ನಿಯೋಲಮಾರ್ಕಿಯ ಕದಂಬ (Roxb.) Bosser - ರೂಬಿಯೇಸಿ

ಪರ್ಯಾಯ ನಾಮ : ನಾಕ್ಳಿಯ ಕದಂಬ Roxb.;ಆ್ಯಂತೋಸೆಫಾಲಸ್ ಇಂಡಿಕಸ್ A.Rich.

Vernacular names : Tamil: ಆಟ್ಟುತೆಕ್ಕು,ಕಡಾರ್ವಯುರ,ಕಡಂಬು,ಕಧಂಬ ವೃಕ್ಷಂ,ಕೊಡವಾರ, ವೆಳ್ಳ ಕಡಂಬು Malayalam: ಕದಂಬ, ಅರಿಸಿನ ತೇಗ,ಕೊಡ್ಯಾಲ,ಹೆಲ್ತಿಗೆ ಮರ, ನೀರೋಂಜೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ಎತ್ತರದವರೆಗಿನ ಎಲೆಉದುರು ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಬೂದು ಬಣ್ಣದಲ್ಲಿದ್ದು ಚಕ್ಕೆ ರೂಪದಲ್ಲಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ;ಎಳೆಯ ಕಿರುಕೊಂಬೆಗಳು ಚತುಷ್ಕೋನಯುಕ್ತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಭರ್ಜಿಯ ಆಕಾರ ಹೊಂದಿದ್ದು, ತೊಟ್ಟುಗಳ ನಡುವೆ ಇರುತ್ತವೆ ಮತ್ತು ಉದರಿದಾಗ ಗುರುತನ್ನು ಉಳಿಸುತ್ತವೆ;ತೊಟ್ಟು 2 ರಿಂದ 3.5 ಸೆಂ.ಮೀ.ವರೆಗಿನ ಉದ್ದವಿದ್ದು, ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿದ್ದು, ರೋಮರಹಿತವಾಗಿರುತ್ತವೆ;ಪತ್ರಗಳು 16 -28 X 7-13.5 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತ, ಅಂಡವೃತ್ತ-ಚತುರಸ್ರದ ಆಕಾರ ಹೊಂದಿದ್ದು, ಕ್ರಮೇಣ ಚೂಪಾಗುವ ಮಾದರಿಯ ತುದಿ, ಛಿನ್ನಾಗ್ರದಿಂದ ಚೂಪಲ್ಲದ ಮಾದರಿವರೆಗಿನ ಬುಡ, ನಯವಾದ ಅಂಚು ಹೊಂದಿದ್ದು ಎಳೆಯದಾಗಿದ್ದಾಗ ಮೃದುತುಪ್ಪಳದಿಂದ ಕೂಡಿರುತ್ತವೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಉಬ್ಬಿರುತ್ತದೆ;ಎರಡನೇ ದರ್ಜೆಯ ನಾಳಗಳು 10 ರಿಂದ 14 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಹೆಚ್ಚಿನ ಅಂತರ ಹೊಂದಿದ್ದು ಓರೆಯಾಗಿ ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಗೋಳಾಕಾರ ಮಂಜರಿ ಮಾದರಿಯವು;ಹೂಗಳು ತೊಟ್ಟುರಹಿತವಾಗಿದ್ದು ಹಳದಿ ಬಣ್ಣದಲ್ಲಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು ದುಂಡಗಿನ ಗೋಳಾಕಾರದಲ್ಲಿರುತ್ತವೆ,ಪ್ರತಿಯೊಂದು ಸಂಪುಟ ಫಲದಲ್ಲಿ 2 ಮರಿ ಸೋತಫಲಗಳಿರುತ್ತವೆ; ಬೀಜಗಳ ಸಂಖ್ಯೆ ಹಲವಾರು ಇದ್ದು ಕೋನಯುಕ್ತವಾಗಿರುತ್ತವೆ.

ಜೀವಪರಿಸ್ಥಿತಿ :

700 ಮೀ. ಎತ್ತರದ ಪ್ರದೇಶಗಳ ಭಗ್ನಗೊಂಡ ನಿತ್ಯ ಹರಿದ್ವರ್ಣದಿಂದ ಅರೆನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಏಷ್ಯಾ,ಫೆಸಿಫಿಕ್ ಮತ್ತು ಆಸ್ಟ್ರೇಲಿಯ ; ಪಶ್ಚಿಮ ಘಟ್ಟದಲ್ಲಿನ ದಕ್ಷಿಣ, ಮಧ್ಯ ಮತ್ತು ಮಹಾರಾಷ್ಟ್ರ ಸಹ್ಯಾದ್ರಿ ಪ್ರದೇಶಗಳು.

ಗ್ರಂಥ ಸೂಚಿ :

Adansonia ser. 4. 6: 247. 1984; Gamble, Fl. Madras 2: 583. 1993 (re. ed); Sasidharan, Biodiversity documentation for Kerala- Flowering Plants, part 6: 225. 2004; Cooke, Fl. Bombay 1: 579.1903; Almeida, Fl. Maharashtra 3:41. 2001.

Top of the Page