ಸಿಂಪ್ಲೊಕಾಸ್ ವೈನಾಡೆನ್ಸೆ (O. Ktze.) Noot. - ಸಿಂಪ್ಲೊಕೇಸಿ

ಪರ್ಯಾಯ ನಾಮ : ಯೂಜೀನಿಯಾಯ್ಡಿಸ್ ವೈನಾಡೆನ್ಸೆ O.Ktze; ಸಿಂಪ್ಲೊಕಾಸ್ ಅಕ್ಯುಮಿನೇಟ Bedd.

Vernacular names : Tamil: ಪಚೊಟ್ಟಿ,ಪೊಡಿಪರಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 7 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಉಪದುಂಡಾಗಿದ್ದು, ಎಳೆಯದಾಗಿದ್ದಾಗ ರೋಮಸಹಿತವಿದ್ದು ನಂತರ ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 – 1.4 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು, ಬಲಿತಾಗ ರೋಮರಹಿತವಾಗಿರುತ್ತವೆ; ಪತ್ರಗಳು 4.5 – 10 X 2– 3.5 ಸೆಂ.ಮೀ. ಗಾತ್ರ,ಅಂಡ -ಅಂಡವೃತ್ತದ ಆಕಾರ ಹೊಂದಿದ್ದು,ಅಗ್ರದಲ್ಲಿ ಮೊನಚು ಮುಳ್ಳನ್ನೊಳಗೊಂಡ ಬಾಲರೂಪಿ - ಕ್ರಮೇಣ ಚೂಪಾಗುವ ತುದಿ, ಒಳಬಾಗಿದ – ತಳಭಾಗಕ್ಕೆ ವಿಸ್ತರಿಸಿದ ಮಾದರಿಯ ಬುಡ ಹೊಂದಿದ್ದು,ಗರಗಸ ದಂತಿತವಾದ ಮತ್ತು ಹಿಂಸುರುಳಿಗೊಂಡ ಅಂಚು ಹೊಂದಿದ್ದುಬಲಿತಾಗ ರೋಮರಹಿತವಾಗಿರುತ್ತವೆ,ಒಣಗಿದಾಗ ಹಸಿರು ಛಾಯೆ ಹೊಂದಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 5 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ ಅಥವಾ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವುಗಳಾಗಿದ್ದು, 14 ಸೆಂ.ಮೀ. ವರೆಗಿನ ಉದ್ದವಿರುತ್ತವೆ,ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ;ಹೂ ತೊಟ್ಟುಗಳು ಅಂದಾಜು 0.5 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡವೃತ್ತ ಅಥವಾ ಚತುರಸ್ರಾಕಾರದಲ್ಲಿದ್ದು ಅಂದಾಜು1.2 ಸೆಂ.ಮೀ. ಉದ್ದವಿರುತ್ತವೆ;ಬೀಜಗಳ ಸಂಖ್ಯೆ 1 ರಿಂದ 2.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಗಸ್ತ್ಯ ಮಲೈ,ವರುಶುನಾಡು ಮತ್ತು ವಯನಾಡಿನಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Nooteb. Rev. Symplocac. 293. 1975; Gamble, Fl. Madras 2: 783. 1993 (re.ed.); Sasidharan, Biodiversity documentation for Kerala- Flowering Plants, part 6: 274. 2004; Nooteb., Rev. Symplocac. 293. 1975.

Top of the Page