ಸೈಖಾಟ್ರಿಯ ನಿಲಗಿರಿಯೆನ್ಸಿಸ್ Deb & Gangop. var. ಎಸ್ಟೆಫಾನ (J. Hk.) Deb & Gangop. - ರೂಬಿಯೇಸಿ

Synonym : (Wt. & Arn.)

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣ ಹೊಂದಿದ್ದು ನಯವಾಗಿರುತ್ತವೆ;ಕಚ್ಚು ಮಾಡಿದ ಜಾಗ ಬಿಳಿ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪ ದುಂಡಾಗಿರುವುದರಿಂದ,ಸಂಕುಚಿತವಾಗಿರುವ ಮಾದರಿಯದಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ, ಕಾವಿನೆಲೆಗಳು ತೊಟ್ಟುಗಳ ನಡುವೆ ಇರುತ್ತವೆ,ಒರೆಯ ಸಮೇತವಿರುತ್ತವೆ ಹಾಗೂ ಉದುರಿದ ನಂತರ ಗುರುತುಗಳನ್ನು ಉಳಿಸುತ್ತವೆ;ತೊಟ್ಟು 0.5 –1.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು,ರೋಮರಹಿತವಾಗಿರುತ್ತವೆ;ಪತ್ರಗಳು 5 -9 X 2 -3.5 ಸೆಂ.ಮೀ. ಗಾತ್ರ ಹೊಂದಿದ್ದು, ಬುಗುರಿಯಿಂದ ಬುಗುರಿ-ಭರ್ಜಿಯವರೆಗಿನ ಆಕಾರ ಹೊಂದಿದ್ದು, ಥಟ್ಟನೆ ಕ್ರಮೇಣ ಚೂಪಾಗುವುದರಿಂದ ಚೂಪಾದ ಮಾದರಿವರೆಗಿನ ತುದಿ, ಒಳಬಾಗಿದ - ತಳಭಾಗಕ್ಕೆ ವಿಸ್ತರಿಸಿದ ಬುಡ, ನಯವಾದ ಮತ್ತು ಹಿಂಸುರುಳಿಗೊಂಡ ಅಂಚು ಹೊಂದಿದ್ದು ರೋಮರಹಿತವಾಗಿರುತ್ತವೆ;ಮಧ್ಯನಾಳ ಮತ್ತು ಎರಡನೇ ದರ್ಜೆಯ ನಾಳಗಳು ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತವೆ;ಎರಡನೇ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿದ್ದು ಅಕ್ಷಾಕಂಕುಳಿನಲ್ಲಿ ಸೂಕ್ಷ್ಮ ಸಹಜೀವಿ ಗೂಡುಗಳ ಸಮೇತವಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿರುತ್ತವೆ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುವ ಕವಲುಗಳು ಮಧ್ಯಾರಂಭಿ ಮಂಜರಿಗಳಾಗಿ ಅಂತ್ಯಗೊಳ್ಳುವ ಮಾದರಿವುಗಳಾಗಿರುತ್ತವೆ; ಹೂಗಳು ಬಿಳಿಬಣ್ಣದವುಗಳಾಗಿದ್ದು,ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಅಂಡಾಕಾರದಲ್ಲಿದ್ದು ಸಪಾಟ ಪೀನ ಮಧ್ಯದ ಆಕಾರದ 2 ಪೈರೀನುಗಳನ್ನೊಳಗೊಂಡಿರುತ್ತವೆ; ಪ್ರತಿ ಪೈರೀನಿನಲ್ಲಿ 1 ಬೀಜವಿರುತ್ತದೆ.

ಜೀವಪರಿಸ್ಥಿತಿ :

2000 ಮತ್ತು 2300 ಮೀ. ನಡುವಿನ ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ನೈರುತ್ಯ ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ಅಣ್ಣಾಮಲೈ ಮತ್ತು ನೀಲಿಗಿರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Taxon 31: 546. 1982; Gamble, Fl. Madras 2: 640. 1993 (re. ed); Sasidharan, Biodiversity documentation for Kerala- Flowering Plants, part 6: 232. 2004.

Top of the Page