English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 20 ಮೀ ಎತ್ತರದವರೆಗಿನಎಲೆಯುದುರುವ,ದೊಡ್ಡ ಗಾತ್ರದ ಮರಗಳು. |
| ಕಾಂಡ ಮತ್ತು ತೊಗಟೆ : | ಕಾಂಡ ಕೊರಕಲುಗಳನ್ನೊಳಗೊಂಡಿರುತ್ತದೆ;ತೊಗಟೆ ಬೂದು ಬಣ್ಣದಲ್ಲಿದ್ದು ಅನಿಯತವಾಗಿ ಚಕ್ಕೆಯೇಳುವ ರೀತಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪಾಗಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಮೃದು ತುಪ್ಪಳದಿಂದ ಕೂಡಿರುತ್ತವೆ. |
| ಎಲೆಗಳು : | ಎಲೆಗಳು ಸಂಯುಕ್ತವಾಗಿದ್ದು ಸಮಗರಿ ರೂಪಿಗಳಾಗಿರುತ್ತವೆ, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ಉಬ್ಬಿದ ಬುಡದ ಸಮೇತವಿದ್ದು, ರೋಮರಹಿತವಾಗಿರುತ್ತದೆ;ಉಪತೊಟ್ಟು 0.3 ಸೆಂ.ಮೀ.ವರೆಗಿನ ಉದ್ದವಿದ್ದು, ರೋಮರಹಿತವಾಗಿರುತ್ತದೆ;ಉಪಪತ್ರಗಳು 2 ರಿಂದ 3 ಜೋಡಿಗಳಿದ್ದು, ಅಭಿಮುಖಿ -ಯಾಗಿರುತ್ತವೆ, ಮತ್ತು ಮೇಲೆ ಹೋದಂತೆಲ್ಲಾ ಗಾತ್ರ ಹೆಚ್ಚುತ್ತಾ ಹೋಗುತ್ತದೆ, ಗಾತ್ರದಲ್ಲಿ 4-26 X 1.8 - 9 ಸೆಂ.ಮೀ. ಹೊಂದಿದ್ದು,ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ,ಅಂಡವೃತ್ತ-ಚತುರಸ್ರದಿಂದ ಬುಗುರಿಭರ್ಜಿ-ಬುಗರಿ ರೀತಿಯವರೆಗಿನ ಆಕಾರ,ದುಂಡಾಗಿರುವ ಕೆಲವು ವೇಳೆ ಅಗ್ರದಲ್ಲಿ ಧೀರ್ಘ ಕಚ್ಚುಳ್ಳ ಮಾದರಿಯ ತುದಿ, ಅಸಮ್ಮಿತಿಯಾದ,ಬೆಣೆಯಾಕಾರದದಿಂದ ದುಂಡಾಗಿರುವರೆಗಿನ ಮಾದರಿಯ ಬುಡ, ನಯವಾದ ಅಂಚು,ತೆಳು ತೊಗಲನ್ನೋಲುವ ಮೇಲ್ಮೈ ಹೊಂದಿದ್ದು ರೋಮರಹಿತ -ವಾಗಿರುತ್ತವೆ;ಮಧ್ಯನಾಳ ಮೇಲ್ಭಾಗದಲ್ಲಿ ತೆಳುವಾಗಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು ಅಂದಾಜು 16 ಜೋಡಿಗಳಿದ್ದು, ನೇರವಾಗಿದ್ದು,ಅಂಚಿನ ಬಳಿ ಬಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಅಕ್ಷಾಕಂಕುಳಿನಲ್ಲಿನ ಪುನಾರಾವೃತ್ತಿಯಾಗಿ ಕವಲೊಡೆಯುವ ಮಾದರಿಯವು;ಹೂಗಳು ಸಂಕೀರ್ಣಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ ಮತ್ತು ಉಪತೊಟ್ಟುಗಳನ್ನು ಹೊಂದಿರುತ್ತವೆ. |
| ಕಾಯಿ / ಬೀಜ : | ಡ್ರೂಪ್ಗಳು1.5 X 1ಸೆಂ.ಮೀ ಗಾತ್ರ ಹೊಂದಿದ್ದು,ಅಂಡವೃತ್ತದ ಆಕಾರದಲ್ಲಿದ್ದು, ಅಗ್ರದಲ್ಲಿ ಸೂಕ್ಷ್ಮ ಮೊನಚು ಮುಳ್ಳಿನ ಸಮೇತವಿರುತ್ತವೆ ಹಾಗೂ ಕಂಟಕ ಚರ್ಮದ ಸಮೇತವಿರುತ್ತವೆ;ಬೀಜಗಳು 1 ರಿಂದ 2 ಇದ್ದು, ಪತ್ರೆಯಿಂದ ಆವೃತಗೊಂಡಿರುತ್ತವೆ. |