ಫಿಲ್ಲಾಂತಸ್ ಪಾಲಿಫಿಲ್ಲಸ್ Willd. - ಯೂಫೊರ್ಬಿಯೇಸಿ

:

Vernacular names : Tamil: ಕರುಟ್ಟುನೆಲ್ಲಿMalayalam: ಕೃಷ್ಣ ನೆಲ್ಲಿ,ಮನಕಣ್ಣಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಎಲೆಯುದುರು ಮಾದರಿಯ……… ಮೀ. ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಮಿಶ್ರಿತ ಬೂದು ಬಣ್ಣದಲ್ಲಿದ್ದು, ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಹಸಿರು ಛಾಯೆ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಕೋನಯುಕ್ತದಿಂದ ದುಂಡಾಗಿರುವ ಮಾದರಿಯಲ್ಲಿದ್ದು, ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಶಾಶ್ವತವಾಗಿ ಉಳಿಯುವಂತಹವು;ತೊಟ್ಟುಗಳು ಅಂದಾಜು 0.1 ಸೆಂ.ಮೀ. ವರೆಗಿನ ಉದ್ದವಿದ್ದು ರೋಮರಹಿತವಾಗಿರುತ್ತವೆ;ಪತ್ರಗಳು 1 – 1.5 X 0.3 – 0.5 ಸೆಂ.ಮೀ. ಗಾತ್ರ ಹೊಂದಿದ್ದು ಚತುರಸ್ರದ ಆಕಾರ ಹೊಂದಿದ್ದು, ಅಗ್ರದಲ್ಲಿ ಮೊನಚುಮುಳ್ಳನ್ನು ಹೊಂದಿದ ಚೂಪಲ್ಲದ ಮಾದರಿಯ ತುದಿ, ಅಸಮ್ಮಿತಿಯಾದ ಮತ್ತು ಛಿನ್ನಾಗ್ರ ಮಾದರಿಯ ಬುಡ, ಮಂದವಾದ ಮತ್ತು ಹಿಂಚಾಚಿದ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ,ಪತ್ರದ ತಳಭಾಗ ಮಾಸಲು ಬೂದು ಹಸಿರು ಬಣ್ಣದಲ್ಲಿದ್ದು ರೋಮರಹಿತವಾಗಿರುತ್ತವೆ; ಮಧ್ಯನಾಳ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ ಅಥವಾ ಅಸ್ಪಷ್ಟವಾಗಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಮಧ್ಯಾರಂಭಿ ಮಾದರಿಯಲ್ಲಿರುತ್ತವೆ ಅಥವಾ ಹೂಗಳು ಒಂಟಿಯಾಗಿರುತ್ತವೆ;ಹೂಗಳು ಏಕಲಿಂಗಿಗಳಾಗಿದ್ದು ಬಿಳಿ ಬಣ್ಣದವು.
ಕಾಯಿ / ಬೀಜ : ಸಂಪುಟ ಫಲಗಳು ನಯವಾಗಿದ್ದು, 3-ಕೋಶಗಳನ್ನೊಳಗೊಂಡಿರುತ್ತವೆ, ಬುಗುರಿಯ ಆಕಾರದಲ್ಲಿರುತ್ತವೆ,ಕೆನ್ನೀಲಿ ಮಿಶ್ರಿತ ಕಪ್ಪು ಬಣ್ಣದಲ್ಲಿರುತ್ತವೆ;ಬೀಜಗಳ ಸಂಖ್ಯೆ 6.

ಜೀವಪರಿಸ್ಥಿತಿ :

1200 ಮೀ. ಎತ್ತರದ ಪ್ರದೇಶಗಳಲ್ಲಿನ ಒಣ ನಿತ್ಯ ಹರಿದ್ವರ್ಣ ಕಾಡುಗಳ ಅಂಚಿನಲ್ಲಿ ಈ ಸಸ್ಯ ಬೆಳೆಯುತ್ತದೆ.

ವ್ಯಾಪನೆ :

ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದಲ್ಲಿ ಈ ಪ್ರಭೇದ ಅಗಸ್ತ್ಯಮಲೈ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Willd., Sp. Pl. 4: 586. 1781; Gamble, Fl. Madras 2: 1288. 1993 (re.ed.); Sasidharan, Biodiversity documentation for Kerala- Flowering Plants, part 6: 427. 2004.

Top of the Page