ಲೋಫೋಪೆಪೆಟಾಮ್ ವೈಟಿಯಾನಮ್ Arn. - ಸೆಲಾಸ್ಟ್ರೇಸಿ

ಕನ್ನಡದ ಪ್ರಾದೇಶಿಕ ಹೆಸರು : ಬಲ್ಬಲೆ, ಬೌರಾಲಪಾಲೆ, ಪಾಲ್ಮನಿ

English   Kannada   Malayalam   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : 40 ಮೀ ಎತ್ತರದವರೆಗೆ ಬೆಳೆಯುವ ದೊಡ್ಡಮರಗಳು.
ಕಾಂಡ ಮತ್ತು ತೊಗಟೆ : ತೊಗಟೆ ನಯವಾಗಿದ್ದು ಹಳದಿ ಮಿಶ್ರಿತ ಬಿಳಿ ಬಣ್ಣದಲ್ಲಿರುತ್ತವೆ;ಗೀಚಿದಾಗ ಉಜ್ವಲ ಹಳದಿ ಬಣ್ಣ ಹೊಂದಿರುತ್ತದೆ;ಕಚ್ಚು ಮಾಡಿದ ಜಾಗದಲ್ಲಿ ಕೆಂಪಾಗಿರುತ್ತದೆ.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ದುಂಡಾಗಿದ್ದು ರೋಮರಹಿತವಾಗಿರುತ್ತದೆ.
ಎಲೆಗಳು : ಎಲೆಗಳು ಸರಳವಾಗಿದ್ದು ಸಾಮಾನ್ಯವಾಗಿ ಅಭಿಮುಖಿಗಳಾಗಿದ್ದು ಪರ್ಯಾಯಜೋಡನಾ ವ್ಯವಸ್ಥೆಯಲ್ಲಿರುತ್ತವೆ;ಎಲೆ ತೊಟ್ಟುಗಳು 0.8 ರಿಂದ 2.5 ಸೆಂ.ಮೀ ಉದ್ದವಿದ್ದು ದುಂಡಾಗಿರುತ್ತವೆ;ಎಲೆಪತ್ರ 8 – 26 X 4 - 10 ಸೆಂ.ಮೀ ಗಾತ್ರ,ಅಂಡವೃತ್ತ-ಚತುರಸ್ರ ಆಕಾರದಲ್ಲಿದ್ದು, ,ಕ್ರಮೇಣ ಚೂಪಾಗುವ ತುದಿ, ದುಂಡಾದ ಬುಡ ಹೊಂದಿದ್ದು ನಯವಾದ ಅಂಚುಗಳನ್ನು ಹೊಂದಿರುತ್ತವೆ, ಎಲೆಗಳು ಕಾಗದವನ್ನು ಹೋಲುವ ಅಥವಾ ಉಪತೊಗಲನ್ನು ಹೋಲುವ ಮಾದರಿಯವು;ಎರಡನೇ ದರ್ಜೆಯ 6 ರಿಂದ 13 ನಾಳಗಳಿದ್ದು, ಅಡ್ಡವಾದ ಜಾಲಬಂಧ ವಿನ್ಯಾಸ ಹೊಂದಿದ ಮೂರನೇ ದರ್ರಜೆಯ ನಾಳಗಳಿರುತ್ತವೆ.
ಪುಷ್ಪಮಂಜರಿ/ಹೂಗಳು : ಪುಷ್ಪಮಂಜರಿ ಕವಲೊಡೆಯುವ ಮಾದರಿಯವು; ಹೂಗಳ ಪುಷ್ಪದಳಗಳು ಮಸುಕು ಕೆಂಪು ವರ್ಣದಲ್ಲಿದ್ದು ಪುಷ್ಪಬಿಂಬ ಕೆಂಪು ಬಣ್ಣದಲ್ಲಿರುತ್ತದೆ..
ಕಾಯಿ /ಬೀಜ : ಸಂಪುಟ ಫಲಗಳು 3 ರಿಂದ 4 ಕೋನಗಳ ಸಮೇತವಿದ್ದು ಧೀರ್ಘವಾದ ಉದ್ದಹೊಂದಿರುತ್ತದೆ ಬೀಜಗಳು ಬಹುಸಂಖ್ಯೆಯಲ್ಲಿದ್ದು, ಬಿಳಿ ಬಣ್ಣ ಹೊಂದಿದ್ದು, ಕಾಗದರೂಪಿ ರೆಕ್ಕೆಸಮೇತವಾಗಿರುತ್ತವೆ.

ಜೀವಪರಿಸ್ಥಿತಿ :

900 ಮೀ ಎತ್ತರದ ಪ್ರದೇಶಗಳವರೆಗಿನ ಕಡಿಮೆ ಎತ್ತರವುಳ್ಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಹೊರಹೊಮ್ಮಿ ಬೆಳೆಯುವ ಪ್ರಭೇದವಾಗಿಯೂ ಮತ್ತು ಆಗಾಗ್ಗೆ ಜೌಗು ಮತ್ತು ಝರಿಗಳ ಬಳಿ ಸಾಮಾನ್ಯವಾಗಿ ಈ ಪ್ರಭೇದ ಕಂಡು ಬರುತ್ತದೆ.

ವ್ಯಾಪನೆ :

ಇಂಡೋಮಲೇಶಿಯಾ;ಪಶ್ಚಿಮ ಘಟ್ಟದ ದಕ್ಷಿಣ ಮತ್ತು ಮಧ್ಯ ಸಹ್ಯಾದ್ರಿ.

ಗ್ರಂಥ ಸೂಚಿ :

Ann. Nat. Hist.3.151.1839; Gamble,Fl.Madras1:205.1997(re.ed.); Sasidharan, Biodiversity documentation for Kerala-Flowering Plants, part 6:97.2004;Saldanha, Fl.Karnataka 2:96.1996;Cooke, Fl. Bombay 1:230.1902

Top of the Page