English   Kannada   Malayalam   Tamil   
ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ
| ಪ್ರಕೃತಿ : | ದೊಡ್ಡ ಗಾತ್ರದ ಪೊದೆಗಳು ಅಥವಾ ಅಂದಾಜು 4 ಮೀ.ಎತ್ತರವುಳ್ಳ ಕಿರುಮರಗಳು. |
| ಕವಲುಗಳು ಮತ್ತು ಕಿರುಕೊಂಬೆಗಳು : | ಕಿರುಕೊಂಬೆಗಳು ತೆಳುವಾಗಿದ್ದು 4 ಕೋನಗಳನ್ನು ಹೊಂದಿದ್ದು ರೋಮರಹಿತ -ವಾಗಿರುತ್ತವೆ. |
| ಎಲೆಗಳು : | ಎಲೆಗಳು ಸರಳವಾಗಿದ್ದು, ಕತ್ತರಿಯಾಕಾರದ ಅಭಿಮುಖ ಜೋಡನಾ ವ್ಯವಸ್ಥೆಯ -ಲ್ಲಿರುತ್ತವೆ; ತೊಟ್ಟುಗಳು 0.2 ಸೆಂ.ಮೀ. ರೋಮರಹಿತವಾಗಿರುತ್ತವೆ; ಪತ್ರಗಳು 6.5-1.5 X 1.5 –2.8 ಸೆಂ.ಮೀ ಗಾತ್ರ ಹೊಂದಿದ್ದು ಭರ್ಜಿಯ ಆಕಾರದಲ್ಲಿದ್ದು ಸಂಕುಚಿತವಾಗಿ ಕ್ರಮೇಣವಾಗಿ ಚೂಪಾಗುತ್ತಾ ಹೋಗುವ ತುದಿ ಮತ್ತು ದುಂಡಾದ ಬುಡವನ್ನು ಹೊಂದಿರುತ್ತವೆ;ಅಂಚು ನಯವಾಗಿರುತ್ತದೆ;ಮೇಲ್ಮೈ ರೋಮರಹಿತವಾಗಿದ್ದು ತೊಗಲ್ಲ -ನ್ನೋಲುವ ಮಾದರಿಯಲ್ಲಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಅಂತರ ಅಂಚಿನ ನಾಳವನ್ನೊಳಗೊಂಡು ಕಾಲುವೆಗೆರೆ ಸಮೇತವಾಗಿರುತ್ತದೆ; ಎರಡನೇ ಮತ್ತು ಮೂರನೇ ದರ್ಜೆಯ ನಾಳಗಳು ಅಸ್ಪಷ್ಟ. |
| ಪುಷ್ಪಮಂಜರಿ/ಹೂಗಳು : | ಹೂಗಳು ಕಿರಿದಾದ ವೃಂತವನ್ನುಳ್ಳ ಹಾಗೂ ಪಾರ್ಶ್ವದಲ್ಲಿರುವ ಮಧ್ಯಾರಂಭಿ ಪುಷ್ಪಮಂಜರಿಗಳಲ್ಲಿನ ಗುಚ್ಛಗಳಲ್ಲಿರುತ್ತವೆ; ಪುಷ್ಪದಳಗಳು ನೀಲಿ ಬಣ್ಣ ಹೊಂದಿದ್ದು ಪುಷ್ಪ ಪಾತ್ರೆ ಕೆಂಪು ಬಣ್ಣದಲ್ಲಿರುತ್ತದೆ. |
| ಕಾಯಿ /ಬೀಜ : | ಬೆರ್ರಿ ಕಪ್ಪು ಬಣ್ಣ ಹೊಂದಿದ್ದು ಒಂದು ಬೀಜವನ್ನೊಳಗೊಂಡಿರುತ್ತದೆ. |