ರಪಾನಿಯ ವೈಟಿಯಾನ Mez. - ಮಿರ್ಸಿನೇಸಿ

ಪರ್ಯಾಯ ನಾಮ : ಮಿರ್ಸೈನ್ ಕ್ಯಾಪಿಟೆಲ್ಲೇಟ Wall. var.ಲ್ಯಾನ್ಸಿಯೋಲೇಟ Cl.; ಮಿರ್ಸೈನ್ ವೈಟಿಯಾನ Wall. ex DC.

Vernacular names : Tamil: ಚೀರ ಮರಂ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 10 ಮೀ. ಎತ್ತರದವರೆಗಿನ ಸಣ್ಣ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಬಣ್ಣದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿದ್ದು ಎಲೆಯುದುರಿದ ಗುರುತುಗಳನ್ನು ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ, ಸುತ್ತು ಮತ್ತು ಉಪ-ಆವರ್ತನಾ ಜೋಡಣೆ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 0.5 – 1 ಸೆಂ.ಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 4 - 8 X1 – 2.3 ಸೆಂ.ಮೀ.ವರೆಗಿನ ಗಾತ್ರವಿದ್ದು ಅಂಡವೃತ್ತ- ಅಂಡ-ಭರ್ಜಿಯ ಆಕಾರ ಹೊಂದಿದ್ದು, ಚೂಪಲ್ಲದ ತುದಿ, ಒಳಬಾಗಿದ ಬುಡ,ನಯವಾದ ಅಂಚು ಹೊಂದಿರುತ್ತವೆ,ಪತ್ರಗಳು ರೋಮರಹಿತವಾಗಿದ್ದು ಚುಕ್ಕೆ ರೂಪದ ರಸಗ್ರಂಥಿ ಮತ್ತು ರೇಖೆಗಳನ್ನೊಳಗೊಂಡಿರುತ್ತವೆ ಮತ್ತು ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ;ಮಧ್ಯ ನಾಳ ಚಪ್ಪಟೆಯಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪ ಮಂಜರಿಗಳು ಸಣ್ಣ ವೃಂತ ಸಮೇತ ಅಥವಾ ವೃಂತರಹಿತವಾಗಿದ್ದು ಪೀಠಛತ್ರ ಮಾದರಿಯವುಗಳಾಗಿರುತ್ತವೆ;ಹೂಗಳು ಸಂಕೀರ್ಣ ಲಿಂಗಿಗಳು.
ಕಾಯಿ / ಬೀಜ : ಬೆರ್ರಿ ಫಲಗಳು ಗೋಳಾಕಾರದಲ್ಲಿದ್ದು ಶಾಶ್ವತವಾಗಿ ಉಳಿಯುವ ಶಲಾಖೆಯನ್ನು ಹೊಂದಿರುತ್ತವೆ; ಬೀಜ ಒಂದು.

ಜೀವಪರಿಸ್ಥಿತಿ :

1600 ಮತ್ತು 2200ಮೀ. ನಡುವಿನ ಅತಿ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ; ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಸಹ್ಯಾದ್ರಿ ಮತ್ತು ನೀಲಗಿರಿಯಲ್ಲಿ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಅಪರೂಪವಾಗಿ ಈ ಪ್ರಭೇದ ಕಂಡು ಬರುತ್ತದೆ.

ಗ್ರಂಥ ಸೂಚಿ :

Trans. Linn. Soc. London 17:106.1834;Gamble, Fl. Madras 2:751.1998(rep.ed.); Sasidharan, Biodiversity documentation for Kerala- Flowering Plants, part 6:266.2004.

Top of the Page