ಮಲ್ಲೋಟಸ್ ಸ್ಟೆನಾಂತಸ್ Muell.-Arg. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಪ್ಪಟೆಯಾಗಿದ್ದು ಮೃದುತುಪ್ಪಳದಿಂದ ಕೂಡಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ ಮತ್ತು ಕತ್ತರಿಯಾಕಾರದ ಜೋಡನಾ ವ್ಯವಸ್ತೆಯಲ್ಲಿದ್ದು ಅಸಮ ಜೋಡಿಗಳನ್ನೊಳಗೊಂಡಿರುತ್ತವೆ; ಕಾವಿನೆಲೆಗಳು ಕಿರಿದಾಗಿದ್ದು ಮೃದುತುಪ್ಪಳದಿಂದ ಕೂಡಿದ್ದು ಉದುರಿಹೋಗುವ ಮಾದರಿಯಲ್ಲಿರುತ್ತವೆ;ತೊಟ್ಟುಗಳು 0.2 ರಿಂದ 1.8 ಸೆಂ.ಮೀ.ಉದ್ದವಿದ್ದು ದುಂಡಾಗಿರುತ್ತವೆ ಮತ್ತು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಹಾಗೂ ಮೃದುತುಪ್ಪಳದಿಂದ ಕೂಡಿರುತ್ತವೆ ; ಪತ್ರಗಳು 5.5 -14 X 2 - 6 ಸೆಂ. ಮೀ. ಗಾತ್ರದಲ್ಲಿದ್ದು,ಸಂಕುಚಿತವಾದ ಅಂಡವೃತ್ತ- ವಜ್ರದ ಆಕಾರದಿಂದ ಬುಗರಿ-ಭರ್ಜಿಯವರೆಗಿನ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಬಾಲರೂಪಿಯಾಗಿದ್ದು ಬುಡ ಚೂಪಾಗಿರುತ್ತದೆ ಕೆಲವು ವೇಳೆ ದುಂಡಾಗಿರುವುದರಿಂದ ದುಂಡಗಿನ ತುದಿಯಲ್ಲಿಕಚ್ಚುಳ್ಳ ಮಾದರಿಯವುಗಳಾಗಿರುತ್ತವೆ;ಅಂಚು ಅನಿಯತವಾದ ವಂಕಿ-ದಂತಿತ ಮಾದರಿಯಲ್ಲಿರುತ್ತದೆ;ಪತ್ರದ ಮೇಲ್ಮೈ ಉಪ-ತೊಗಲನ್ನೋಲುವ ರೀತಿಯಲ್ಲಿರುತ್ತದೆ;ಪತ್ರಗಳ ತಳ ಭಾಗ ರೋಮರಹಿತವಾಗಿರುತ್ತದೆ ಮತ್ತು ಅಂಟುಸಹಿತವಾದ ಹಳದಿ ಬಣ್ಣದ ರಸಗ್ರಂಥಿಗಳನ್ನು ಹೊಂದಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 5-10 ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿದ್ದು ತುದಿಯಲ್ಲಿನ ಅಥವಾ ಅಕ್ಷಾಕಂಕುಳಿನಲ್ಲಿನ ಮೃದುತುಪ್ಪಳವುಳ್ಳ ತೆಳುವಾದ ಪುಷ್ಪಮಂಜರಿಯಲ್ಲಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು 3-ಹಾಲೆಗಳನ್ನು ಹೊಂದಿರುತ್ತವೆ ಮತ್ತು ಹಳದಿ ಬಣ್ಣದ ಪ್ರಕಾಶ ಬೇಧ್ಯ ಮಚ್ಚೆ ಗಳು ಹಾಗೂ ಕಿರಿದಾದ, ದೃಢವಾದ ,ಗಡುಸಾದ ತರಕಲು ಗುಬುಟುಗಳ ಸಮೇತವಿರುತ್ತವೆ;ಬೀಜಗಳು 3.

ಜೀವಪರಿಸ್ಥಿತಿ :

350 ಮತ್ತು1800 ಮೀ. ನಡುವಿನ ಎತ್ತರದ ಪ್ರದೇಶಗಳ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯ ಮರಗಳಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಮತ್ತು ದಕ್ಷಿಣ ಮಹಾರಾಷ್ಟ್ರದ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Linnaea 34:191.1865;; Gamble, Fl.Madras 2:1322.1993 (rep.ed.) ; Sasidharan, Biodiversity documentation for Kerala – Flowering plants, part 6, 424.2004;Saldanha, Fl.Karnataka 2:152.1996.

Top of the Page