English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
ಪ್ರಕೃತಿ : | 10 ಮೀ.ಎತ್ತರದವರೆಗಿನ ಸಣ್ಣ ಮರಗಳು. |
ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ಉಪದುಂಡಾಗಿದ್ದು ರೋಮರಹಿತವಾಗಿರುತ್ತವೆ |
ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 1-1.5 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 5.5 – 9.5 X 2.5 – 4 ಸೆಂ.ಮೀ. ಗಾತ್ರ, ಅಂಡವೃತ್ತದಿಂದ ಬುಗುರಿವರೆಗಿನ ಆಕಾರ ಹೊಂದಿದ್ದು, ಚೂಪಾದ ತುದಿ, ಬೆಣೆಯಾಕಾರದ ಬುಡ, ಗರಗಸ ದಂತಿತವಾದ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 8 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ. |
ಪುಷ್ಪಮಂಜರಿ / ಹೂಗಳು : | ಹೂಗಳು ಒಂಟಿಯಾಗಿ ಅಥವಾ 3 ಒಟ್ಟಿಗಿರುತ್ತವೆ,ವೃಂತದ ಸಮೇತವಿದ್ದು ಅಕ್ಷಾಕಂಕುಳಿನಲ್ಲಿ ಅಥವಾ ಪಾರ್ಶ್ವದಲ್ಲಿ ಇದ್ದು ಲೋಲಾಡುತಿರುತ್ತವೆ;ಹೂತೊಟ್ಟುಗಳು ಅಂದಾಜು 0.2 ಸೆಂ.ಮೀ.ವರೆಗಿನ ಉದ್ದವಿರುತ್ತವೆ. |
ಕಾಯಿ / ಬೀಜ : | ಡ್ರೂಪ್ಗಳು ಕದಿರಣಿಗೆ ಆಕಾರದಲ್ಲಿದ್ದು 1.5 ಸೆಂ.ಮೀ. ಉದ್ದವಿರುತ್ತವೆ. |