ಸಿಂಪ್ಲೊಕಾಸ್ ರೆಸಿಮೋಸ Roxb. - ಸಿಂಪ್ಲೊಕೇಸಿ

ಪರ್ಯಾಯ ನಾಮ : ಸಿಂಪ್ಲೊಕಾಸ್ ಬೆಡ್ಡೋಮಿಯೈ Cl.; ಸಿಂಪ್ಲೊಕಾಸ್ ಕ್ಯಾಂಡೋಲ್ಲಿಯಾನ Brand.; ಸಿಂಪ್ಲೊಕಾಸ್ ರೆಸಿಮೋಸ Roxb. var. ರೆಸಿಮೋಸ

Vernacular names : Tamil: ಪಚೊಟ್ಟಿಯೈ,ಪೊಡಿಪರಿMalayalam: ಬಲ ದೊಡ್ಡ್ಲಿ, ಬಲ ಲೊಡ್ಡಿ,ಲೊಡ್ಡುಗನ ಮರ,ಲೋಧ್ರ, ಪಾಜೆಟ್ಟುಮರ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು,ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕೆನೆ ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು, ರೋಮರಹಿತವಾಗಿರುತ್ತವೆ, ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 1.5 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 6.5 – 12.5 X3– 4 .3 ಸೆಂ.ಮೀ. ಗಾತ್ರ, ಬುಗುರಿ ಭರ್ಜಿಯಿಂದ ಸಂಕುಚಿತ ಅಂಡವೃತ್ತದವರೆಗಿನ ಆಕಾರ ಹೊಂದಿದ್ದು, ಸಂಕುಚಿತವಾಗಿ ಕ್ರಮೇಣ ಚೂಪಾಗುವ ತುದಿ, ಚೂಪಾದುದರಿಂದ ಒಳಬಾಗಿದ ಮಾದರಿವರೆಗಿನ ಬುಡ ,ಗರಗಸ ದಂತಿತವಾದ ಮತ್ತು ಸ್ವಲ್ಪ ಮಟ್ಟಿಗೆ ಹಿಂಸುರುಳಿಗೊಂಡ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು 6-12 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು,ಅಂತರ ಹೊಂದಿದ್ದು ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾಭಿಸರ ಮಾದರಿಯವುಗಳಾಗಿದ್ದು, ಅಂದಾಜು 14 ಸೆಂ.ಮೀ. ಉದ್ದವಿರುತ್ತವೆ,ದಟ್ಟ ಮೃದುತುಪ್ಪಳದಿಂದ ಕೂಡಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡವೃತ್ತ ಅಥವಾ ಚತುರಸ್ರಾಕಾರದಲ್ಲಿದ್ದಿ ಅಂದಾಜು1.5 ಸೆಂ.ಮೀ. ಉದ್ದವಿರುತ್ತವೆ;ಬೀಜಗಳ ಸಂಖ್ಯೆ 1 ರಿಂದ 2.

ವ್ಯಾಪನೆ :

ಇಂಡೋಚೈನ ;ಪಶ್ಚಿಮ ಘಟ್ಟದ ದಕ್ಷಿಣ,ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರ ಸಹ್ಯಾದ್ರಿ ಪ್ರದೇಶಗಳಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Roxbourgh, Fl. India 2: 539. 1832; Gamble, Fl. Madras 2: 782. 1993 (re.ed.); Sasidharan, Biodiversity documentation for Kerala- Flowering Plants, part 6: 274. 2004. Nooteb., Rev. Symplocac. 273. 1975.

Top of the Page