್ಕೆ ರೂಪದಲ್ಲಿರುತ್ತವೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದ ಮಚ್ಚೆಗಳಿಂ ಕೂಡಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತವಾಗಿರುತ್ತವೆ ಹಾಗೂ ಬಲಿತಾಗ ದುಂಡಾಗಿರುರುತ್ತವೆ ಹಾಗೂ ರೋಮರಹಿತವಾಗಿರುತ್ತವೆ;ಅಂಕುರ ಮೊಗ್ಗು ಸಾಮಾನ್ಯವಾಗಿ ಹಳದಿ ಬಣ್ಣದ ಅಂಟು ದ್ರವನ್ನು ಒಸರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ಅಗ್ರದಲ್ಲಿ ಚೂಪಾದ ಸೂಕ್ಷ್ಮವಾದ ಮುಳ್ಳು ಹೊಂದಿದ್ದು ತ್ರಿಕೋನಾಕಾರದಲ್ಲಿದ್ದು ತೊಟ್ಟುಗಳ ನಡುವೆ ಇರುತ್ತವೆ, ಹಾಗೂ ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು 0.5 – 2 ಸೆಂ.ಮೀ.ವರೆಗಿನ ಉದ್ದವಿದ್ದು, ಕಾಲುವೆ ಗೆರೆ ಸಮೇತವಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 8 -18 X 4 - 8 ಸೆಂ.ಮೀ. ಗಾತ್ರ ಹೊಂದಿದ್ದು,ಅಂಡವೃತ್ತದಿಂದ ಅಂಡವೃತ್ತ-ಅಂಡದವರೆಗಿನ ಆಕಾರ ಹೊಂದಿದ್ದು, ಮೊಂಡಾಗ್ರವುಳ್ಳ ,ಥಟ್ಟನೆ ಕ್ರಮೇಣ ಚೂಪಾಗುವ ತುದಿ, ಒಳಬಾಗಿದ ಬುಡ, ನಯವಾದ ಮತ್ತು ಹಿಂಸುರುಳಿಗೊಂಡ ಅಂಚು ಹೊಂದಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ ಮತ್ತು ಒಣಗಿದಾಗ ಕಾಲುವೆರೆ ಸಮೇತವಿರುತ್ತವೆ;ಎರಡನೇ ದರ್ಜೆಯ ನಾಳಗಳು 9 ರಿಂದ 12 ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿ ನೀಳಛತ್ರ ಮಧ್ಯಾರಂಭಿ ಮಾದರಿಯವು;ಹೂಗಳು ಕೆನೆಯಿಂದ ಹಳದಿಯವರೆಗಿನ ಬಣ್ಣ ಹೊಂದಿರುತ್ತವೆ,ಉಪತೊಟ್ಟುಸಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು 2 ಕೋಶಗಳನ್ನೊಳಗೊಂಡಿರುತ್ತವೆ;ಬೀಜಗಳ ಸಂಖ್ಯೆ ಹಲವಾರು.

ಜೀವಪರಿಸ್ಥಿತಿ :

1600 ಮೀ.ಗೂ ಹೆಚ್ಚಿನ ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ,ಅಣ್ಣಾಮಲೈ,ಪಳನಿ ಬೆಟ್ಟಗಳು,ನೀಲಗಿರಿ ಮತ್ತು ಬಾಬಾಬುಡನ್ ಬೆಟ್ಟಗಳ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Bot. Tidsskr. 24: 332. 1902; Gamble, Fl. Madras 2: 613. 1993 (re. ed); Sasidharan, Biodiversity documentation for Kerala- Flowering Plants, part 6: 236. 2004; Almeida, Fl. Maharashtra 3:59. 2001.

Top of the Page