ಸೈಝೀಸಿಯಂ ತಮಿಲ್ನಾಡೆನ್ಸಿಸ್ Rathkr. & Chitra - ಮಿರ್ಟೇಸಿ

ಪರ್ಯಾಯ ನಾಮ : ಯೂಜೀನಿಯ ಮೊಂಟಾನ Wt.; ಸೈಝೀಸಿಯಂ ಮೊಂಟಾನಮ್(Wt.)Gamble

Vernacular names : Tamil: ಕಲ್ಲುನಜವಲ್, ಕಲ್ಮೋನಿ,ಪೊರಿಯಿಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 15 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ, ಬೂದು ಬಣ್ಣದಲ್ಲಿದ್ದು ಶಲ್ಕಾರೂಪದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದೃಢವಾಗಿದ್ದು, 4-ಕೋನಯುಕ್ತವಾಗಿರುತ್ತದೆ ಮತ್ತು ಸಂಕುಚಿತವಾದ ರೆಕ್ಕೆ ಸಮೇತವಿರುತ್ತವೆ ಹಾಗೂ ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.4-1.2 ಸೆಂ.ಮೀ. ಉದ್ದಹೊಂದಿದ್ದು ಮೇಲ್ಭಾಗದಲ್ಲಿ ಕಾಲುವೆ ಸಮೇತವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 6.5 – 12.5 X3.3-7.5 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತದಿಂದ ವಿಶಾಲಅಂಡವೃತ್ತ ಅಥವಾ ಬುಗುರಿಯ ಆಕಾರ,ಚೂಪಲ್ಲರೀತಿಯಿಂದ ಹಿಡಿದು ದುಂಡಾಗಿರುವರೆಗಿನ ತುದಿ,ಬೆಣೆಯಾಕಾರದ ಬುಡ,ನಯವಾದ ಅಂಚು, ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿರುತ್ತವೆ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು; ಮಧ್ಯ ನಾಳ ಮೇಲ್ಭಾಗದಲ್ಲಿ ಎದ್ದು ಕಾಣುವ ಕಾಲುವೆಗೆರೆಯ ಸಮೇತವಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ;ಎರಡನೇ ದರ್ಜೆಯ ನಾಳಗಳು ಅಂದಾಜು 12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಚಿಕ್ಕ ಗಾತ್ರದವುಗಳಾಗಿದ್ದು ತುದಿಯಲ್ಲಿನ ನೀಳಛತ್ರ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು, ಕೆನ್ನೀಲಿ ಬಣ್ಣ ಹೊಂದಿದ್ದು 0.8 ಸೆಂ.ಮೀ. ಅಡ್ಡಗಲತೆಯನ್ನು ಹೊಂದಿರುತ್ತವೆ,ಮುಕುಟದಲ್ಲಿ ಶಾಶ್ವತವಾದ ಪುಷ್ಪ ಪಾತ್ರೆಯನ್ನು ಹೊಂದಿರುತ್ತವೆಬೀಜದ ಸಂಖ್ಯೆ ಒಂದು..

ಜೀವಪರಿಸ್ಥಿತಿ :

1400 ಮತ್ತು 2400ಮೀ. ನಡುವಿನ ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯಮಲೈ ಬೆಟ್ಟಗಳು ಅಣ್ಣಾಮಲೈ ಮತ್ತು ನೀಲಗಿರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

NIR & Henry, Fl. Tamil Nadu, India 1: 158. 1983;Gamble, Fl. Madras 1: 479.1997(rep.ed.)Sasidharan, Biodiversity documentation for Kerala- Flowering Plants, part 6:179.2004.

Top of the Page