ಸೈಝೀಸಿಯಂ ಲ್ಯಾನ್ಸಿಯೋಲೇಟಮ್ (Lam.) Wt. & Arn. - ಮಿರ್ಟೇಸಿ

ಪರ್ಯಾಯ ನಾಮ : ಯೂಜೀನಿಯ ಲ್ಯಾನ್ಸಿಯೋಲೇಟಮ್ Lam.;ಸೈಝೀಸಿಯಂ ವೈಟಿಯಾನಮ್(Wt.)Gamble

Vernacular names : Tamil: ನ್ಜವಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 12 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ, ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯನ್ನು ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.4-0.6 ಸೆಂ.ಮೀ. ಉದ್ದಹೊಂದಿದ್ದು ತೆಳುವಾಗಿರುತ್ತವೆ ಮತ್ತು ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿದ್ದು ರೋಮರಹಿತವಾಗಿರುತ್ತವೆ; ಪತ್ರಗಳು 7.5X2.5 ಸೆಂ.ಮೀ.ನ ಗಾತ್ರವಿದ್ದು ಅಂಡವೃತ್ತದಿಂದ ಅಥವಾ ಅಂಡವೃತ್ತ-ಭರ್ಜಿಯ ಆಕಾರ ಹೊಂದಿದ್ದು ಕ್ರಮೇಣ ಚೂಪಾಗುವ ಅಥವಾ ಚೂಪಾದ ತುದಿಯನ್ನು ಹೊಂದಿದ್ದು ತಿರುಚಿಕೊಂಡಿರುತ್ತದೆ,ಬುಡ ಬೆಣೆಯಾಕಾರದಲ್ಲಿ ಅಥವಾ ಚೂಪಾಗಿರುತ್ತದೆ,ಅಂಚು ನಯವಾಗಿರುತ್ತದೆ,ಪತ್ರಗಳು ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿರುತ್ತವೆ ಮತ್ತು ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ ಮತ್ತು; ಮಧ್ಯ ನಾಳ ಕಾಲುವೆಗೆರೆಯ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮಾಂತರದಲ್ಲಿರುತ್ತವೆ ಮತ್ತು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಅಕ್ಷದ ಕಡೆಗಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿ ಮತ್ತು ತುದಿಯಲ್ಲಿನ ಮಧ್ಯಾರಂಭಿ ಮಾದರಿಯವು;ಹೂಗಳು ಬಿಳಿ;ಹೂ ತೊಟ್ಟುಗಳು 0.2 ಸೆಂ.ಮೀ. ಉದ್ದವಿರುತ್ತವೆ;ಪುಷ್ಪಪಾತ್ರೆಯ ಕೊಳವೆ ಪ್ರಣಾಳದ ರೂಪದಲ್ಲಿರುತ್ತವೆ
ಕಾಯಿ / ಬೀಜ : ಬೆರ್ರಿ ಫಲಗಳು 1.2 ಸೆಂ.ಮೀ. ಉದ್ದವನ್ನು ಹೊಂದಿದ್ದು ಅಂಡ- ತಲೆಕೆಳಗು ಶಂಖುವಿನ ಆಕಾರ ಹೊಂದಿದ್ದು,ಪ್ರಕಾಶಮಾನವಾದ ಕಡುಗೆಂಪು ಬಣ್ಣ ಹೊಂದಿದ್ದು ಮುಕುಟದಲ್ಲಿ ಶಾಶ್ವತವಾದ ಪುಷ್ಪ ಪಾತ್ರೆಯನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

600 ಮತ್ತು 1200ಮೀ. ನಡುವಿನ ಎತ್ತರದ ಪ್ರದೇಶಗಳಲ್ಲಿನ ತೇವಾಂಶದಿಂದ ಕೂಡಿದ ನಿತ್ಯ ಹರಿದ್ವರ್ಣ ಕಾಡುಗಳ ಒಳ ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ದಕಷ್ಇಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಆಗಾಗ್ಗೆಯೂ ಮಹಾರಾಷ್ಟ್ರದ ಸಹ್ಯಾದ್ರಿಯಲ್ಲಿ ಅಪರೂಪವಾಗಿಯೂ ಕಂಡುಬರುತ್ತದೆ.

ಗ್ರಂಥ ಸೂಚಿ :

Prodr. 330. 1834; Gamble, Fl. Madras 1: 478.1997 (re.ed); Sasidharan, Biodiversity documentation for Kerala- Flowering Plants, part 6: 177. 2004; Saldanha, Fl. Karnataka 2: 32. 1996; Cook, Fl. Bombay 1: 489. 1903; Almeida, Fl. Maharashtra 2:272. 1998

Top of the Page