English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಈ ಪ್ರಭೇಧವು 15 ಮೀ ಎತ್ತರದವರೆಗೂ ಬೆಳೆಯುವ ಮರಗಳಾಗಿರುತ್ತವೆ. |
| ಕಾಂಡ ಮತ್ತು ತೊಗಟೆ : | ತೊಗಟೆಯು ಸೂಕ್ಷ್ಮವಾದ ಸೀಳಿಕೆಗಳನ್ನು ಹೊಂದಿದ್ದು ಕಂದು ಬಣ್ಣದ ಕಚ್ಚುಗಳನ್ನೊಳಗೊಂಡಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ದೃಢವಾಗಿದ್ದು, ರೋಮರಹಿತವಾಗಿರುತ್ತವೆ. |
| ಜಿನುಗು ದ್ರವ : | ಜಿನುಗುದ್ರವ ವಿರಳ ಹಾಗೂ ಕಪ್ಪು ಬಣ್ಣದ್ದಾಗಿರುತ್ತದೆ. |
| ಎಲೆಗಳು : | ಎಲೆಗಳು ಸರಳರೂಪಿ. ಪರ್ಯಾಯ ಹಾಗೂ ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಎಲೆತೊಟ್ಟು 1 – 2.7 ಸೆ.ಮೀ ಉದ್ದವಿದ್ದು, ದೃಢ ಹಾಗೂ ರೋಮರಹಿತವಾಗಿದ್ದು ಸಾಮಾನ್ಯವಾಗಿ ತಿರುಚಿಕೊಂಡಿರುತ್ತದೆ; ಪತ್ರ ಚತುರಸ್ರಾಕಾರದಿಂದ ಬುಗುರಿ – ಈಟಿ ಸಮ್ಮಿಶ್ರಾಕಾರದಲ್ಲಿದ್ದು, ಕ್ರಮೇಣ ಚೂಪಾಗುವ ಎಲೆತುದಿ ಮತ್ತು ಚೂಪಾದ ಎಲೆ ಬುಡ, ಅಲೆಯಾಕಾರದ ಅಂಚು, ತೊಗಲಿನಂತಹ ಮೇಲ್ಮೈ ಹೊಂದಿದ್ದು ರೋಮರಹಿತವಾಗಿರುತ್ತದೆ; ಎಲೆಯ ತಳಭಾಗದ ಬೂದು ಹಸಿರು ಬಣ್ಣದಲ್ಲಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿಕೊಂಡಿರುತ್ತದೆ; ಎರಡನೇ ದರ್ಜೆಯ ನಾಳಗಳು 9 ರಿಂದ 25 ಜೋಡಿಗಳಿದ್ದು ಸಮಾಂತರದಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ದುರ್ಬಲವಾಗಿ ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ಸಂಕೀರ್ಣ ಲಿಂಗಿಗಳಾಗಿದ್ದು ಅಕ್ಷಾಕಂಕುಳಿನಲ್ಲಿರುವ, 2 ರಿಂದ 4 ಸೆಮೀ ಉದ್ದದ, ಕಿಲುಬು ಬಣ್ಣದ ಮೃದು ತುಪ್ಪಳವನ್ನು ಹೊಂದಿರುವ ಅನಿಯತ ಮಧ್ಯಭಿಸರ ಪುಷ್ಪಮಂಜರಿಯಲ್ಲಿ ಇರುತ್ತವೆ. |
| ಕಾಯಿ /ಬೀಜ : | ಕಾಯಿಗಳು ಡ್ರೂಪ್ ಮಾದರಿಯಲ್ಲಿದ್ದು 1 X 1.5 ಸೆಂ.ಮೀ. ಗಾತ್ರ, ಧೃವ ಚಪ್ಪಟೆ ಆಕಾರವಿದ್ದು, ಕಾಯಿಗಳ ತುದಿಯಲ್ಲಿ ಸೂಕ್ಷ್ಮವಾದ ಮೊನಚು ಮುಳ್ಳುನ್ನು ಹೊಂದಿರುತ್ತವೆ. ಕಾಯಿಗಳ ಬಣ್ಣ ಕೆಂಪು. ಬೀಜಗಳ ಸಂಖ್ಯೆ ಒಂದು. |