ಮಧುಕ ನೀರಿಯಿಫೋಲಿಯ (Moon) H.J. Lam. - ಸಪೋಟೇಸಿ

ಪರ್ಯಾಯ ನಾಮ : ಬ್ಯಾಸ್ಸಿಯ ಮಲಬಾರಿಕ Bedd.

Vernacular names : Tamil: ಅಟ್ಟುಇಲುಪ್ಪೈ,ನೀರಿರಿಪ್ಪ,ವಲ್ಲಂಗಿ,ಎಲುಪ್ಪ,ಕಟ್ಟಿಲುಪ್ಪ ,ಅಟ್ಟಿಲಿಪ್ಪMalayalam: ಹುಳಿನಾನೆಲೆ,ಹೊಳೆ ಹಿಪ್ಪೆ,ನನಲೆ

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಅಂದಾಜು 10 ಮೀ ಎತ್ತರದವರೆಗಿನ ಸಣ್ಣ ಗಾತ್ರದ ಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ಕಡು ಕಂದು ಬಣ್ಣ ಹೊಂದಿದ್ದು,ಅನಿಯತವಾಗಿ ಚಕ್ಕೆಯುಕ್ತವಾಗಿರುತ್ತದೆ;ಕಚ್ಚು ಮಾಡಿದ ಜಾಗ ನಸುಗೆಂಪು .
ಕವಲುಗಳು ಮತ್ತು ಕಿರುಕೊಂಬೆಗಳು : ಕಿರುಕೊಂಬೆಗಳು ದುಂಡಾಗಿದ್ದು ಎಳೆಯದಾಗಿದ್ದಾಗ ದಟ್ಟ ಮೃದು ತುಪ್ಪಳದಿಂದ ಕೂಡಿದ್ದು ನಂತರ ರೋಮರಹಿತವಾಗುತ್ತವೆ.
ಜಿನುಗು ದ್ರವ : ಸಸ್ಯ ಕ್ಷೀರ ಹಾಲಿನ ಬಿಳಿ ಬಣ್ಣ ಹೊಂದಿದ್ದು ವಿಫುಲವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ಕಾವಿನೆಲೆಗಳು ಜೋಡಿಯಾಗಿರುತ್ತವೆ,ಪಾರ್ಶ್ವದಲ್ಲಿರುತ್ತವೆ ಮತ್ತು ಉದುರು ಗುರುತುಗಳನ್ನು ಉಳಿಸುತ್ತವೆ; ತೊಟ್ಟು 0.6 – 2 ಸೆಂ.ಮೀ.ವರೆಗಿನ ಉದ್ದವಿದ್ದು,ಅಡ್ಡ ಸೀಳಿದಾಗ ಸಪಾಟ ಪೀನಮಧ್ಯದ ಆಕಾರದಲ್ಲಿರುತ್ತದೆ,ರೋಮರಹಿತವಾಗಿರುತ್ತದೆ; ಪತ್ರಗಳು 7 -25 X 2.5 –6.5 ಸೆಂ.ಮೀ. ಗಾತ್ರ,ಸಾಮಾನ್ಯವಾಗಿ ಬುಗುರಿ ಭರ್ಜಿಯಿಂದ ಬುಗುರಿಯವರೆಗಿನ ಆಕಾರ ಹೊಂದಿದ್ದು,ಕೆಲವು ವೇಳೆ ಸಂಕುಚಿತ ಚತುರಸ್ರದ ಆಕಾರ ಹೊಂದಿರುತ್ತವೆ,ತುದಿ ದುಂಡಾಗಿ ಅಥವಾ ಚೂಪಲ್ಲದ ಮಾದರಿಯಲ್ಲಿದ್ದು, ಬೆಣೆಯಾಕಾರದ ಬುಡ,ನಯವಾದ ಮತ್ತು ಹಿಂಸುರುಳಿಗೊಂಡ ಅಂಚು,ತೊಗಲನ್ನೋಲುವ ಮೇಲ್ಮೈ ಹೊಂದಿದ್ದು, ಮೇಲ್ಭಾಗ ಹೊಳಪನ್ನು ಹೊಂದಿರುತ್ತದೆ;ಮಧ್ಯನಾಳ ಪತ್ರದ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ; ಎರಡನೇ ದರ್ಜೆಯ ನಾಳಗಳು 15 –25 ಜೋಡಿಗಳಿದ್ದು ಹೆಚ್ಚೂ ಕಡಿಮೆ ಸಮಾಂತರದಲ್ಲಿರುತ್ತವೆ; ಮೂರನೇ ದರ್ಜೆಯ ನಾಳಗಳು ವಿಶಾಲ ಜಾಲ ಬಂಧ ನಾಳ ವಿನ್ಯಾಸದಲ್ಲಿರುತ್ತವೆ.
ಪುಷ್ಪಮಂಜರಿ / ಹೂಗಳು : ಹೂಗಳು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿದ್ದು,ಅಕ್ಷಾಕಂಕುಳಿನಲ್ಲಿನ ಗುಚ್ಛಗಳಲ್ಲಿರುತ್ತವೆ; ತೊಟ್ಟು ಅಂದಾಜು 0.8 ಸೆಂ.ಮೀ. ಉದ್ದವಿರುತ್ತದೆ.
ಕಾಯಿ / ಬೀಜ : ಬೆರ್ರಿ ಮಾಂಸಲವಾಗಿದ್ದು ಅಂಡವೃತ್ತದ ಆಕಾರದಲ್ಲಿದ್ದು ಕೊಕ್ಕಿನ ಸಮೇತವಿರುತ್ತದೆ; ಬೀಜದ ಸಂಖ್ಯೆ 1, ಬಣ್ಣ ಕಂದು.

ಜೀವಪರಿಸ್ಥಿತಿ :

1200 ಮೀ. ಎತ್ತರದವರೆಗಿನ ಪ್ರದೇಶಗಳ ಹೊಳೆ ಮತ್ತು ನದಿಗಳ ಬಳಿ ಈ ಪ್ರಭೇದ ಬೆಳೆಯುತ್ತದೆ.

ವ್ಯಾಪನೆ :

ದಕ್ಷಿಣ ಭಾರತ ಮತ್ತು ಶ್ರೀಲಂಕಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿಯಲ್ಲಿ ಈ ಪ್ರಬೇಧ ವ್ಯಾಪಿಸಿದೆ.

ಗ್ರಂಥ ಸೂಚಿ :

Lam., Bull. Jard. Bot. Buitenz. Ser. 3, 7. 182, 265. 1925; Gamble, Fl. Madras 2: 763. 1993 (re.ed.); Sasidharan, Biodiversity documentation for Kerala- Flowering Plants, part 6: 268. 2004; Saldanha, Fl. Karnataka 1: 331.1984; Cooke, Fl. Bombay 2: 93.1908.

Top of the Page