ಮಿಲಿಯೂಸಎರಿಯೋಕಾರ್ಪ್ Dunn - ಅನೋನೇಸಿ

Synonym : ಮಿಲಿಯೂಸಇಂಡಿಕ Leschen. ex DC. var. ಟೊಮೆಂಟೋಸ J.Hk. & Thoms. Dunn.

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಹೆಚ್ಚು ಕವಲುಗಳ ಸಹಿತವಾದ, 3 ರಿಂದ 4 ಮೀ ಎತ್ತರದವರೆಗೂ ಬೆಳೆಯುವ ಪೊದೆಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕವಲುಗಳು ಮತ್ತು ಕಿರುಕೊಂಬೆಗಳು ದುಂಡಾಕಾರದಲ್ಲಿದ್ದು ಬಿರುಗೂದಲು ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳ, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು, ಕಾಂಡದ ಎರಡೂ ಕಡೆ ಎದುರು ಬದರಿನ ಲಂಬಸಾಲಿನಲ್ಲಿರುತ್ತವೆ.; ಎಲೆ ತೊಟ್ಟುಗಳು 0.1 ರಿಂದ 0.2ಸೆಂ.ಮೀ. ಉದ್ದ ಹಾಗೂ ದಟ್ಟ ಮೃದುತುಪ್ಪಳ ಸಹಿತವಾಗಿರುತ್ತದೆ. ಎಲೆ ಪತ್ರ 4.5-9 × 2.4-2.8ಸೆಂ.ಮೀ. ಗಾತ್ರ ಅಂಡ ಚತುರಸ್ರಾಕಾರದಿಂದ ಅಂಡವೃತ್ತ-ಚತುರಸ್ರಾಕಾರದ ಆಕಾರ ಹೊಂದಿದ್ದು, ಮೊಂಡಾದ ಅಗ್ರವನ್ನುಳ್ಳ ಕ್ರಮೇಣ ಚೂಪಾಗುವ ತುದಿ, ಗುಂಡಾಕಾರದ ಬುಡವನ್ನು ಹೊಂದಿರುತ್ತದೆ; ಎಳೆಯ ಎಲೆಗಳು ಮೇಲ್ಭಾಗ ಮತ್ತು ತಳಭಾಗ ಮೃದುತುಪ್ಪಳ ಸಹಿತವಾಗಿರುತ್ತವೆ; ಎರಡನೇ ದರ್ಜೆಯ ನಾಳಗಳು 10 ರಿಂದ 12 ಜೋಡಿಗಳಿದ್ದು ತೆಳುವಾಗಿರುತ್ತವೆ; ತೃತೀಯ ದರ್ಜೆಯ ನಾಳಗಳು ಜಾಲಬಂಧ ನಾಳ ವಿನ್ಯಾದಲ್ಲಿರುತ್ತವೆ.
ಪುಷ್ಪಮಂಜರಿ/ಹೂಗಳು : ಹೂಗಳು ನಸುಗೆಂಪು ಬಣ್ಣ ಹೊಂದಿದ್ದು ಅಕ್ಷಾಕಂಕುಳಿನಲ್ಲಿ ಒಂಟಿಯಾಗಿರುತ್ತವೆ.
ಕಾಯಿ /ಬೀಜ : ಎಲೆಬೀಜಸಹಿತವಾದ ಬೆರ್ರಿಗಳು ಗೊಂಚಲಿನಲ್ಲಿರುತ್ತವೆ. ಬೆರ್ರಿಗಳು ಓರೆಯಾದ ಅಂಡವೃತ್ತ ಅಥವಾ ಧೀರ್ಘ ಚತುರಸ್ರಾಕಾರದಲ್ಲಿದ್ದು ; ಬೆರ್ರಿಗಳು ಸಣ್ಣತೊಟ್ಟು ಸಮೇತ ಅಥವಾ ತೊಟ್ಟುರಹಿತವಾಗಿದ್ದು, ತುದಿಯಲ್ಲಿ ಸೂಕ್ಷ್ಮವಾದ ಮೊನಚನ್ನು ಹೊಂದಿದ್ದು, ಮೃದುತುಪ್ಪಳ ಸಮೇತವಿರುತ್ತದೆ.

ಜೀವಪರಿಸ್ಥಿತಿ :

ಮಧ್ಯಮ ಎತ್ತರವುಳ್ಳ ನಿತ್ಯಹರಿದ್ವರ್ಣದ ಕಾಡುಗಳ ಕೆಳಛಾವಣಿಯಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಈ ಸಸ್ಯ ಪಶ್ಚಿಮ ಘಟ್ಟದ ಪ್ರದೇಶಗಳಿಗೆ ಸೀಮಿತವಾಗಿದ್ದು ದಕ್ಷಿಣ ಹಾಗೂ ಮಧ್ಯ ಸಹ್ಯಾದ್ರಿ ಪ್ರದೇಶದಲ್ಲಿ (ಕೊಡಗು ಪ್ರದೇಶದಲ್ಲಿ) ಕಂಡು ಬರುತ್ತವೆ.

ಗ್ರಂಥ ಸೂಚಿ :

Gamble, Fl. Pres. Madras 1: 21.1915; Gamble, Fl. Madras 1: 21.1997 (re.ed); Sasidharan, Biodiversity documentation for Kerala- Flowering Plants, part 6: 18. 2004.

Top of the Page