English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ಅಂದಾಜು 12ಮೀ ಎತ್ತರದವರೆವಿಗೆ ಬೆಳೆಯುವ ಸಣ್ಣ ಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ತೆಳುವಾಗಿದ್ದು, ಗುಂಡಾಕಾರ ಹೊಂದಿದ್ದು ರೋಮರಹಿತವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳ, ಪರ್ಯಾಯ ಜೋಡನಾವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ. ಎಲೆತೊಟ್ಟು ಕಾಲುಗೆರೆ ಸಮೇತವಿದ್ದು, 0.4 ರಿಂದ 0.6 ಸೆಂ.ಮೀ. ಉದ್ದಹೊಂದಿದ್ದು ರೋಮಹಿತವಾಗಿರುತ್ತವೆ. ಎಲೆಪತ್ರಗಳು 4-10 × 2-3.8ಸೆಂ.ಮೀ. ಗಾತ್ರವಿರುತ್ತವೆ. ಪತ್ರಗಳು ಅಂಡಾಕಾರದಿಂದ ಅಂಡವೃತ್ತಾಕಾರದಲ್ಲಿದ್ದು ಮೊಂಡುಚೂಪುಳ್ಳ ಅಥವಾ ಮೊಂಡಾದ ಅಗ್ರವುಳ್ಳ ಇಕ್ಕಟ್ಟಾದ ಕ್ರಮೇಣ ಚೂಪಾಗುವ ತುದಿಯನ್ನು ಹೊಂದಿರುತ್ತವೆ. ಪತ್ರದ ಬುಡ ಚೂಪಾಗಿದುದರಿಂದ ಬೆಣೆಯಾಕಾರದವರೆಗಿನ ಮಾದರಿಯಲ್ಲಿರುತ್ತವೆ ಹಾಗೂ ಕೆಲವು ವೇಳೆ ಗುಂಡಾಗಿಯೂ ಇರುತ್ತವೆ. ಪತ್ರದ ಮೇಲ್ಮೈ ಉಪತೊಗಲಿನ ತರಹವಿದ್ದು, ರೋಮರಹಿತವಾಗಿದ್ದು ಹೊಳಪನ್ನು ಹೊಂದಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಚಪ್ಪಟೆಯಾಗಿರುತ್ತದೆ; ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿದ್ದು ತೆಳುವಾಗಿರುತ್ತದೆ ಹಾಗೂ ಕೊಂಚಮಟ್ಟಿನ ಆರೋಹಣ ಸ್ಥಿತಿಲ್ಲಿರುತ್ತವೆ. |
| ಪುಷ್ಪಮಂಜರಿ/ಹೂಗಳು : | ಹೂಗಳು ಒಂಟಿಯಾಗಿ ಅಥವಾ 2 ರಿಂದ 3 ಹೂಗಳು ಎಲೆಗೆ ಅಭಿಮುಖಿಗಳಾದ ಸರಳ ಮಧ್ಯಾರಂಭಿ ಪುಷ್ಪ ಮಂಜರಿಯಲ್ಲಿರುತ್ತವೆ. ಹೂತೊಟ್ಟು ನಸುಗೆಂಪು ಛಾಯೆಯುಳ್ಳ ಹಳದಿ ಬಣ್ಣ ಹಾಗೂ 0.3 ರಿಂದ 0.5 ಸೆಂ.ಮೀ. ಉದ್ದವಾಗಿರುತ್ತದೆ. |
| ಕಾಯಿ /ಬೀಜ : | ಒಂದರಿಂದ ಮೂರು ಬೀಜಗಳ ಸಮೇತವಿದ್ದು ಬೆರ್ರಿಗಳು ಸಾಮೂಹಿಕವಾಗಿರುತ್ತವೆ. ಮತ್ತು ತೀರ ಚಿಕ್ಕದಾದ ತೊಟ್ಟು ಹೊಂದಿದ್ದು ಗೋಳಾಕಾರ ಅಥವಾ ಬೀಜಗಳ ನಡುವೆ ಕಚ್ಚುಳ್ಳ ವರ್ತುಲ ಸ್ಥಂಭಾಕೃತಿಯ ಆಕಾರದಲ್ಲಿದ್ದು ಹಳದಿ ಬಣ್ಣದ ದಟ್ಟಮೃದು ತುಪ್ಪಳದಿಂದ ಕೂಡಿರುತ್ತದೆ. |