ಮರ್ಗಾರಿಟಾರಿಯ ಇಂಡಿಕ (Dalz.) Airy Shaw - ಯೂಫೋರ್ಬಿಯೇಸಿ

ಪರ್ಯಾಯ ನಾಮ : ಪ್ರೋಸೋರಸ್ ಇಂಡಿಕ Dalz.

Vernacular names : Tamil: ಮಲ-ಎಚಿಲ್

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 25 ಮೀ. ವರೆಗೆ ಬೆಳೆಯುವ ಎಲೆಯುದುರುವ ಮಾದರಿಯ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕೆಂಪು ಮಿಶ್ರಿತ ಕಂದು ಬಣ್ಣ ಹೊಂದಿದ್ದು ಅವ್ಯವಸ್ಥಿತವಾಗಿ ಸುಲಿಯುವ ಚಕ್ಕೆಗಳ ಸಮೇತವಾಗಿರುತ್ತದೆ;ಕಚ್ಚು ಮಾಡಿದ ಜಾಗ ಕೆನ್ನೀಲಿ ಬಣ್ಣ ಹೊಂದಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತವೆ ಮತ್ತು ವಾಯುವಿನಿಮಯ ಬೆಂಡು ರಂಧ್ರ ಸಮೇತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಜೋಡನಾ ವ್ಯವಸ್ಥೆಯಲ್ಲಿದ್ದು ಕಾಂಡದ ಎರಡೂ ಕಡೆ ಎದುರು ಬದರಿನ ಲಂಬ ಸಾಲಿನಲ್ಲಿರುತ್ತವೆ;ಕಾವಿನೆಲೆಗಳು ಪಾರ್ಶ್ವದಲ್ಲಿದ್ದು ಈಟಿಯಾಕಾರದಲ್ಲಿರುತ್ತವೆ; ತೊಟ್ಟುಗಳು 0.5-0.8 ಸೆಂಮೀ. ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರದಲ್ಲಿರುತ್ತವೆ ಹಾಗು ರೋಮರಹಿತವಾಗಿರುತ್ತವೆ;ಪತ್ರಗಳು 5.3-13 ´ 3 – 5.6 ಸೆಂ.ಮೀ ಗಾತ್ರ ಹೊಂದಿದ್ದು ಅಂಡವೃತ್ತ ,ಅಂಡವೃತ್ತ –ಅಂಡದಿಂದ ಬುಗುರಿಯವರೆಗಿನ ಆಕಾರ ಹೊಂದಿರುತ್ತವೆ, ಮೊಂಡಾದ ಅಗ್ರವುಳ್ಳ ಕ್ರಮೇಣ ಚೂಪಾಗುವ ತುದಿ, ಅಸಮರೂಪಿಯಾದ ಬುಡ ಮತ್ತು ನಯವಾದ ಅಂಚನ್ನುಹೊಂದಿರುತ್ತವೆ,ಪತ್ರದ ಮೇಲ್ಭಾಗ ಹೊಳಪಿನಿಂದ ಕೂಡಿದ್ದು ತಳಭಾಗ ಮಾಸಲು ಬೂದು ಬಣ್ಣದಿಂದ ಕೂಡಿರುತ್ತದೆ ಮತ್ತು ರೋಮರಹಿತವಾಗಿರುತ್ತದೆ; ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಕೊಂಚ ಉಬ್ಬಿರುತ್ತದೆ, ಎರಡನೇ ದರ್ಜೆಯ ನಾಳಗಳು 6 ರಿಂದ 10 ಜೋಡಿಗಳಿದ್ದು ತೆಳುವಾಗಿರುತ್ತವೆ;ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ಗಂಡು ಮತ್ತು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿರುತ್ತವೆ ಮತ್ತು ಹಸಿರು ಬಣ್ಣ ಹೊಂದಿರುತ್ತವೆ ಗಂಡು ಹೂಗಳು ಅಕ್ಷಾಕಂಕುಳಿನಲ್ಲಿನ ಗುಛ್ಛಗಳಲ್ಲಿರುತ್ತವೆ,ತೊಟ್ಟು ಅಂದಾಜು 0.5 ಸೆಂ.ಮೀ. ಉದ್ದವಿರುತ್ತವೆ, ಹೆಣ್ಣು ಹೂಗಳು ಒಂಟಿಯಾಗಿ ಅಥವಾ ಕೆಲವು ಹೂಗಳು ಒಟ್ಟಾಗಿರುತ್ತವೆ, ತೊಟ್ಟು 1 ರಿಂದ 2 ಸೆಂ.ಮೀ. ಉದ್ದವಿರುತ್ತವೆ.
ಕಾಯಿ / ಬೀಜ : ಸಂಪುಟ ಫಲಗಳು 0.8 ಸೆಂ.ಮೀ. ಅಡ್ಡಗಲತೆ ಹೊಂದಿದ್ದು ಅದುಮಿದ ಗೋಳಾಕಾರದಲ್ಲಿದ್ದು, 3-ಹಾಲೆಗಳನ್ನು ಹೊಂದಿರುತ್ತವೆ, ಬೀಜಗಳು ಸಂಖ್ಯೆ3 ಇದ್ದು 3-ಕೋನಯುಕ್ತವಾಗಿದ್ದು ಪತ್ರೆಯ ಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳ ಅರೆ ನಿತ್ಯ ಹರಿದ್ವರ್ಣದಿಂದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮೇಲ್ಛಾವಣಿ ಮರಗಳಾಗಿ ಈ ಪ್ರಭೇಧ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯದಿಂದ ಆಸ್ಟ್ರೇಲಿಯ ;ಪಶ್ಚಿಮ ಘಟ್ಟದಲ್ಲಿ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಭೇದ ವ್ಯಾಪಿಸಿದೆ.

ಗ್ರಂಥ ಸೂಚಿ :

Gamble, Fl.Madras 2:1294.1993(re.ed.);Sasidharan, Biodiversity documentation for Kerala- Flowering Plants, part 6, 424.2004; Saldanha, Fl. Karnataka 2: 154.1996.

Top of the Page