ಪಲಾಕ್ವಿಯಮ್ ರವಿಯೈ Sasidharan and Vink - ಸಪೋಟೇಸಿ

:

Vernacular names : Tamil: ಚೊಪ್ಪಲ,ಪಚೆಂಡಿ,ಪಲಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ನಯವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು,ಎಳೆಯದಾಗಿದ್ದಾಗ ಸೂಕ್ಷ್ಮ ಅಪ್ಪು ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಹಾಲಿನ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕುಡಿಕೊಂಬೆಗಳ ತುದಿಯಲ್ಲಿ ಗುಂಪಾಗಿರುತ್ತವೆ; ಕಾವಿನೆಲೆಗಳು ಸಣ್ಣ ಗಾತ್ರದವುಗಳಾಗಿದ್ದು, ಉದುರಿ ಹೋಗುತ್ತವೆ ಮತ್ತು ಗುರುತುಗಳನ್ನು ಉಳಿಸುತ್ತವೆ;ತೊಟ್ಟುಗಳು 1.5 -2.5 ಸೆಂ.ಮೀ. ಉದ್ದವಿದ್ದು,ದೃಢವಾಗಿರುತ್ತವೆ, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾದಲ್ಲಿರುತ್ತವೆ, ಎಳೆಯದಾಗಿದ್ದಾಗ ಸೂಕ್ಷ್ಮ ಮೃದುತುಪ್ಪಳದಿಂದ ಕೂಡಿರುತ್ತವೆ, ನಂತರ ರೋಮರಹಿತವಾಗಿರುತ್ತವೆ; ಪತ್ರಗಳು 8 -17 X 3.5 –6.2 ಸೆಂ.ಮೀ. ಗಾತ್ರ,ಬುಗುರಿಯಿಂದ ಬುಗುರಿ ಭರ್ಜಿಯ ಆಕಾರ ಹೊಂದಿದ್ದು,ಚೂಪಲ್ಲದ ಅಥವಾ ದುಂಡಾದ ಅಥವಾ ಥಟ್ಟನೆ ಮೊಂಡಾಗ್ರವುಳ್ಳ ಬಾಲರೂಪಿಯಿಂದ ಕ್ರಮೇಣ ಚೂಪಾಗುವ ಮಾದರಿಯ ತುದಿ,ಒಳಬಾಗಿದ ಬುಡ,ನಯವಾದ ಅಂಚು, ತೊಗಲನ್ನು ಹೋಲುವ ಮೇಲ್ಮೈ ಹೊಂದಿದ್ದು ಒಣಗಿದಾಗ ಕಂದು ಬಣ್ಣದಲ್ಲಿರುತ್ತವೆ ಮತ್ತು ರೋಮರಹಿತ -ವಾಗಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 5 - 8 ಜೋಡಿಗಳಿದ್ದು ಪತ್ರದ ಮೇಲ್ಭಾಗದಲ್ಲಿ ಪ್ರಮುಖ -ವಾಗಿರುವುದಿಲ್ಲ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದವು.
ಪುಷ್ಪಮಂಜರಿ / ಹೂಗಳು : ಹೂಗಳು ಕೆನೆ ಬಿಳಿ ಬಣ್ಣದಲ್ಲಿದ್ದು ಅಕ್ಷಾಕಂಕುಳಿನಲ್ಲಿನ 2 ರಿಂದ 8 ಹೂಗಳನ್ನೊಳಗೊಂಡ ಗುಚ್ಛಗಳಲ್ಲಿರುತ್ತವೆ ಅಥವಾ ಹಳೆಯ ಕವಲುಗಳ ಮೇಲೆ ಏಕಾಂಗಿಯಾಗಿರುತ್ತವೆ, ತೊಟ್ಟುಗಳು 1ಸೆಂ.ಮೀ.ವರೆಗಿನ ಉದ್ದವಿರುತ್ತವೆ.
ಕಾಯಿ / ಬೀಜ : ಬೆರ್ರಿ ಬುಗುರಿಯ ಆಕಾರದಲ್ಲಿದ್ದು 2 ಸೆಂ.ಮೀ.ವರೆಗಿನ ಉದ್ದವಿರುತ್ತದೆ ಮತ್ತು ಶಾಶ್ವತವಾಗಿ ಉಳಿಯುವ ಪುಷ್ಪಪಾತ್ರೆಯ ಎಸಳುಗಳ ಸಮೇತವಿರುತ್ತದೆ;;ಬೀಜದ ಸಂಖ್ಯೆ 1 ರಿಂದ 2.

ಜೀವಪರಿಸ್ಥಿತಿ :

700 ಮತ್ತು 800 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳ ಉಪ-ಮೇಲ್ಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಬೇಧ ಅಣ್ಣಾಮಲೈನಲ್ಲಿ ಕಂಡುಬರುತ್ತದೆ.

ಸ್ಥಿತಿ :

ಉಳಿವಿನ ಆತಂಕಕಾರಿ ಸ್ಥಿತಿ (IUCN, 2000).

ಗ್ರಂಥ ಸೂಚಿ :

Sasidharan and Vink., Blumea 35: 385. 1991; Sasidharan, Biodiversity documentation for Kerala- Flowering Plants, part 6: 269. 2004.

Top of the Page