ಲಿಟ್ಸಿಯ ವೈಟಿಯಾನ (Nees) J.Hk. - ಲಾರೇಸಿ

:

English   Kannada   Tamil   

ಸಸ್ಯದ ವೈಜ್ಞಾನಿಕ ವಿವರ ಜೀವಪರಿಸ್ಥಿತಿ ವ್ಯಾಪನೆ ಗ್ರಂಥ ಸೂಚಿ

ಸಸ್ಯದ ವೈಜ್ಞಾನಿಕ ವಿವರ :

ಪ್ರಕೃತಿ : ಮರಗಳು.
ಕವಲುಗಳು ಮತ್ತು ಕಿರುಕೊಂಬೆಗಳು : ಎಳೆಯ ಕಿರುಕೊಂಬೆಗಳು ಉಪದುಂಡಾಗಿದ್ದು, ದಟ್ಟ ಮೃದು ತುಪ್ಪಳ ಸಹಿತವಾಗಿರುತ್ತವೆ.
ಎಲೆಗಳು : ಎಲೆಗಳು ಸರಳವಾಗಿದ್ದು, ಪರ್ಯಾಯ ಮತ್ತು ಸುತ್ತು ಜೋಡನಾ ವ್ಯವಸ್ಥೆಯಲ್ಲಿರುತ್ತವೆ; ತೊಟ್ಟುಗಳು 2.5 ಸೆಂ.ಮೀ. ವರೆಗಿನ ಉದ್ದವಿದ್ದು ಅಡ್ಡ ಸೀಳಿದಾಗ ಸಪಾಟ ಪೀನ ಮಧ್ಯದ ಆಕಾರ ಹೊಂದಿರುತ್ತವೆ,ದಟ್ಟ ಮೃದುತುಪ್ಪಳ ಸಹಿತವಾಗಿರುತ್ತವೆ;ಪತ್ರಗಳು 4.5-15 X 2-9 ಸೆಂ.ಮೀ. ಗಾತ್ರ ಹೊಂದಿದ್ದು ಅಂಡವೃತ್ತದ ಆಕಾರ ಹೊಂದಿದ್ದು, ಚೂಪಾದುದರಿಂದ ಒಳಬಾಗಿದ ಮಾದರಿವರೆಗಿನ ಅಥವಾ ಅಪರೂಪವಾಗಿ ಚೂಪಲ್ಲದ ತುದಿ, ಚೂಪಾದ ಬುಡ, ನಯವಾದ ಮತ್ತು ಸ್ವಲ್ಪಮಟ್ಟಿಗೆ ಹಿಂಚಾಚಿದ ಅಂಚು ಹೊಂದಿದ್ದು ತಳಭಾಗದಲ್ಲಿ ದಟ್ಟ ಮೃದುತುಪ್ಪಳ ಸಮೇತವಿರುತ್ತವೆ, ಪತ್ರಗಳ ಮೇಲ್ಮೈ ಉಪತೊಗಲನ್ನೋಲುವ ಮಾದರಿಯಲ್ಲಿರುತ್ತವೆ; ಮಧ್ಯ ನಾಳ ಮೇಲ್ಭಾಗದಲ್ಲಿ ಮೇಲೆದ್ದಿರುತ್ತದೆ;ಎರಡನೇ ದರ್ಜೆಯ ನಾಳಗಳು 6 ರಿಂದ 8 ಜೋಡಿಗಳಿರುತ್ತವೆ;ಮೂರನೇ ದರ್ಜೆಯ ನಾಳಗಳು ಲಂಬ ರೇಖೆಗೆ ಸಮಕೋನದಲ್ಲಿದ್ದು, ಎಲೆಯ ದಿಂಡಿಗೆ ಅಡ್ಡವಾಗಿ ಕೂಡುತ್ತವೆ.
ಪುಷ್ಪಮಂಜರಿ / ಹೂಗಳು : ಪುಷ್ಪಮಂಜರಿ ಉಪಪೀಠಛತ್ರ ಮಂಜರಿಗಳಾಗಿದ್ದು ಮಧ್ಯಾಭಿಸರ ರೀತಿಯಲ್ಲಿ ಜೋಡಿತಗೊಂಡಿರುತ್ತವೆ; ವೃಂತ 1.5 ಸೆಂ.ಮೀ. ಉದ್ದವಿರುತ್ತದೆ;ಹೂಗಳು ಏಕಲಿಂಗಿಗಳಾಗಿದ್ದು ತೊಟ್ಟುರಹಿತವಾಗಿರುತ್ತವೆ.
ಕಾಯಿ / ಬೀಜ : ಬೆರ್ರಿಗಳು ಚತುಸ್ರಾಕಾರದಲ್ಲಿದ್ದು, 1.5 ಸೆಂ.ಮೀ. ಅಡ್ಡಗಲತೆ ಹೊಂದಿರುತ್ತವೆ,ವೃಧ್ಧಿಸಿದ ಪರಿದಳ ಮಂಡಲ ಮಧ್ಯದವರೆಗಿರುತ್ತದೆ.

ಜೀವಪರಿಸ್ಥಿತಿ :

2000 ಮೀ. ಗಿಂತ ಹೆಚ್ಚಿನ ಪ್ರದೇಶಗಳ ಅರೆ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಆಗಾಗ್ಗೆ ಈ ಪ್ರಭೇದ ಕಂಡುಬರುತ್ತದೆ.

ವ್ಯಾಪನೆ :

ಪಶ್ಚಿಮ ಘಟ್ಟಕ್ಕೆ ಸೀಮಿತ.

ಗ್ರಂಥ ಸೂಚಿ :

Kew Bull. 132. 1925; J. Econ. Taxon. Bot. Vol. 29 (4) 828-830.

Top of the Page