English   Kannada   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಹಲವು ಸಂಧರ್ಭಗಳಲ್ಲಿ ದಂಟು ಬೇರುಗಳನ್ನೊಳಗೊಂಡ,20 ಮೀ. ವರೆಗಿನ ಎತ್ತರದ ಮರಗಳು. |
| ಕಾಂಡ ಮತ್ತು ತೊಗಟೆ : | ತೊಗಟೆ ಕಂದು ಛಾಯೆ ಹೊಂದಿದ್ದು ಸೂಕ್ಷ್ಮ ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತದೆ ಹಾಗೂ ಚಕ್ಕೆಯೇಳುವ ಮಾದರಿಯಲ್ಲಿರುತ್ತದೆ;ಕಚ್ಚು ಮಾಡಿದ ಜಾಗ ಕೆಂಪು ಛಾಯೆಯನ್ನು ಹೊಂದಿರುತ್ತದೆ. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕವಲುಗಳುಗಳು ಸುತ್ತು ಜೋಡನೆಯಲ್ಲಿದ್ದು ಮುಖ್ಯ ಕಾಂಡದ ಲಂಬ ರೇಖೆಗೆ ಸಮಕೋನದಲ್ಲಿರುತ್ತವೆ; ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ. |
| ಜಿನುಗು ದ್ರವ : | ತೊಗಟೆಯನ್ನು ಕೆತ್ತಿದಾಗ ಕೆಂಪು ಬಣ್ಣದ ವಿಫುಲವಾದ ಸಸ್ಯ ರಸವಿರುತ್ತದೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ ; ತೊಟ್ಟುಗಳು 1.5 ರಿಂದ 4 ಸೆಂ.ಮೀ. ಉದ್ದ ಹೊಂದಿದ್ದು ಕಾಲುವೆಗೆರೆ ಸಮೇತವಾಗಿರುತ್ತವೆ ಮತ್ತು ರೋಮರಹಿತವಾಗಿರುತ್ತವೆ;ಪತ್ರಗಳು 12 - 25 X 4 - 12 ಸೆಂ.ಮೀ.ವರೆಗಿನ ಗಾತ್ರವಿದ್ದು ಸಂಕುಚಿತ ಚತುರಸ್ರದಿಂದ ಚತುರಸ್ರ , ಸಂಕುಚಿತ ಅಂಡವೃತ್ತದಿಂದ ಭರ್ಜಿಯವರೆಗಿನ ಆಕಾರಗಳ ವೈವಿಧ್ಯತೆ ಹೊಂದಿದ್ದು, ಮೊಂಡಾಗ್ರವುಳ್ಳ ಚೂಪಾದ ಅಥವಾ ಚೂಪಲ್ಲದ ತುದಿ, ಚೂಪಾದ ಅಥವಾ ದುಂಡಾದ ಬುಡ,ನಯವಾದ ಅಂಚು, ದಪ್ಪವಾಗಿರುವ ತೊಗಲನ್ನೋಲುವ ಮಾದರಿಯ ಮೇಲ್ಮೈ ಹೊಂದಿರುತ್ತವೆ,ಪತ್ರಗಳು ಮೇಲ್ಭಾಗದಲ್ಲಿ ಹೊಳಪಿನಿಂದ ಕೂಡಿದ್ದು ತಳಭಾಗ ಬಿಳಿಯದಾದ ಮಾಸಲು ಬೂದು ಹಸಿರು ಬಣ್ಣದಲ್ಲಿರುತ್ತವೆ ;ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 10 - 18 ಜೋಡಿಗಳಿದ್ದು ಪತ್ರಗಳ ಮೇಲ್ಭಾಗದಲ್ಲಿ ಮುದ್ರೆ ಒತ್ತಿದಂತಿರುತ್ತವೆ;ಮೂರನೇ ದರ್ಜೆಯ ನಾಳಗಳು ಅಸ್ಪಷ್ಟವಾಗಿರುತ್ತವೆ, ಸ್ಪಷ್ಟವಾಗಿ ಕಂಡಲ್ಲಿ ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿದ್ದು ಎಲೆದಿಂಡಿಗೆ ಅಡ್ಡವಾಗಿ ಕೂಡುತ್ತವೆ. |
| ಪುಷ್ಪಮಂಜರಿ / ಹೂಗಳು : | ಹೂಗಳು ಏಕ ಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಬಿಳಿ ಬಣ್ಣ ಹೊಂದಿರುತ್ತವೆ;ಗಂಡು ಹೂಗಳು ಅಕ್ಷಾಕಂಕುಳಿನಲ್ಲಿರುವ,10 ರಿಂದ 20 ಹೂಗಳನ್ನೊಳಗೊಂಡ ಪೀಠಛತ್ರ ಪುಷ್ಪ ಮಂಜರಿಯಲ್ಲಿರುತ್ತವೆ;ಹೆಣ್ಣು ಹೂಗಳು ತೊಟ್ಟುರಹಿತವಾಗಿದ್ದು ಗುಚ್ಛಗಳಲ್ಲಿರುತ್ತವೆ. |
| ಕಾಯಿ / ಬೀಜ : | ಸಂಪುಟ ಫಲ ಅಂಡಾಕೃತಿಯಲ್ಲಿದ್ದು 6 X 4 ಸೆಂ.ಮೀವರೆಗಿನ ಗಾತ್ರ ಹೊಂದಿದ್ದು, ದಟ್ಟ ಮೃದುಗೂದಲುಗಳಿಂದ ಕೂಡಿರುತ್ತವೆ; ಬೀಜಗಳು ಒಂದಿದ್ದು ಅಂಡಾಕಾರದಲ್ಲಿದ್ದು ಕಡುಗೆಂಪು ಬಣ್ಣದ ಆಳವಾದ ಸೀಳಿಕೆಗಳನ್ನುಳ್ಳ ಪತ್ರೆಯಿಂದ ಆವೃತವಾಗಿರುತ್ತವೆ. |