English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | 20 ಮೀ. ಎತ್ತರದವರೆಗೆ ಬೆಳೆಯುವ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ಸೂಕ್ಷ್ಮವಾದ ಬೂದು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತದೆ. |
| ಎಲೆಗಳು : | ಎಲೆಗಳು ಸಂಯುಕ್ತ, ಅಸಮ ಸಂಖ್ಯೆಯ ಗರಿಗಳನ್ನು ಹೊಂದಿರುತ್ತವೆ ಮತ್ತು ಪರ್ಯಾಯ,ಸುತ್ತು ಜೋಡನೆಯಲ್ಲಿದ್ದು 1ಮೀ ವರೆಗಿನ ಉದ್ದವನ್ನು ಹೊಂದಿರುತ್ತದೆ ಹಾಗೂ ಉಬ್ಬಿದ ಎಲೆ ಬುಡವನ್ನು ಹೊಂದಿರುತ್ತವೆ; ನಡುಕಾಂಡ 4.2-11.5 ಸೆಂ.ಮೀ. ವರೆಗಿನ ಉದ್ದವನ್ನು ಹೊಂದಿರುತ್ತದೆ; ಕಿರುತೊಟ್ಟುಗಳು 0.5- 0.8 ಸೆಂ.ಮೀ. ಉದ್ದವಿರುತ್ತವೆ; ಕಿರುಪತ್ರಗಳು 5-7ಇದ್ದು ಪರ್ಯಾಯ ರೀತಿಯಲ್ಲಿ ಜೋಡಿತಗೊಂಡಿರುತ್ತವೆ ಮತ್ತು 12 X 5 ಸೆಂ. ಮೀ.ವರೆಗಿನ ಗಾತ್ರ, ಅಂಡವೃತ್ತ- ಈಟಿಯ ಆಕಾರ, ಕ್ರಮೇಣ ಚೂಪಾಗುವ ತುದಿ,ಬೆಣೆಯಾಕಾರದ ಬುಡ,ನಯವಾದ ಅಂಚು, ಚರ್ಮದ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 5 – 8 ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ರೋಮಸಹಿತವಾದ ಸಹಜೀವಿ ಗೂಡುಗಳನ್ನು ಹೊಂದಿರುತ್ತವೆ;ಮೂರನೇ ದರ್ಜೆಯ ನಾಳಗಳ ಕವಲುಗಳು ಎಲೆಯ ಅಕ್ಷದ ದಿಕ್ಕಿನಲ್ಲಿರುತ್ತವೆ . |
| ಪುಷ್ಪಮಂಜರಿ / ಹೂಗಳು : | ಪುಷ್ಪಮಂಜರಿಗಳು ಸಂಕೀರ್ಣ ಲಿಂಗಿಯಾಗಿದ್ದು ದ್ವಿಲಿಂಗಿ,ಹೆಣ್ಣು ಮತ್ತು ದ್ವಿಲಿಂಗಿ ಹಾಗೂ ಗಂಡು ಹೂಗಳು ಬೇರೆ ಬೇರೆ ಸಸ್ಯಗಳಲ್ಲಿರುತ್ತವೆ,ಹೂಗಳ ಬಣ್ಣ ಹಳದಿ;ಗಂಡು ಹೂಗಳು ಪುನರಾವೃತ್ತಿಯಾಗಿ ಕವಲೊಡೆಯುವ ಮಧ್ಯಾಭಿಸರ ಮಾದರಿಯವು;ಹೆಣ್ಣು ಹೂಗಳು ಕದಿರು ಮಂಜರಿ ಅಥವಾ ಮಧ್ಯಾಭಿಸರ ಮಂಜರಿಯಲ್ಲಿರುತ್ತವೆ. |
| ಕಾಯಿ / ಬೀಜ : | ಬೆರ್ರಿ ಫಲ ಚತುರಸ್ರದ ಆಕಾರದಲ್ಲಿದ್ದು ಅಂದಾಜು 1.8 ಸೆಂ.ಮೀ ಉದ್ದ ಹೊಂದಿರುತ್ತದೆ ಮತ್ತು ಬಿಳಿಯ ಬಣ್ಣ ಹೊಂದಿರುತ್ತದೆ; ಬೀಜಗಳು 1 ರಿಂದ 2 ಇದ್ದು ಬಿಳಿ ಬಣ್ಣದ ತಿರುಳುಳ್ಳ ಪತ್ರೆಯ ಸಮೇತವಿರುತ್ತದೆ |