ಸೈಝೀಸಿಯಂ ಹೆಮಿಸ್ಪೆರಿಕಂ (Wt.) Alston - ಮಿರ್ಟೇಸಿ

ಪರ್ಯಾಯ ನಾಮ : ಯೂಜೀನಿಯ ಹೆಮಿಸ್ಪೆರಿಕ Wt.;ಜಾಂಬೋಸ ಹೆಮಿಸ್ಪೆರಿಕ Walp.

Vernacular names : Tamil: ಪಯನ್ಜವಲ್,ತೋಲ್ಜಾವಲ್,ವೆಂಜರ, ವೆನ್ - ನ್ಯಾರಲ್Malayalam: ಬನ ನೇರಳೆ , ಕಾಡು ಪನ್ನೇರಳೆ, ಮಕ್ಕಿ ನೇರಳೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.5-1.5 ಸೆಂ.ಮೀ. ಉದ್ದಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು ಹಾಗೂ 7.5–19 X 2.5–8 ಸೆಂ.ಮೀ.ವರೆಗಿನ ಗಾತ್ರವಿದ್ದು ಬುಗುರಿ-ಭರ್ಜಿಯ ಆಕಾರ,ತಿರುಚಿಕೊಂಡ ಅಗ್ರವುಳ್ಳ ಕ್ರಮೇಣ ಚೂಪಾಗುವ ಮೊಂಡಾಗ್ರವುಳ್ಳ ಚೂಪಾದ ತುದಿ, ಚೂಪಾದದುದರಿಂದ ಹಿಡಿದು ಬೆಣೆಯಾಕಾರದ ಬುಡ,ನಯವಾದ ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿದ್ದು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯ ನಾಳ ಕೊಂಚವಾಗಿ ಕಾಲುವೆಗೆರೆ ಸಮೇತವಿರುತ್ತದೆ;ಅಂತರ ಅಂಚಿನ ನಾಳಗಳು ಇರುತ್ತವೆ (ಕೆಲವು ವೇಳೆ ಅಸ್ಪಷ್ಟವಾಗಿರುತ್ತವೆ);ಎರಡನೇ ದರ್ಜೆಯ ನಾಳಗಳು 8-12 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಲಂಬ ಕೋನಕ್ಕೆ ಅಡ್ಡವಾಗಿದ್ದು, ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಬಿಳಿ ಬಣ್ಣದಲ್ಲಿದ್ದು ತುದಿಯಲ್ಲಿನ ಮಧ್ಯಾರಂಭಿ ಪುಷ್ಪಮಂಜರಿಯಲ್ಲಿರುತ್ತವೆ;ಹೂ ತೊಟ್ಟುಗಳು 0.5 ಸೆಂ.ಮೀ. ಉದ್ದವಿರುತ್ತವೆ;ಪುಷ್ಪಪಾತ್ರೆಯ ಕೊಳವೆ ತಲೆಕೆಳಗಾದ ಶಂಖುವಿನ ಆಕಾರದಲ್ಲಿರುತ್ತದೆ.
ಕಾಯಿ / ಬೀಜ : ಬೆರ್ರಿ ಫಲಗಳು 2-2.5ಸೆಂ.ಮೀ. ಅಡ್ಡಗಲತೆಯಿದ್ದು ಅರ್ಧಗೋಳಾಕೃತಿಯಲ್ಲಿದ್ದು ಕೆನ್ನೀಲಿ ಬಣ್ಣ ಹೊಂದಿದ್ದು ಮುಕುಟದಲ್ಲಿ ಪುಷ್ಪಪಾತ್ರೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

1400ಮೀ. ಎತ್ತರದ ಪ್ರದೇಶಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳಒಳಛಾವಣಿಯಿಂದ ಉಪಛಾವಣಿಯವರೆಗೆ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ಮಹಾರಾಷ್ಟ್ರದ ಸಹ್ಯಾದ್ರಿ ಫ್ರದೇಶದಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Trimen, Hand. Fl. Ceylon 6(Suppl.):115.1931;Gamble, Fl. Madras 1:479.1997(rep.ed.); Sasidharan, Biodiversity documentation for Kerala- Flowering Plants, part 6:177.2004.

Top of the Page