ಮಲ್ಲೋಟಸ್ ಬೆಡ್ಡೋಮಿಯೈ J. Hk. - ಯೂಫೊರ್ಬಿಯೇಸಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 5 ಮೀ. ಎತ್ತರದವರೆಗೆ ಬೆಳೆಯುವ ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ಚಪ್ಪಟೆಯಾಗಿರುತ್ತದೆ ಮತ್ತು ಸೂಕ್ಷ್ಮ ಮೃದು ತುಪ್ಪಳ ಹೊಂದಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು ಅಭಿಮುಖ – ಕತ್ತರಿಯಾಕಾರದ ಜೋಡನಾ ವ್ಯವಸ್ಥೆಯಲ್ಲಿದ್ದು ಅಸಮ ಜೋಡಿಗಳನ್ನೊಳಗೊಂಡಿರುತ್ತವೆ; ಕಾವಿನೆಲೆಗಳು ಉದುರಿಹೋಗುತ್ತವೆ; ತೊಟ್ಟುಗಳು 1.5 ಸೆಂ.ಮೀ.ಉದ್ದವಿದ್ದು ದುಂಡಾಗಿರುತ್ತವೆ ಮತ್ತು ಎರಡೂ ತುದಿಯಲ್ಲಿ ಊದಿಕೊಂಡಿರುತ್ತವೆ ಹಾಗೂ ಮೃದುತುಪ್ಪಳದಿಂದ ಕೂಡಿರುತ್ತವೆ; ಪತ್ರಗಳು 7 -24 X 2.5 – 7.5 ಸೆಂ. ಮೀ. ಗಾತ್ರದಲ್ಲಿದ್ದು,ಸಂಕುಚಿತವಾದ ಅಂಡವೃತ್ತ- ವಜ್ರದ ಆಕಾರ ಹೊಂದಿರುತ್ತವೆ; ಪತ್ರಗಳ ತುದಿ ಉದ್ದವಾದ ಕ್ರಮೇಣವಾಗಿ ಚೂಪಾದುದರಿಂದ ಬಾಲರೂಪಿಯವರೆಗಿನ ಮಾದರಿಯಲ್ಲಿರುತ್ತದೆ; ಬುಡ ಚೂಪಾಗಿರುತ್ತದೆ ಅಥವಾ ಸ್ವಲ್ಪಮಟ್ಟಿಗೆ ಒಳಬಾಗಿದ ಮಾದರಿಯಲ್ಲಿರುತ್ತದೆ;ಅಂಚು ವಂಕಿಯ ರೀತಿಯ ದಂತಿತವಾಗಿರುತ್ತದೆ; ಪತ್ರದ ಮೇಲ್ಭಾಗ ರೋಮರಹಿತವಾಗಿದ್ದು ತಳಭಾಗ ಹಳದಿ ಬಣ್ಣದ ಅಂಟು ರಸ ಗ್ರಂಥಿಗಳ ಸಮೇತಇರುತ್ತವೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಕ್ರಮೇಣವಾಗಿ ಬಾಗುವ ಜೋಡಿಗಳಿರುತ್ತವೆ; ಮೂರನೇ ದರ್ಜೆಯ ನಾಳಗಳು ಓರೆಯಾಗಿದ್ದು ಎಲೆ ದಿಂಡಿಗೆ ಅಡ್ಡವಾಗಿ ಕೂಡುವಂತವು.
ಪುಷ್ಪಮಂಜರಿ/ಹೂಗಳು : ಹೂಗಳು ಏಕಲಿಂಗಿಗಳಾಗಿರುತ್ತವೆ ; ಪುಷ್ಪಮಂಜರಿ ಅಕ್ಷಾಕಂಕುಳಿನಲ್ಲಿನ ಅಥವಾ ತುದಿಯಲ್ಲಿನ ಸರಳ ಅಥವಾ ಕವಲೊಡೆದ ಕದಿರುಮಂಜರಿ ಮಾದರಿಯಲ್ಲಿರುತ್ತದೆ.
ಕಾಯಿ /ಬೀಜ : ಸಂಪುಟ ಫಲಗಳು 2 ರಿಂದ 3 ಮರಿಫಲಗಳನ್ನು ಹೊಂದಿದ್ದು ಉದ್ದನೆಯ ಹಾಗೂ ಮೃದುವಾದ ಮುಳ್ಳುಗಳನ್ನು ಹೊಂದಿರುತ್ತವೆ.

ಜೀವಪರಿಸ್ಥಿತಿ :

150 ಮತ್ತು 1000 ಮೀ. ನಡುವಿನ ಎತ್ತರದ ಪ್ರದೇಶಗಳ ತೇವಾಂಶದಿಂದ ಕೂಡಿದ ನಿತ್ಯಹರಿದ್ವರ್ಣ ಕಾಡುಗಳ ಒಳಛಾವಣಿಯಲ್ಲಿ ಅಪರೂಪವಾಗಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತವಾದ ಈ ಪ್ರಭೇದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ ಪ್ರದೇಶಗಳಲ್ಲಿ ಕಂಡುಬರುತ್ತದೆ.

ಗ್ರಂಥ ಸೂಚಿ :

Hooker, Fl. Brit. India 5:438.1887; Gamble, Fl.Madras 2:1323.1993 (rep.ed.) ;Sasidharan, Biodiversity documentation for Kerala – Flowering plants, part 6, 423.2004;Saldanha, Fl.Karnataka 2:151.1996.

Top of the Page