ನಗೇಯಿಯ ವಲ್ಲೀಚಿಯಾನ (C. Presl) Kuntze - ಪೋಡೋಕಾರ್ಪೇಸಿ

:

Vernacular names : Tamil: ನಿರಂಬಲಿ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಸ್ಥಿತಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 30 ಮೀ. ಎತ್ತರದವರೆಗಿನ ಅನಾವೃತ ಬೀಜಕಾರಿ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದ ಛಾಯೆಯನ್ನು ಹೊಂದಿರುತ್ತದೆ ಮತ್ತು ಅನಿಯತವಾಗಿ ಸುಲಿಯುವ ಮಾದರಿಯಲ್ಲಿರುತ್ತದೆ.
ಎಲೆಗಳು : ಹುರುಪೆ ಎಲೆಗಳು ಅಭಿಮುಖಿ ಅಥವಾ ಉಪ-ಅಭಿಮುಖಿಗಳಾಗಿದ್ದು ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿದ್ದು,ಉಪ-ತೊಟ್ಟುಗಳ ಸಮೇತವಿದ್ದು ರೋಮ ರಹಿತವಾಗಿರುತ್ತವೆ ಹಾಗೂ 10 – 15 X 3-5 ಸೆಂ.ಮೀ. ಗಾತ್ರದಲ್ಲಿದ್ದು, ಸಂಕುಚಿತ ಅಂಡವೃತ್ತ,ಅಂಡವೃತ್ತ-ಭರ್ಜಿಯ ಆಕಾರ ಹೊಂದಿದ್ದು ಸಂಕುಚಿತವಾಗಿ ಚೂಪಾದ ತುದಿ,ಒಳಬಾಗಿದ ಬುಡ,ನಯವಾದ ಅಂಚು,ಹೆಚ್ಚಿನ ಸಂಖ್ಯೆಯ ಸಮಾನಾತರದಲ್ಲಿರುವ ನಾಳಗಳನ್ನು ಹೊಂದಿರುತ್ತವೆ.
ಪುಷ್ಪಮಂಜರಿ / ಹೂಗಳು : ಬೀಜಕಣಕೋಶಗಳು ಶಂಖುವಿನ ಆಕಾರದಲ್ಲಿರುತ್ತವೆ;ಪರಾಗರೇಣುಗಳನ್ನೊಳಗೊಂಡ ಶಂಖುಗಳು ಅಕ್ಷಾಕಂಕುಳಿನಲ್ಲಿರುತ್ತವೆ ಹಾಗೂ ಒಂಟಿಯಾಗಿರುತ್ತವೆ;ಬೀಜವನ್ನೊಳಗೊಂಡ ಬೀಜಾಣುಪತ್ರಗಳು ತುದಿಯಲ್ಲಿದ್ದು ಒಂಟಿಯಾಗಿರುತ್ತವೆ;ತೊಟ್ಟು ಅಂದಾಜು 1 ಸೆಂ.ಮೀ. ಉದ್ದವಿರುತ್ತದೆ.
ಕಾಯಿ / ಬೀಜ : ಬೀಜ ಹಸಿರಾಗಿದ್ದು ಡ್ರೂಪ್ ಮಾದರಿಯವುಗಳಾಗಿದ್ದು,ಅಂಡದ ಆಕಾರದಲ್ಲಿದ್ದು receptacle ಮೇಲೆ ಆಸೀನವಾಗಿರುತ್ತದೆ.

ಜೀವಪರಿಸ್ಥಿತಿ :

1000 ಮತ್ತು 1400 ಮೀ. ನಡುವಿನ ಮಧ್ಯಮ ಎತ್ತರದ ಪ್ರದೇಶಗಳಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳ ಮೇಲ್ಛಾವಣಿಯಲ್ಲಿಈ ಮರಗಳು ಬೆಳೆಯುತ್ತವೆ.

ವ್ಯಾಪನೆ :

ಇಂಡೋಮಲೇಸಿಯ; ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿಯಲ್ಲಿ ಈ ಪ್ರಭೇದ ಕಂಡು ಬರುತ್ತದೆ.

ಸ್ಥಿತಿ :

ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಏಕೈಕ ಅನಾವೃತ ಬೀಜಕಾರಿ ಮರಗಳು

Top of the Page