English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 30 ಮೀ.ನವರೆವಿಗೆ ಬೆಳೆಯುವ ದೊಡ್ಡ ಗಾತ್ರದ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆಹಸಿರು ಮಿಶ್ರಿತ ಬೂದು ಬಣ್ಣ ಹೊಂದಿದ್ದು ಬೋಗುಣಿಯಾಕಾರದ ಕುಳಿ ರೂಪದಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪಾಗಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕವಲುಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಕಿರುಕೊಂಬೆಗಳು ಹಸಿರಾಗಿದ್ದು ತೆಳುವಾಗಿರುತ್ತವೆ ಮತ್ತು ಜೋತಾಡುವ ರೀತಿಯಲ್ಲಿದ್ದು ದುಂಡಾಗಿರುತ್ತವೆ ಹಾಗೂ ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮಾದರಿಯಲ್ಲಿ ಜೋಡನೆಗೊಂಡಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ತೊಟ್ಟುಗಳು 0.8 -2.2 ಸೆಂ.ಮೀ. ಉದ್ದವಿದ್ದು ಕಾಲುವೆಗೆರೆ ಸಮೇತವಿರುತ್ತವೆ, ಸಾಮಾನ್ಯವಾಗಿ ಮೇಲಿನ ಅರ್ಧ ಬಾಗ ದಪ್ಪವಾಗಿರುತ್ತದೆ,ತೊಟ್ಟುಗಳು ರೊಮರಹಿತವಾಗಿರುತ್ತವೆ;ಪತ್ರಗಳು 8-18 ´ 4-6.5 ಸೆಂ.ಮೀ.ಗಾತ್ರ ಹೊಂದಿದ್ದು,ಸಾಮಾನ್ಯವಾಗಿ ಅಂಡದ ಆಕೃತಿಯಿಂದ ಚತುರಸ್ರ-ಅಂಡದ ಹೊಂದಿದ್ದು ಸ್ವಲ್ಪಮಟ್ಟಿಗೆ ಕ್ರಮೇಣ ಚೂಪಾಗುವುದರಿಂದ ಚೂಪಾದ ಅಥವಾ ಚೂಪಲ್ಲದ ಮಾದರಿವರೆಗಿನ ತುದಿ,ದುಂಡಾದ ಅಥವಾ ಕೊಂಚ ಒಳಬಾಗಿದ ಮಾದರಿಯ ಬುಡ,ನಯವಾದ ಅಂಚು,ಉಪ-ತೊಗಲನ್ನೊಲುವ ಮೇಲ್ಮೈ ಹೊಂದಿದ್ದು ಪತ್ರಗಳ ತಳಭಾಗ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 4 ರಿಂದ 6, ಆರೋಹಣ ಮಾದರಿಯಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ತೆಳುವಾಗಿದ್ದು,ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವು ಅಥವಾ ಸಣ್ಣ ಗುಬುಟುಗಳ ಮೇಲೆ ಗುಛ್ಛಗಳ ಮಾದರಿಯವುಗಳಾಗಿರುತ್ತವೆ;ಹೂಗಳು ಉಪ-ತೊಟ್ಟನ್ನು ಹೊಂದಿದ್ದು ಹಸಿರು ಮಿಶ್ರಿತ ಬಿಳಿ ಬಣ್ಣದವು. |
| ಕಾಯಿ / ಬೀಜ : | ಡ್ರೂಪ್ಗಳು ಎಳೆಯದಾಗಿದ್ದಾಗ ಗದೆಯ ಆಕಾರದಲ್ಲಿದ್ದು ನಂತರ ಗೋಳಾಕಾರದಲ್ಲಿರುತ್ತವೆ, ಕಳೆತಾಗ ದಟ್ಟ ಕಡುನೀಲಿ ಬಣ್ಣ ಹೊಂದಿರುತ್ತವೆ; ಬೀಜ ಒಂದು. |