English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 15ಮೀ ಎತ್ತರದವರೆಗೆ ಬೆಳೆಯುವ ಮರಗಳು. |
| ಜಿನುಗು ದ್ರವ : | |
| ಎಲೆಗಳು : | ಎಲೆಗಳು ಹಸ್ತರೂಪಿ ಸಂಯುಕ್ತ ಎಲೆ ಮಾದರಿಯವು. ಎಳೆಯ ಎಲೆಗಳು ಉಣ್ಣೆ ಸಮೇತವಾಗಿ-ರುತ್ತವೆ. ಪರ್ಯಾಯ ಹಾಗೂ ಸುತ್ತ ಜೋಡನಾ ವ್ಯವಸ್ಥೆಯನ್ನು ಹೊಂದಿದ್ದು, ತಳಭಾಗದಲ್ಲಿ ಒರೆ ಸಮೇತವಾದ ಉಬ್ಬನ್ನು ಹೊಂದಿರುತ್ತದೆ. ಕಾವಿನೆಲೆ ಎಲೆತೊಟ್ಟಿಗೆ ಅಂಟಿಕೊಂಡಿರುತ್ತದೆ. ಕಿರುತೊಟ್ಟುಗಳು 5 ಸೆಂ.ಮೀ.ನ ಉದ್ದದವರೆಗೆ ಇರುತ್ತದೆ. ಕಿರು ಎಲೆಗಳು 6 ರಿಂದ 8 (ಕೆಲವು ವೇಳೆ 11ರವೆರೆಗೆ) ಇದ್ದು ಪತ್ರ 8 ರಿಂದ 17.5 ಸೆಂ.ಮೀ.ಉದ್ದದ 3.8 ರಿಂದ 5.5ಸೆಂ.ಮೀ. ಅಗಲಹೊಂದಿದ್ದು ಅಂಡವೃತ್ತ ಚತುರಸ್ರ ಆಕಾರದಲ್ಲಿದ್ದು, ಚೂಪಾದ ಅಥವಾ ಕ್ರಮೇಣ ಚೂಪು ಮಾದರಿಯ ತುದಿ ಹಾಗೂ ಗುಂಡಾದ ಅಥವಾ ಭಿನ್ನಾಗ್ರ ಬುಡವನ್ನು ಹಾಗೂ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತದೆ. ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ; ಎರಡನೇ ದರ್ಜೆಯ ನಾಳಗಳು ತೆಳುವಾದ 13 ರಿಂದ 16 ಜೋಡಿಗಳಿರುತ್ತವೆ. ತೃತೀಯ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸವನ್ನು ಹೊಂದಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳನ್ನು ಹೊಂದಿದ ಪೀಠಛತ್ರ ಮಂಜರಿ ಉತ್ಕೃಷ್ಟ ಅಥವಾ ದಪ್ಪನೆಯ ಕವಲುಗಳ ಮೇಲಿರುವ ಕವಲೊಡೆದ ಪುಷ್ಪಮಂಜರಿಯಲ್ಲಿರುತ್ತವೆ. |
| ಕಾಯಿ /ಬೀಜ : | ಕಾಯಿಗಳು ಡ್ರೂಪ್ ಮಾದರಿಯವು; ಬೀಜಗಳು ಸಂಕುಚಿತವಾಗಿರುತ್ತವೆ. |