ಮೀಲಿಯೋಸ್ಮ ಪಿನ್ನೇಟ (Roxb.) Walp. ssp. ಬಾರ್ಬ್ಯುಲೇಟ (Cufod.) Beus. - ಸಾಬಿಯೇಸಿ

ಪರ್ಯಾಯ ನಾಮ : ಮೀಲಿಯೋಸ್ಮ ಪಿನ್ನೇಟ( Roxb.)Walp. ssp.ಆರ್ನಾಟ್ಟಿಯಾನ (Wt.)Beus; ಮೀಲಿಯೋಸ್ಮ ಆರ್ನಾಟ್ಟಿಯಾನ (Wt.) Walp.

Vernacular names : Tamil: ಕಲವಿ,ಕಲ್ಯಾವಿMalayalam: ಹುಳಿಮ ಕಾಯಿ,ಹುಳಿಮುಕ್ಕಿ.

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 18 ಮೀ ಎತ್ತರದವರೆಗಿನ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಂದು ಬಣ್ಣದಲ್ಲಿದ್ದು ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿರುತ್ತವೆ;ಕಚ್ಚು ಮಾಡಿದ ಜಾಗ ಕಿತ್ತಳೆ ಬಣ್ಣದ ಚುಕ್ಕೆಗಳ ಸಮೇತವಿರುವ ನಸುಗೆಂಪು ಬಣ್ಣ ಹೊಂದಿರುತ್ತವೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದೃಢವಾಗಿದ್ದು, ಕೋನಯುಕ್ತದಿಂದ ಉಪ-ದುಂಡಾದವರೆಗಿನ ಆಕಾರ ಹೊಂದಿದ್ದು ವಾಯು ವಿನಿಮಯ ಬೆಂಡು ರಂಧ್ರಗಳ ಸಮೇತವಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸಂಯುಕ್ತ ಹಾಗೂ ಅಸಮ ಗರಿ ರೂಪಿ ಮಾದರಿಯದಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಅಕ್ಷದಿಂಡು ದುಂಡಾಗಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ ಮತ್ತು ಉಬ್ಬಿದ ಬುಡದ ಸಮೇತವಿರುತ್ತದೆ;ಉಪತೊಟ್ಟುಗಳು 0.2 ರಿಂದ 1.5 ಸೆಂ.ಮೀ. ಉದ್ದಹೊಂದಿದ್ದು ತುಕ್ಕು ಬಣ್ಣದ ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಉಪಪತ್ರಗಳು ಒಂದು ಅಗ್ರದಲ್ಲಿನ ಉಪಪತ್ರದ ಸಮೇತವಿದ್ದು 3 ರಿಂದ 7 ಜೋಡಿಗಳಿರುತ್ತವೆ ಮತ್ತು ಉಪಅಭಿಮುಖಿ ಅಥವಾ ಅಭಿಮುಖಿಗಳಾಗಿರುತ್ತವೆ, 6.5 -15 X 2.5 - 5 ಸೆಂ.ಮೀ ಗಾತ್ರ, ಭರ್ಜಿಯಿಂದ ಅಂಡ-ಚತುರಸ್ರದ ಆಕಾರ, ಬರಬರುತ್ತಾಕ್ರಮೇಣ ಚೂಪಾಗುವವರೆಗಿನ ರೀತಿಯ ತುದಿ,ಅಸಮ್ಮಿತಿಯಾದ ಮತ್ತು ಚೂಪಾದ ಅಥವಾ ದುಂಡಾದ ಬುಡ ಹೊಂದಿರುತ್ತವೆ,ಅಂಚು ನಯವಾಗಿರುತ್ತದೆ,ಕೆಲವು ವೇಳೆ ಹೆಚ್ಚಿನ ಅಂತರವುಳ್ಳ ದಂತಿತ ಮಾದರಿಯಲ್ಲಿರುತ್ತದೆ,ಮತ್ತು ತೆಳುವಾದ ತೊಗಲನ್ನೋಲುವ ಮೇಲ್ಮೈ ಹೊಂದಿರುತ್ತವೆ, ಉಪಪತ್ರಗಳ ತಳಭಾಗದ ನಾಳಗಳ ಮೇಲೆ ದಟ್ಟಮೃದು ತುಪ್ಪಳವಿರುತ್ತದೆ;ಮಧ್ಯನಾಳ ಮೇಲ್ಭಾಗದಲ್ಲಿ ಕಾಲುವೆಗೆರೆಯನ್ನು ಹೊಂದಿರುತ್ತದೆ;ಎರಡನೇ ದರ್ಜೆಯ ನಾಳಗಳು ಆರೋಹಣ ಮಾದರಿಯವುಗಳಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ಒರಟಾದ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿಗಳು ತುದಿಯಲ್ಲಿನ ಮತ್ತು ಅಕ್ಷಾಕಂಕುಳಿನಲ್ಲಿನ ಪುನರಾವೃತ್ತಿಯಾಗಿ ಕವಲೊಡೆಯುವ ಮಾದರಿಯವುಗಳಾಗಿದ್ದು,ದಟ್ಟ ಮೃದು ತುಪ್ಪಳದಿಂದ ಕೂಡಿರುತ್ತವೆ; ಹೂಗಳು ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ ಹಾಗೂ ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಡ್ರೂಪ್ಗಳು ಗೋಳಾಕಾರ ಹೊಂದಿದ್ದು, 0.5 ಸೆಂ.ಮೀ ಅಡ್ಡಗಲತೆಯನ್ನು ಹೊಂದಿರುತ್ತವೆ; ಬೀಜಗಳ ಸಂಖ್ಯೆ 1 ಇದ್ದು ನಯವಾಗಿರುತ್ತವೆ.

ಜೀವಪರಿಸ್ಥಿತಿ :

800 ಮತ್ತು 1800 ಮೀ. ನಡುವಿನ ಮಧ್ಯಮ ಮತ್ತು ಅತಿ ಎತ್ತರದ ಪ್ರದೇಶಗಳ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಇಂಡೋಮಲೇಸಿಯ ಮತ್ತು ಚೈನ;ಪಶ್ಚಿಮ ಘಟ್ಟದ ದಕ್ಷಿಣ ಸಹ್ಯಾದ್ರಿ ಮತ್ತು ಮಧ್ಯ ಸಹ್ಯಾದ್ರಿ(ಪಾಲಕ್ಕಾಡು,ನೀಲಗಿರಿ ಮತ್ತು ಬಾಬಾಬುಡನ್ ಗಿರಿ ಬೆಟ್ಟಗಳು) ಪ್ರದೇಶಗಳಲ್ಲಿ ಈ ಪ್ರಭೇದ ಕಂಡುಬರುತ್ತದೆ.

ಗ್ರಂಥ ಸೂಚಿ :

Dassan. & Fosb., Rev. Handb. Fl. Ceylon 3: 384.1981; Gamble, Fl. Madras 1: 256. 1997 (re. ed); Sasidharan, Biodiversity documentation for Kerala- Flowering Plants, part 6: 110. 2004; ; Saldanha, Fl. Karnataka 1: 102. 1984.

Top of the Page