ಪರ್ಸಿಯ ಮ್ಯಾಕ್ರಾಂತ (Nees) Kosterm. - ಲಾರೇಸಿ

Synonym : ಮಖೈಲಸ್ ಮ್ಯಾಕ್ರಾಂತ Nees

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ.ವರೆವಿಗೆ ಬೆಳೆಯುವ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ತೆಳು ಕಂದು ಬಣ್ಣದಲ್ಲಿದ್ದು ವಾಯುವಿನಿಮಯ ಬೆಂಡು ರಂಧ್ರ ಸಮೇತವಾಗಿರುತ್ತವೆ;ಕಚ್ಚು ಮಾಡಿದ ನಸುಗೆಂಪು ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿ ಇದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ;ತೊಟ್ಟುಗಳು 1.25 - 2 ಸೆಂ.ಮೀ. ಉದ್ದ ಹೊಂದಿರುತ್ತವೆ;ಪತ್ರಗಳು 7- 20.3 X 3-8 ಸೆಂ.ಮೀ.ವರೆಗಿನ ಗಾತ್ರ ಹೊಂದಿದ್ದು ಆಕಾರದಲ್ಲಿ ವೈವಿಧ್ಯತೆ ಹೊಂದಿರುತ್ತವೆ ಮತ್ತು ಬುಗುರಿ ಅಥವಾ ಅಂಡವೃತ್ತದಿಂದ ಅಂಡವೃತ್ತ-ಚತರಸ್ರದ ವರೆಗಿನ ಆಕಾರಗಳನ್ನು ಹೊಂದಿರುತ್ತವೆ; ತುದಿ ದುಂಡಾಗಿ ಅಥವಾ ಕ್ರಮೇಣ ಚೂಪಾಗಿ ಅಥವಾ ಚೂಪಾಗಿರುತ್ತದೆ, ಬುಡ ಚೂಪಾಗಿ ಅಥವಾ ದುಂಡಾಗಿರುತ್ತದೆ; ಅಂಚು ನಯವಾಗಿರುತ್ತದೆ; ಮೇಲ್ಮೈ ತೊಗಲನ್ನೋಲುವ ರೀತಿಯಲ್ಲಿರುತ್ತದೆ;ಪತ್ರಗಳು ರೋಮರಹಿತವಾಗಿದ್ದು ಮಾಸಿದ ಬೂದು ಹಸಿರು ಬಣ್ಣದ ತಳಭಾಗ ಹೊಂದಿರುತ್ತದೆ; ಹಿಂಡಿದಾಗ ಪತ್ರಗಳು ಸುವಾಸನೆ ಬೀರುತ್ತವೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕಾಲುವೆ ಗೆರೆ ಸಮೇತವಿರುತ್ತದೆ; ಎರಡನೇ ದರ್ಜೆಯ ನಾಳಗಳು 8-12 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಂತರ ಹೊಂದಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುತ್ತವೆ ಮತ್ತು ತೆಳುವಾಗಿರುತ್ತವೆ;ಉನ್ನತ ದರ್ಜೆಯ ನಾಳಗಳು ಪತ್ರಗಳು ತೀರಾ ಸನಿಹವಾಗಿದ್ದು ಜಾಲಬಂಧ ನಾಳ ವಿನ್ಯಾಸ ಹೊಂದಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ತುದಿಯಲ್ಲಿನ ಹರಡಿಕೊಂಡಿರುವ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯಲ್ಲಿರುತ್ತವೆ.
ಕಾಯಿ /ಬೀಜ : ಬೆರ್ರಿ ಗೋಳಾಕಾರದಲ್ಲಿರುತ್ತದೆ ಮತ್ತು ಮಾಗಿದಾಗ ಕಪ್ಪು ಬಣ್ಣ ಹೊಂದಿರುತ್ತದೆ.

ಜೀವಪರಿಸ್ಥಿತಿ :

2000 ಮೀ. ಎತ್ತರದವರೆಗಿನ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಸಸ್ಯ ದಕ್ಷಿಣ ಮಧ್ಯ, ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ವ್ಯಾಪಿಸಿದೆ.

ಗ್ರಂಥ ಸೂಚಿ :

Reiwardtia 6:193.1962; Gamble, Fl. Madras 2:1227.1993(rep.ed.); Sasidharan, Biodiversity documentation for Kerala Flowering Plants, part 6: 401. 2004; Saldanha, Fl.Karnataka 1:71.1984.

Top of the Page