ಸೈಝೀಸಿಯಂ ಗಾರ್ಡ್ನೆರಿ Thw. - ಮಿರ್ಟೇಸಿ

ಪರ್ಯಾಯ ನಾಮ : ಯೂಜೀನಿಯ ಗಾರ್ಡ್ನೆರಿ (Thw.)Bedd.

Vernacular names : Tamil: ಕರಿಂಜವಲ್,ಕಟ್ಟಾಯಿರಿ,ಕಟ್ಟುಂಜರ, ಅಟ್ಟುಂಜವಲ್,ಕರಿಂಜರ,ನೀರ್ಜವಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 60 ಮೀ. ಎತ್ತರದವರೆಗೆ ಬೆಳೆಯುವ, ಆನಿಕೆ ಬೇರುಗಳನ್ನೊಳಗೊಂಡ ಬೃಹತ್ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬಿಳಿ ಅಥವಾ ತೆಳು ಸಾಮಾನ್ಯವಾಗಿ ಅನಿಯತವಾಗಿ ಬಿರುಕುಗೊಂಡ ಚಕ್ಕೆ ಸಮೇತವಾಗಿರುತ್ತವೆ; ಕಚ್ಚು ಮಾಡಿದ ಜಾಗ ಕಂದು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾದರಿಂದ ಕೊಂಚ 4-ಕೋನಯುಕ್ತವರೆಗಿನ ಮಾದರಿಯಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖವಾಗಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ; ತೊಟ್ಟುಗಳು 0.4 – 1.3 ಸೆಂ.ಮೀ. ವರೆಗಿನ ಉದ್ದಹೊಂದಿದ್ದು ಕಾಲುವೆಗೆರೆ ಸಮೇತವಿರುತ್ತವೆ ಮತ್ತುರೋಮರಹಿತವಾಗಿರುತ್ತವೆ;ಪತ್ರಗಳು5 –10 X 2.5 – 4 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತದ ಆಕಾರ (ಎಳೆಯ ಸಸಿಗಳಲ್ಲಿ ರೇಖಾತ್ಮಕವಾಗಿದ್ದು ನಂತರ ಸಂಕುಚಿತ ಚತುರಸ್ರವಾಗುತ್ತವೆ),ಬಾಲರೂಪಿ ಅಥವಾ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಹಿಡಿದು ಒಳಬಾಗಿದ ಮಾದರಿವರೆಗಿನ ಬುಡ,ನಯವಾದ ಅಂಚು,ಪ್ರಕಾಶ ಭೇಧ್ಯ ರಸಗ್ರಂಥಿ ಚುಕ್ಕೆಗಳ ಸಮೇತವಿದ್ದು ಕಾಗದವನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ,ಎಲೆಗಳು ಎಳೆಯದಾಗಿದ್ದಾಗ ನಸುಗೆಂಪು ಬಣ್ಣದಲ್ಲಿರುತ್ತವೆ;ಮಧ್ಯ ನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಅಂಚಿನ ನಾಳಗಳು ಇರುತ್ತವೆ; ಎರಡನೇ ದರ್ಜೆಯ ನಾಳಗಳು ಅನೇಕವಿದ್ದು ಹತ್ತಿರವಾಗಿರುತ್ತವೆ ಹಾಗೂ ಸಮಾಂತರದಲ್ಲಿರುತ್ತವೆ ;ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು ಎಲೆಯ ಅಕ್ಷದ ಕಡೆಗೆ ಕವಲುಗೊಂಡಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ತುದಿಯಲ್ಲಿನ ಮಧ್ಯಾರಂಭಿ ನೀಳಛತ್ರ ಮಾದರಿಯಲ್ಲಿರುತ್ತವೆ;ಹೂಗಳು ಬಿಳಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಬೆರ್ರಿ ಫಲಗಳು ಉಪಗೋಳಾಕಾರದ ಆಕಾರದಲ್ಲಿದ್ದು ಮುಕುಟದಲ್ಲಿ ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಸಮೇತವಿರುತ್ತವೆ ಮತ್ತು ಕೆನ್ನೀಲಿ ಬಣ್ಣ ಹೊಂದಿರುತ್ತವೆ;ಬೀಜ ಒಂದು

ಜೀವಪರಿಸ್ಥಿತಿ :

1400ಮೀ.ವರೆಗಿನ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿ ಮತ್ತು ಹೊರಹೊಮ್ಮುವ ಮರಗಳಾಗಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಮತ್ತು ಶ್ರೀಲಂಕಾ: ಪಶ್ಚಿಮ ಘಟ್ಟದಲ್ಲಿನ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಫ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಸ್ಥಿತಿ :

ದುರ್ಬಲ ಸ್ಥಿತಿ(IUCN,2000).

ಗ್ರಂಥ ಸೂಚಿ :

Enum. Pl. Zeyl. 117.1859Gamble, Fl. Madras 1:479.1997(rep.ed.); Sasidharan, Biodiversity documentation for Kerala- Flowering Plants, part 6:177.2004.

Top of the Page