ಪ್ರಿಸ್ಮ್ಯಾಟೊಮೆರಿಸ್ ಟೆಟ್ರಾಂಡ್ರ (Roxb.) K. Schum ssp. ಮಲಯಾನ (Ridley) J.T. Johansson - ರೂಬಿಯೇಸಿ

:

Vernacular names : Tamil: Kattuchemengi

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 6 ಮೀ. ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಬಲಿತಾಗ ಜಾಲಬಂಧ ವಿನ್ಯಾಸದ ಸೀಳಿಕಾ ಮಾದರಿಯಲ್ಲಿರುತ್ತದೆ,
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಚತುಷ್ಕೋನಯುಕ್ತವಾಗಿದ್ದು,ರೋಮರಹಿತವಾದ್ದು ಹಳದಿ ಮಿಶ್ರಿತ ಕಂದು ಬಣ್ಣ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ ; ಕಾವಿನೆಲೆಗಳು ವಿಶಾಲವಾಗಿದ್ದು,ತೊಟ್ಟುಗಳ ನಡುವೆ ಇರುತ್ತವೆ ಹಾಗೂ ಉದುರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು 0.7 – 1.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ; ಪತ್ರಗಳು 10 -18 X4- 6 ಸೆಂ.ಮೀ. ಗಾತ್ರ ಹೊಂದಿದ್ದು, ಅಂಡವೃತ್ತದಿಂದ ಬುಗುರಿ ಭರ್ಜಿಯವರೆಗಿನ ಆಕಾರ ಹೊಂದಿದ್ದು,ಕ್ರಮೇಣ ಚೂಪಾಗುವವರೆಗಿನ ತುದಿ, ಒಳಬಾಗಿದ ಬುಡ, ನಯವಾದ ಅಂಚು ಹೊಂದಿರುತ್ತವೆ ಹಾಗೂ ಕಾಗದವನ್ನೋಲುವ ಮೇಲ್ಮೈ ಸಮೇತವಿದ್ದು ತಳಭಾಗದಲ್ಲಿ ರೋಮರಹಿತವಾಗಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು ಅಂದಾಜು 11 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯವುಗಳಾಗಿದ್ದು ಕೆಲವು ಹೂಗಳನ್ನೊಳಗೊಂಡಿರುತ್ತವೆ; ಹೂಗಳು ಬಿಳಿ ಬಣ್ಣದಲ್ಲಿರುತ್ತವೆ ಹಾಗೂ ಸುವಾಸನಾಯುಕ್ತವಾಗಿರುತ್ತವೆ;ಪುಷ್ಪಪಾತ್ರೆಯ ಕೊಳವೆ 0.6 ರಿಂದ 1.8 ಮಿ.ಮೀ. ಉದ್ದವಿರುತ್ತದೆ;ಕೇಸರಗಳ ಸಂಖ್ಯೆ 4.
ಕಾಯಿ / ಬೀಜ : ಫಲಗಳು ಬೆರ್ರಿ ಮಾದರಿಯವುಗಳಾಗಿದ್ದು 1 ರಿಂದ 2 ಕೋಶಗಳ ಸಮೇತ ಇರುತ್ತವೆ; ಬೀಜಗಳ ಸಂಖ್ಯೆ 1 ರಿಂದ 2.

ಜೀವಪರಿಸ್ಥಿತಿ :

ಅಂದಾಜು 600 ಮೀ. ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಒಳಾವರಣದಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ;ಪಶ್ಚಿಮ ಘಟ್ಟದ ಅಣ್ಣಾಮಲೈ.

ಗ್ರಂಥ ಸೂಚಿ :

Johansson, Opera Bot. 94. 5-62. 1987 ; Ayyappan and Parthasarathy, JETB 29. 802. 2005.

Top of the Page