ಟೀರೋಸ್ಪರ್ಮಮ್ ರೆಟಿಕ್ಯುಲೇಟಮ್ Wt. & Arn. - ಸ್ಟರ್ಕ್ಯೂಲಿಯೇಸಿ

:

Vernacular names : Tamil: ಮಲಯೂರಂ,ಮಲವುರಂ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 20 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಮಿಶ್ರಿತ ಕಂದು ಬಣ್ಣ ಹೊಂದಿದ್ದು, ಉದ್ದ ಸಾಲಿನಲ್ಲಿ ವ್ಯವಸ್ಥಿತಗೊಂಡ ವಾಯುವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ತೆಳುವಾಗಿದ್ದು, ದುಂಡಾಗಿರುತ್ತವೆ, ಬಿಳಿ ಬಣ್ಣದ ದಟ್ಟ ಮೃದು ತುಪ್ಪಳದಿಂದ ಮತ್ತು ನಕ್ಷತ್ರ ರೋಮಗಳಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು,ಉದುರಿಹೋಗುವ ಮಾದರಿಯವುಗಳಾಗಿರುತ್ತವೆ; ತೊಟ್ಟುಗಳು ಅಂದಾಜು0.7 ಸೆಂ.ಮೀ. ಉದ್ದವಿದ್ದು, ದುಂಡಾಗಿರುತ್ತವೆ,ಎಳೆಯದಾಗಿದ್ದಾಗ ನಕ್ಷತ್ರ ರೂಪದ ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗಿರುತ್ತವೆ; ಪತ್ರಗಳು 5 – 14.5 X 2.5 – 7.5 ಸೆಂ.ಮೀ. ಗಾತ್ರ,ಚತುರಸ್ರ,ಬುಗುರಿ ಅಥವಾ ಪಿಟೀಲು ಮಾದರಿಯ ಆಕಾರ ಹೊಂದಿದ್ದುಅಗ್ರದ ಕಡೆಯಲ್ಲಿ ಅನಿಯತವಾಗಿ ದಂತಿತವಾಗಿ ಅಥವಾ ಹಾಲೆಯುಕ್ತವಾಗಿರುತ್ತವೆ, ತುದಿ ಕ್ರಮೇಣ ಚೂಪಾಗುವ ಮಾದರಿಯಲ್ಲಿದ್ದು,ಬುಡ ಅಸಮ್ಮಿತಿಯಾದ ಮಾದರಿ,ಹೃದಯದ ಆಕಾರದಿಂದ ಚೂಪಲ್ಲದವರೆಗಿನ ರೀತಿಯಲ್ಲಿರುತ್ತದೆ, ಅಂಚು ನಯವಾಗಿರುತ್ತದೆ,ಪತ್ರಗಳ ತಳ ಭಾಗ ಬಿಳಿ ಬಣ್ಣದ ಮೃದುತುಪ್ಪಳದಿಂದ ಮತ್ತು ನಕ್ಷತ್ರ ರೂಪದ ರೋಮಗಳಿಂದ ಆವೃತವಾಗಿರುತ್ತದೆ ಹಾಗೂ ತೊಗಲನ್ನು ಹೋಲುವ ಮೇಲ್ಮೈ ಹೊಂದಿರುತ್ತದೆ;ಪತ್ರಗಳು ಬುಡದಲ್ಲಿ3- 5 ನಾಳಗಳ ಸಮೇತವಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 5 - 6 ಜೋಡಿಗಳಿದ್ದು ತಳಭಾಗದಲ್ಲಿ ಪ್ರಮುಖ -ವಾಗಿರುತ್ತವೆ; ಮೂರನೇ ದರ್ಜೆಯ ನಾಳಗಳು ದೃಢವಾಗಿದ್ದು ,ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುವ ಮಾದರಿಯಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಬಿಳಿ ಬಣ್ಣದಲ್ಲಿರುತ್ತವೆ ಮತ್ತು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನ ಗುಚ್ಛಗಳಲ್ಲಿರುತ್ತವೆ, ಹಾಗೂ ಒಂಟಿಯಾಗೂ ಇರುತ್ತವೆ;ಉಪ ಪತ್ರಕಗಳು ಆಳವಾದ ಸೀಳಿಕೆಗಳ ಸಮೇತವಿರುತ್ತವೆ;ಹೂತೊಟ್ಟುಗಳು 0.3 ಸೆಂ.ಮೀ.ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ಕಂದು ಬಣ್ಣ ಹೊಂದಿದ್ದು, 5-ಕೋನಗಳ ಮತ್ತು 5-ಕೋಶಗಳ ಸಮೇತವಿದ್ದು ನಕ್ಷತ್ರ ರೂಪದ ಮೃದುತುಪ್ಪಳದಿಂದ ಕೂಡಿರುತ್ತವೆ; ಪ್ರತಿ ಕೋಶದಲ್ಲಿ 4 ಬೀಜಗಳು ಇರುತ್ತವೆ,ಮತ್ತು ಒಂದು ತುದಿಯಲ್ಲಿ ರೆಕ್ಕೆಯ ಸಮೇತವಿರುತ್ತವೆ.

ಜೀವಪರಿಸ್ಥಿತಿ :

1000 ಮೀ. ವರೆಗಿನ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಉಪಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ,ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡು ಬರುತ್ತದೆ.

ಸ್ಥಿತಿ :

ದುರ್ಬಲ ಸ್ಥಿತಿ(IUCN,2000).

ಗ್ರಂಥ ಸೂಚಿ :

Wt. & Arn., Prodr. 69. 1834; Gamble, Fl. Madras 1: 108. 1997 (re. ed); Sasidharan, Biodiversity documentation for Kerala- Flowering Plants, part 6: 58. 2004.

Top of the Page